
ಮಾರುಕಟ್ಟೆಗೆ ಬಂದಿದೆ 4ಜಿ ಜಿಯೋಭಾರತ್ ಬಿ1 ಫೋನ್ – ಈ ಫೋನ್ ಹೇಗಿದೆ? ಬೆಲೆ ಎಷ್ಟು ಗೊತ್ತಾ?
- ಟೆಕ್ ನ್ಯೂಸ್
- October 15, 2023
- No Comment
- 103
ನ್ಯೂಸ್ ಆ್ಯರೋ : ಉತ್ತಮ ನೆಟ್ ವರ್ಕ್, ಕೈಗೆಟಕುವ ಬೆಲೆಯಲ್ಲಿ ಭಾರತೀಯರ ಮನೆಮನೆಗೂ ಮನಮನಸ್ಸಿಗೂ ತಲುಪಿರುವ ರಿಲಯನ್ಸ್ ಜಿಯೋ ಈಗ ಹೊಸದಾಗಿ ಜಿಯೋಭಾರತ್ ಬಿ1 ಎಂಬ ಹೊಸ 4 ಜಿ ಫೋನ್ ಅನ್ನು ಬಿಡುಗಡೆ ಮಾಡಿದೆ.
ಕಪ್ಪು ಬಣ್ಣದಲ್ಲಿ ಲಭ್ಯವಿರುವ ಈ ಫೋನ್ 2.4 ಇಂಚಿನ ಡಿಸ್ಪ್ಲೇ ಹೊಂದಿದೆ. ಅಲ್ಫಾ ನ್ಯೂಮೆರಿಕ್ ಕೀ ಪ್ಯಾಡ್, ಬಹುಭಾಷಾ ಬೆಂಬಲ ಮತ್ತು 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
1,299 ರೂ. ಗೆ ಲಭ್ಯವಿರುವ ಈ ಫೋನ್ ಯುಪಿಐ ಪಾವತಿಗೆ ಸಹಕಾರಿಯಾಗುವ ಜಿಯೋ ಪೇ ಸೌಲಭ್ಯವನ್ನು ಹೊಂದಿದೆ. ಎಫ್‌ಎಂ ರೇಡಿಯೋ, ಜಿಯೋ ಸಿನೆಮಾ ಮತ್ತು ಜಿಯೋ ಸಾವನ್ ಅಪ್ಲಿಕೇಶನ್ಗಳನ್ನು ಒಳಗೊಂಡಿದೆ.
ಕಳೆದ ಜುಲೈನಲ್ಲಿ ಅಂತರ್ಜಾಲ ಸೌಲಭ್ಯವನ್ನು ಹೊಂದಿದ 4 ಜಿ ಫೋನ್ ಸರಣಿ ಜಿಯೋಭಾರತ್ ಅನ್ನು ಪ್ರಾರಂಭಿಸಲಾಗಿತ್ತು. ಇದರ ಮೂರನೇ ಸರಣಿಯಾಗಿ ಜಿಯೋಭಾರತ್ ಬಿ1. ಇದಕ್ಕೂ ಮೊದಲು ಜಿಯೋ ಭಾರತ್ ವಿ 2 ಮತ್ತು ಕಾರ್ಬನ್ ಕೆ1 ಫೋನ್ಗಳನ್ನು ಬಿಡುಗಡೆ ಮಾಡಲಾಗಿತ್ತು.
ಜಿಯೋಭಾರತ್ ಬಿ1 ಕ್ಲಾಸಿ ಮತ್ತು ಮ್ಯಾಟ್ ಫಿನಿಶ್ ವಿನ್ಯಾಸ ಹೊಂದಿದ್ದು, ಹಿಂಭಾಗದ ಪ್ಯಾನೆಲ್ ಜಿಯೋ ಲೋಗೋ ಮತ್ತು ಆಯತಾಕಾರದ ಕೆಮರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ 2.4 ಇಂಚಿನ ಡಿಸ್ಪ್ಲೇ ಮತ್ತು ಆಲ್ಫಾನ್ಯೂಮೆರಿಕ್ ಕೀಪ್ಯಾಡ್ ನೊಂದಿಗೆ 23 ಭಾಷೆಗಳ ಬೆಂಬಲ ಇದರಲ್ಲಿ ಇರಲಿದೆ.
ಈ ಫೋನ್ ಗಾಗಿ ಜಿಯೋ ಭಾರತ್ ಹೆಸರಿನ ವಿಶೇಷ ಡೇಟಾ ಪ್ಲಾನ್ಗಳನ್ನು ಪರಿಚಯಿಸಲಾಗಿದೆ. 28 ದಿನಗಳ ಅನಿಯಮಿತ ಕರೆ ಮತ್ತು 14 ಜಿಬಿ ಡೇಟಾ ಹೊಂದಿರುವ 123 ರೂ. ಮತ್ತು ವಾರ್ಷಿಕ ಚಂದಾದಾರಿಕೆ, ಅನಿಯಮಿತ ಕರೆ ಮತ್ತು ಒಟ್ಟು 168 ಜಿಬಿ ಡೇಟಾ ಒಳಗೊಂಡಿರುವ 1,234 ರೂ. ಗಳ ಎರಡು ಯೋಜನೆಗಳು ಇದಕ್ಕಾಗಿ ಲಭ್ಯವಿದೆ.
ಜಿಯೋ ಭಾರತ್ ಬಿ1 4ಜಿ ಫೀಚರ್ ಫೋನ್ ಜಿಯೋ ಭಾರತ್ ವಿ2 ಮತ್ತು ಜಿಯೋ ಭಾರತ್ ಕೆ1 ಕಾರ್ಬನ್ ಮಾದರಿಗಳ ನವೀಕರಿಸಿದ ಆವೃತ್ತಿಯಾಗಿದೆ. ಇದು ಬಳಕೆದಾರರಿಗೆ ಚಲನಚಿತ್ರ, ವೀಡಿಯೊ ಮತ್ತು ಕ್ರೀಡಾ ಮುಖ್ಯಾಂಶಗಳನ್ನು ಕೇಳಲು ಅನುಕೂಲವಾಗಿದೆ.