ಕಳವಾದ ಮೊಬೈಲ್ ತಕ್ಷಣವೇ ಲಾಕ್: ಮೊಬೈಲ್ ಕಳ್ಳರ ಹೆಡೆಮುರಿ ಕಟ್ಟಲು ರಾಜ್ಯ ಖಾಕಿ ಪಡೆ ರೆಡಿ

ಕಳವಾದ ಮೊಬೈಲ್ ತಕ್ಷಣವೇ ಲಾಕ್: ಮೊಬೈಲ್ ಕಳ್ಳರ ಹೆಡೆಮುರಿ ಕಟ್ಟಲು ರಾಜ್ಯ ಖಾಕಿ ಪಡೆ ರೆಡಿ

ನ್ಯೂಸ್ ಆ್ಯರೋ : ಮೊಬೈಲ್ ಕಳ್ಳರನ್ನು ತಕ್ಷಣವೇ ಪತ್ತೆಹಚ್ಚಲು ರಾಜ್ಯ ಪೊಲೀಸ್ ಇಲಾಖೆ ಮಾಸ್ಟರ್‌ ಪ್ಲ್ಯಾನ್ ಮಾಡಿದ್ದು, ಇದೀಗ ಮೊಬೈಲ್ ಕಳುವಾದ ಕೂಡಲೇ ಆದನ್ನು ಲಾಕ್‌ ಮಾಡುವ ವ್ಯವಸ್ಥೆಯನ್ನು ಜಾರಿಗೆ ಮಾಡಿದೆ.

ಈಗಾಗಲೆ ಬೆಂಗಳೂರು ನಗರದಲ್ಲಿ ಪ್ರಯೋಗಿಕವಾಗಿ ಈ ನಿಯಮವನ್ನು ಜಾರಿಗೆ ಮಾಡಿದ್ದು, ಶೀಘ್ರದಲ್ಲೇ ರಾಜ್ಯವ್ಯಾಪಿ ವಿಸ್ತರಿಸುವಂತೆ ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಪ್ರತಿನಿತ್ಯ 25 ರಿಂದ 30 ಮೊಬೈಲ್ ಕಳ್ಳತನವಾಗುತ್ತಿದ್ದು, ಇದಕ್ಕೆ ತಡೆ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇದೀಗ ಕೇಂದ್ರ ಗೃಹ ಸಚಿವಾಲಯ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಆಪ್ ಪೋರ್ಟಲ್ ತೆರೆದಿದೆ. ಇದೀಗ ಎಲ್ಲ ಮೊಬೈಲ್ ಕಂಪನಿ ಮತ್ತು ಟೆಲಿಕಾಂ ಕಂಪನಿಗಳೊಂದಿಗೆ ಮೊಬೈಲ್ ಬ್ಲಾಕಿಂಗ್ ಕುರಿತು ಒಪ್ಪಂದ ಮಾಡಿಕೊಂಡಿದೆ.

ಇದೀಗ ಕಳ್ಳತನ, ದರೋಡೆ, ಸುಲಿಗೆಗೆ ಒಳಗಾದ ಮೊಬೈಲ್​ಗಳನ್ನು ಲಾಕ್ ಮಾಡುವ ತಂತ್ರಜ್ಞಾನವನ್ನು ಪೊಲೀಸ್ ಇಲಾಖೆ ನಿರ್ವಹಿಸಿ, ತಕ್ಷಣವೇ ಖದೀಮರನ್ನು ಪತ್ತೆಹಚ್ಚುತ್ತಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ ಪ್ರಯೋಗಿಕವಾಗಿ ಜಾರಿಗೆ ತಂದಿದ್ದು, ಇದೀಗ ರಾಜ್ಯ ವ್ಯಾಪಿ ವಿಸ್ತರಿಸಲಾಗಿದೆ.

ಮೊಬೈಲ್ ಕಳ್ಳತನವಾದ ಕೂಡಲೇ ಪೊಲೀಸ್ ಇಲಾಖೆಯ ಇ-ಲಾಸ್ಟ್​ನಲ್ಲಿ ದೂರು ದಾಖಲಿಸಬೇಕು. ಇ-ಲಾಸ್ಟ್‌ನಲ್ಲಿ ದೂರು ದಾಖಲಾಗುತ್ತಿದ್ದಂತೆ, ನೋಡಲ್ ಅಧಿಕಾರಿ ಸಿಇಐಆರ್​ಗೆ ಮಾಹಿತಿ ರವಾನೆ ಮಾಡಿ ಮೊಬೈಲ್ ಆಕ್ಟಿವೇಷನ್ ಸಂಪೂರ್ಣ ಬ್ಲಾಕ್ ಮಾಡುತ್ತಾರೆ. ಇದರಿಂದ ಕದ್ದ ಮೊಬೈಲ್‌ ಅನ್ನು ಬಳಕೆ ಸಾಧ್ಯವಾಗುವುದಿಲ್ಲ. ಪರಿಣಾಮ ಮೊಬೈಲ್ ಕಳ್ಳತನಕ್ಕೆ ಸ್ಥಗಿತವಾಗುವ ಸಾಧ್ಯತೆ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಪತ್ತೆಯಾದರೇ ಮತ್ತೆ ಸಿಇಐಆರ್​ನಲ್ಲಿ ಮಾಹಿತಿ ಅಪ್​ಡೇಟ್ ಆಗುತ್ತದೆ. ಕೂಡಲೇ ನೋಡಲ್ ಅಧಿಕಾರಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವಾರಸುದಾರರಿಗೆ ವಿಷಯ ತಿಳಿಸುತ್ತಾರೆ. ನಂತರ ವಾರಸುದಾರರು ಲಾಕ್ ಆಗಿರುವ ಮೊಬೈಲ್​ನ್ನು ಮತ್ತೆ ಬಳಕೆಗೆ ಲಾಕ್ ಓಪನ್ ಮಾಡುವಂತೆ ಮನವಿ ಪತ್ರ ನೀಡಬೇಕು. ನೋಡಲ್ ಅಧಿಕಾರಿ, ಸಿಇಐಆರ್ ಪೋರ್ಟ್​ನಲ್ಲಿ ಮನವಿ ಸಲ್ಲಿಸಿ ಬ್ಲಾಕ್ ತೆರವು ಮಾಡಿ ಬಳಕೆಗೆ ಯೋಗ್ಯವಾಗುವಂತೆ ಅನುಕೂಲ ಮಾಡಿಕೊಡಲಿದ್ದಾರೆ.

ಇನ್ನೂ ಕದ್ದ ಮೊಬೈಲ್‌ ಅನ್ನು ಕಡಿಮೆ ಹಣಕ್ಕೆ ಮಾರಾಟ ಮಾಡಿದರೆ ಇವೆಲ್ಲವೂ ಪೊಲೀಸರಿಗೆ ತಿಳಿಯುತ್ತದೆ. ಮೊಬೈಲ್ ವಾರಸುದಾರ, ಐಎಂಇ ನಂಬರ್ ಸಮೇತ ದೂರು ಕೊಟ್ಟರೆ ಅದನ್ನು ಲಾಕ್ ಮಾಡುವ ಜತೆಗೆ ಫೋನ್​ಗೆ ಯಾವ ಸಿಮ್ ಅಳವಡಿಕೆ ಮಾಡಲಾಗಿದೆ ಎಂಬುದರ ಎಲ್ಲವೂ ಮಾಹಿತಿ ದೊರೆಯುತ್ತದೆ. ಇದು ಕಳವಾದ ಮೊಬೈಲ್​ನ್ನು ಪತ್ತೆ ಮಾಡಲು ತುಂಬಾ ಉಪಯೋಗವಾಗಲಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *