
11 ಸಾವಿರ ಟೆಕ್ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ ಮೈಕ್ರೋಸಾಫ್ಟ್; ನಿರಂತರ ಔದ್ಯೋಗಿಕ ವಜಾದಲ್ಲಿ ತೊಡಗಿಸಿಕೊಂಡಿವೆ ಐಟಿ-ಬಿಟಿ ಕಂಪೆನಿಗಳು
- ಟೆಕ್ ನ್ಯೂಸ್
- January 18, 2023
- No Comment
- 249
ನ್ಯೂಸ್ ಆ್ಯರೋ : ಜಗತ್ತಿನ ನಂಬರ್ 1 ಸಾಪ್ಟ್ ವೇರ್ ಕಂಪನಿ ಎನಿಸಿಕೊಂಡಿರುವ ಮೈಕ್ರೋಸಾಫ್ಟ್ ಜ.18 ರಿಂದ ಸಾವಿರಾರು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ. ವರದಿಯೊಂದರ ಪ್ರಕಾರ ಮೈಕ್ರೋಸಾಫ್ಟ್ ತನ್ನ ಕಂಪೆನಿಯ 5% ಅಥವಾ ಬರೋಬ್ಬರಿ 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ.
ಕಂಪೆನಿಯ ಈ ನಿರ್ಧಾರದಿಂದಾಗಿ ಸಾವಿರಾರು ನೌಕರರು ತೊಂದರೆಗೆ ಸಿಲುಕಲಿದ್ದಾರೆ. ಮೈಕ್ರೋಸಾಫ್ಟ್ ನಲ್ಲಿ ಸದ್ಯ ಮಾನವ ಸಂಪನ್ಮೂಲ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ ಉದ್ಯೋಗಿಗಳ ವಜಾ ನಡೆಯಲಿದೆ ಎನ್ನಲಾಗಿದೆ.
ಉದ್ಯೋಗಿಗಳನ್ನು ವಜಾ ಮಾಡು ಪ್ರಕ್ರೀಯೆ ಇತ್ತೀಚೆಗೆ ಅಮೇರಿಕಾದ ಟೆಕ್ ವಲಯದಲ್ಲಿ ಹೆಚ್ಚಿದ್ದು, ಅಮೇಜಾನ್, ಮೆಟಾ, ಅಲಿಬಾಬ, ಟ್ವಿಟ್ಟರ್ ಸೇರಿದಂತೆ ಹಲವು ಕಂಪೆನಿಗಳು ಈ ನಿರ್ಧಾರವನ್ನು ಕೈಗೊಂಡಿದೆ. ಕೋವಿಡ್ ಪರಿಣಾಮ ಹಾಗೂ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಟೆಕ್ ಕಂಪನಿಗಳು ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ. ಶೇರ್ ಚಾಟ್ ಕಂಪನಿ 500 ಉದ್ಯೋಗಿಗಳುನ್ನು, ಓಲಾ ಕಂಪನಿ 200 ಉದ್ಯೋಗಿಗಳನ್ನು, ಅಮೆಜಾನ್ ವಿಶ್ವದಾದ್ಯಂತ ಸುಮಾರು 18,000 ಉದ್ಯೋಗಿಗಳನ್ನು ಹಾಗೂ ಇದೀಗ ಮೈಕ್ರೋಸಾಫ್ಟ್ ಕೂಡ 11,000 ಉದ್ಯೋಗಿಳನ್ನು ವಜಾ ಮಾಡಲು ಮುಂದಾಗಿದೆ.
ಉದ್ಯೋಗ ಕಳೆದುಕೊಂಡವರಿಗೆ ಲಿಂಕ್ಡ್ ಇನ್ ಸಾಥ್.
ಸದ್ಯ, ಟೆಕ್ ಕಂಪನಿಗಳಿಂದ ವಜಾಗೊಂಡಿರುವ ಉದ್ಯೋಗಿಗಳಿಗೆ ಉದ್ಯೋಗ ಅನ್ವೇಷಣೆಗೆ ಲಿಂಕ್ಡ್ ಇನ್ ನೆರವು ನೀಡುತ್ತಿದೆ. ವೃತ್ತಿ ಬದುಕಿನ ಅಡ್ಡಿಗಳು ಮತ್ತು ಸವಾಲುಗಳನ್ನು ನಿರ್ವಹಿಸುವ ಬಗ್ಗೆ ಸಲಹೆಯನ್ನು ನೀಡುತ್ತಿದೆ. ಲಿಂಕ್ಡ್ ಇನ್ ನತ್ತ ಸಾಕಷ್ಟು ವಜಾಗೊಂಡಿರುವ ಉದ್ಯೋಗಿಗಳು ಆಕರ್ಷಿತರಾಗಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ ಗಳಲ್ಲಿ ಸುಮಾರು 5.85 ಕೋಟಿ ಸಲ ಲಿಂಕ್ಡ್ ಇನ್ ಆ್ಯಪ್ ಡೌನ್‌ಲೋಡ್ ಮಾಡಲಾಗಿದೆ.
ಮುಖ್ಯಾಂಶಗಳು
- 1.91 ಕಂಪನಿಗಳು 2023ರ ಜನವರಿ ತಿಂಗಳ ಮೊದಲ 16 ದಿನದಲ್ಲಿ ಒಟ್ಟು 24,000 ಕ್ಕೂ ಹೆಚ್ಚು ಟೆಕ್ಕಿಗಳನ್ನು ವಜಾ ಮಾಡಿದೆ.
- 2.ಟೆಕ್ ಕಂಪನಿಗಳು ದಿನವೊಂದಕ್ಕೆ ಸುಮಾರು 1600 ಉದ್ಯೋಗಿಗಳನ್ನು ವಜಾ ಮಾಡುತ್ತಿದೆ.
- 1000 ಕ್ಕೂ ಹೆಚ್ಚು ಕಂಪನಿಗಳು 2022ರಲ್ಲಿ 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ ಎನ್ನಲಾಗುತ್ತಿದೆ.