ಸ್ಮಾರ್ಟ್ ಫೋನ್ ಇಲ್ಲದೆಯೂ ಯುಪಿಐ ಪಾವತಿ ಮಾಡಿ – ಕೇವಲ 1,299 ರೂಪಾಯಿ ಬೆಲೆಯ 4ಜಿ ಫೋನ್ ನಲ್ಲಿದೆ ಅಡ್ವಾನ್ಸ್ ಫೀಚರ್..!!

ಸ್ಮಾರ್ಟ್ ಫೋನ್ ಇಲ್ಲದೆಯೂ ಯುಪಿಐ ಪಾವತಿ ಮಾಡಿ – ಕೇವಲ 1,299 ರೂಪಾಯಿ ಬೆಲೆಯ 4ಜಿ ಫೋನ್ ನಲ್ಲಿದೆ ಅಡ್ವಾನ್ಸ್ ಫೀಚರ್..!!

ನ್ಯೂಸ್ ಆ್ಯರೋ‌ : ಒಂದು ಕಾಲದಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆದಿದ್ದ ನೋಕಿಯಾ ಕಂಪೆನಿ ಇದೀಗ ಹೊಚ್ಚ ಹೊಸ 105 ಹಾಗೂ 106 ಆವೃತ್ತಿಗಳ ಫೋನ್ ಬಿಡುಗಡೆ ಮಾಡಿದೆ. ಸ್ಮಾರ್ಟ್‌ಫೋನ್ ಅಲ್ಲದೆಯೂ ಡಿಜಿಟಲ್ ವಹಿವಾಟು ಮಾಡಲು ಅನೂಕೂಲ ಮಾಡಿಕೊಡುವುದು ಈ ಫೋನ್ ಗಳ ವಿಶೇಷತೆ. ನೋಕಿಯಾ 105 ಫೋನ್ ಬೆಲೆ 1,299 ರೂ. ಹಾಗೂ 2,199 ರೂ.ಗೆ 106 ಫೋನ್ ಸಿಗಲಿದೆ.

ಈ ಫೋನ್ ಗಳಲ್ಲಿ UPI 123PAY ಅಳವಡಿಸಲಾಗಿದೆ. UPI 123PAY ಎಂದರೆ ಫೀಚರ್ ಫೋನ್ ಬಳಕೆದಾರರು ಸುರಕ್ಷಿತ ವಿಧಾನದಲ್ಲಿ ಹಣ ಪಾವತಿಸಲು ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಸ್ಪೇಸ್ (UPI) ಬಳಸುವುದಕ್ಕೆ ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ಅಭಿವೃದ್ಧಿಪಡಿಸಿರುವ ವ್ಯವಸ್ಥೆ. UPI 123PAY ಮೂಲಕ, ಫೀಚರ್ ಫೋನ್ ಬಳಕೆದಾರರು ಸ್ವಯಂಚಾಲಿತ ಇಂಟರ್ ಆ್ಯಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಂಖ್ಯೆಗೆ ಕರೆ ಮಾಡುವುದು, ಫೀಚರ್ ಫೋನ್‌ನಲ್ಲಿನ ಆ್ಯಪ್ ಕಾರ್ಯನಿರ್ವಹಣೆ, ಮಿಸ್ಡ್ ಕಾಲ್-ಆಧಾರಿತ ಸೌಲಭ್ಯ ಬಳಕೆ ಮತ್ತು ಸಮೀಪದಲ್ಲಿನ ಧ್ವನಿ ಆಧಾರಿತ ಪಾವತಿಗಳಂತಹ ನಾಲ್ಕು ತಂತ್ರಜ್ಞಾನ ಪರ್ಯಾಯಗಳ ಆಧಾರದ ಮೇಲೆ ಹಲವಾರು ವಹಿವಾಟುಗಳನ್ನು ಕೈಗೊಳ್ಳುವ ವ್ಯವಸ್ಥೆ.

ಇತರ ವಿಶೇಷತೆಗಳು

ನೋಕಿಯಾ 105 – ನವೀಕರಿಸಿದ 1,000 ಎಂಎಎಚ್ ಬ್ಯಾಟರಿ ಹೊಂದಿದೆ. ವಿನ್ಯಾಸ ಮತ್ತು ಕಾಂಪ್ಯಾಕ್ಟ್ ಆಕಾರವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನು ನೋಕಿಯಾ 106 4ಜಿ ಯಾವುದೇ ಸಂದರ್ಭಗಳಲ್ಲಿಯೂ ಅಡಚಣೆ ಇಲ್ಲದ ಸಂಪರ್ಕವನ್ನು ಒಡಗಿಸುತ್ತದೆ ಎಂದು ಕಂಪೆನಿ ಹೇಳಿದೆ.

ಎಚ್ಚರಿಕೆಯಿಂದ ಕೀ ಪ್ಯಾಡ್ ಸಜ್ಜುಗೊಳಿಸಲಾಗಿದ್ದು,ಕತ್ತಲೆಯಲ್ಲಿಯೂ ಕರೆ ಮಾಡಲು ಹಾಗೂ ಸಂದೇಶ ಟೈಪ್ ಮಾಡುವುದನ್ನು ಸುಲಭಗೊಳಿಸಲಿದೆ. ನೋಕಿಯಾ 106 1,450 ಎಂಎಎಚ್ ಬ್ಯಾಟರಿ ಹೊಂದಿದೆ.

ನೋಕಿಯಾ 105 ಮತ್ತು 106 ಎರಡೂ ಫೋನ್ ಗಳು ವಯರ್ ಲೆಸ್ ಎಫ್ಎಂ ರೇಡಿಯೊ ಹೊಂದಿದ್ದು, ಹೆಡ್ ಸೆಟ್ ಅಗತ್ಯವಿಲ್ಲದೆ ರೇಡಿಯೋ ಆಲಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ ನೋಕಿಯಾ 106 ಅಂತರ್ ನಿರ್ಮಿತ ಎಂಪಿ3 ಪ್ಲೇಯರ್ ಸಹ ಹೊಂದಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *