
ಇನ್ಮುಂದೆ ವಿಂಡೋಸ್ 11ಗೆ ಅಪ್ಡೇಟ್ ಮಾಡಲು ಹಣ ಪಾವತಿ ಕಡ್ಡಾಯ – ವಿಶ್ವದ ಟೆಕ್ ದಿಗ್ಗಜ ಮೈಕ್ರೋಸಾಫ್ಟ್‌ನಿಂದ ಅಧಿಕೃತ ಘೋಷಣೆ
- ಟೆಕ್ ನ್ಯೂಸ್
- October 15, 2023
- No Comment
- 85
ನ್ಯೂಸ್ ಆ್ಯರೋ : ವಿಂಡೋಸ್ 7 ಮತ್ತು 8ರ ಬಳಕೆದಾರರು ವಿಂಡೋಸ್ 11 ಅಪ್ಡೇಟ್ ಪಡೆಯಬೇಕಾದರೆ ಹಣ ಪಾವತಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಇತ್ತೀಚಿನವರೆಗೆ ವಿಂಡೋಸ್ 7 ಮತ್ತು 8 ಬಳಕೆದಾರರು ವಿಂಡೋಸ್ 11 ಗೆ ಉಚಿತವಾಗಿ ಅಪ್ಗ್ರೇಡ್ ಮಾಡಿಕೊಳ್ಳಬಹುದಿತ್ತು. ಆದರೆ ಇನ್ನು ಮುಂದೆ ಉಚಿತವಾಗಿ ವಿಂಡೋಸ್ 11 ಡೌನ್ಲೋಡ್ ಮಾಡುವುದನ್ನು ಮೈಕ್ರೊಸಾಫ್ಟ್ ನಿರ್ಬಂಧಿಸಿದೆ. ಮೈಕ್ರೊಸಾಫ್ಟ್ ತಂತ್ರಾಂಶ ವ್ಯವಸ್ಥೆಯಲ್ಲಿನ ಯಾವುದೋ ಒಂದು ದೋಷದಿಂದ ವಿಂಡೋಸ್ 7 ಮತ್ತು 8 ಬಳಕೆದಾರರಿಗೆ ಇಷ್ಟು ದಿನ ಉಚಿತವಾಗಿ ವಿಂಡೋಸ್ 11 ಗೆ ಅಪ್ಗ್ರೇಡ್ ಮಾಡಲು ಸಾಧ್ಯವಾಗಿತ್ತು ಎನ್ನಲಾಗಿದೆ.
ಹಳೆಯ ವಿಂಡೋಸ್ ಪಿಸಿ ಬಳಕೆದಾರರು ಈಗ ಹೊಸ ಆವೃತ್ತಿಯನ್ನು ಇನ್ಸ್ಟಾಲ್ ಮಾಡಬೇಕಾದರೆ ವಿಂಡೋಸ್ 11 ಕೀ ಪಡೆಯಬೇಕಾಗುತ್ತದೆ. ಅಂದರೆ ಅವರು ತಮ್ಮ ಪಿಸಿಗೆ ವಿಂಡೋಸ್ 11 ಪಡೆಯಲು ಶುಲ್ಕ ಪಾವತಿಸಬೇಕಾಗುತ್ತದೆ. ಮೈಕ್ರೊಸಾಫ್ಟ್ ಡೇಟಾಬೇಸ್ ನೊಂದಿಗೆ ನಿಮ್ಮ ಸಿಸ್ಟಂ ಅನ್ನು ನೋಂದಾಯಿಸಲು ಕೀ ಸಕ್ರಿಯಗೊಳಿಸುವುದು ಅತ್ಯಗತ್ಯ ಮತ್ತು ಕೀ ಇಲ್ಲದಿದ್ದರೆ ನಿಮ್ಮ ಸಿಸ್ಟಂನಲ್ಲಿ ರನ್ ಆಗುತ್ತಿರುವ ವಿಂಡೋಸ್ ಆವೃತ್ತಿಯು ಅಮಾನ್ಯವಾಗುತ್ತದೆ.
ಇದು ಈಗಾಗಲೇ ವಿಂಡೋಸ್ 7 ಅಥವಾ 8 ಕೀಯನ್ನು ಬಳಸಿ ವಿಂಡೋಸ್ 11 ಇನ್ಸ್ಟಾಲ್ ಮಾಡಿಕೊಂಡು ಸಾಫ್ಟ್ವೇರ್ ಅನ್ನು ಬಳಸುತ್ತಿರುವ ಗ್ರಾಹಕರಿಗೆ ಯಾವುದೇ ಸಮಸ್ಯೆಯಿಲ್ಲ. ವಿಂಡೋಸ್ 11 ಇದು ಮೈಕ್ರೋಸಾಫ್ಟ್ನ ಹೊಸ ಆಪರೇಟಿಂಗ್ ಸಿಸ್ಟಮ್ ಆವೃತ್ತಿಯಾಗಿದೆ ಮತ್ತು ಇದು ವಿಂಡೋಸ್ 10 ನಂತರದ ಆವೃತ್ತಿಯಾಗಿದೆ. ವಿಂಡೋಸ್ 10 ಬಿಡುಗಡೆಯಾಗಿ 6 ವರ್ಷಗಳ ನಂತರ ವಿಂಡೋಸ್ 11 ಬಂದಿದ್ದು ಗಮನಾರ್ಹ.
ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ತಯಾರಿಕಾ ಕಂಪನಿಯಾಗಿರುವ ಮೈಕ್ರೊಸಾಫ್ಟ್ ವಿಶ್ವದ ಅತಿದೊಡ್ಡ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿಯೂ ಆಗಿದೆ. ವರ್ಡ್ ಮತ್ತು ಎಕ್ಸೆಲ್ ನಂತರ ಡೆಸ್ಕ್ ಟಾಪ್ ಆಫೀಸ್ ಅಪ್ಲಿಕೇಶನ್ಗಳಿಂದ ಹಿಡಿದು ಕ್ಲೌಡ್ ಪ್ಲಾಟ್ ಫಾರ್ಮ್ ಗಳು ಮತ್ತು ಜೌಟ್‌ಲುಕ್ ನಂತಹ ಇಮೇಲ್ ಸೇವೆಗಳವರೆಗೆ ಹಲವಾರು ಉತ್ಪನ್ನಗಳನ್ನು ಕಂಪನಿ ತಯಾರಿಸುತ್ತದೆ. ಮೈಕ್ರೋಸಾಫ್ಟ್ ಯುಎಸ್ ಮೂಲದ ತಂತ್ರಜ್ಞಾನ ಕಂಪನಿಯಾಗಿದೆ. ಇದನ್ನು 1975 ರಲ್ಲಿ ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್ ಸ್ಥಾಪಿಸಿದರು.