
ಮಂಗಳೂರು, ಮೈಸೂರು ಸೇರಿ 115 ಕಡೆ ಜಿಯೋ ಏರ್ ಫೈಬರ್ ಆರಂಭ – ಏನಿದರ ವಿಶೇಷತೆ? ಗ್ರಾಹಕರಿಗೆ ಏನು ಉಪಯೋಗ?
- ಟೆಕ್ ನ್ಯೂಸ್
- November 15, 2023
- No Comment
- 129
ನ್ಯೂಸ್ ಆ್ಯರೋ : ಸಾಮಾನ್ಯವಾಗಿ ಏರ್ಟೆಲ್, ಬಿಎಸ್ ಎನ್ ಎಲ್, ಜಿಯೋ ಬಳಸುವ ಗ್ರಾಹಕರು ಸೇವೆಗಳಲ್ಲಿ ಒಂದಿಷ್ಟು ಆಫರ್ಸ್, ರಿಯಾಯಿತಿಗಳನ್ನು ನಿರೀಕ್ಷೆ ಮಾಡುವುದು ಸಹಜ. ಅದರಲ್ಲೂ ಜಿಯೋ ನಿರಂತರವಾಗಿ ವಿಶೇಷ ಸೇವೆಗಳನ್ನು ನೀಡುತ್ತಲೇ ಇರುತ್ತದೆ. ಜಿಯೋ ಏರ್ ಫೈಬರ್ ಸೇವೆಯ ಅಡಿಯಲ್ಲಿ ಬಳಕೆದಾರರು 16 OTT ಅಪ್ಲಿಕೇಶನ್ ಗಳ ಚಂದಾದಾರಿಕೆ, 550 ಹೆಚ್ಚು ಡಿಜಿಟಲ್ ಟಿವಿ ಚಾನೆಲ್ ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಯಾರ ಸ್ಥಳದಲ್ಲಿ ಫೈಬರ್ ಪ್ರವೇಶ ಇರುವುದಿಲ್ಲವೋ ಅಂತಹ ಬಳಕೆದಾರರಿಗೆ ಜಿಯೋದ ಏರ್ ಫೈಬರ್ ಸೇವೆಗಳು ವೈಫೈ ರೀತಿಯ ಸೇವೆಗಳನ್ನು ನೀಡುತ್ತವೆ.
ರಿಲಯನ್ಸ್ ಜಿಯೋ ಸಂಸ್ಥೆ ಇತ್ತೀಚೆಗಷ್ಟೇ ಚೌತಿಯಂದು ತನ್ನ ಜಿಯೋ ಏರ್ ಫೈಬರ್ ಸೇವೆಯನ್ನು ದೇಶದ ಹಲವು ಕಡೆಗಳಲ್ಲಿ ಪ್ರಾರಂಭ ಮಾಡಿತ್ತು.
ಯಾವೆಲ್ಲಾ ಕಡೆಗಳಲ್ಲಿ ಜಿಯೋ ಏರ್ ಫೈಬರ್ ಸೇವೆಯನ್ನು ನೀಡುತ್ತಿದೆ..?
ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ ಇದರ ಜೊತೆಗೆ ಹೆಚ್ಚಿನ ನಗರಗಳಿಗೆ ವಿಸ್ತರಿಸಿದೆ. ಜಿಯೋ ಏರ್ ಫೈಬರ್ ಗಾಗಿ ಕಂಪನಿಯ ಮೀಸಲು ಪುಟವನ್ನು ತೆರೆದಿದ್ದು, ಲಭ್ಯವಿರುವ ಎಲ್ಲ ನಗರಗಳ ಸಂಪೂರ್ಣ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದೆ.
ಜಿಯೋ ಏರ್ ಫೈಬರ್ ಕೊಡುಗೆ, ಯೋಜನೆ:
ಜಿಯೋ ಏರ್ ಫೈಬರ್ ಸೇವೆಯ ಅಡಿಯಲ್ಲಿ ಬಳಕೆದಾರರು 16 ಒಟಿಟಿ ಅಪ್ಲಿಕೇಶನ್ ಗಳ ಚಂದಾದಾರಿಕೆ, 550ಕ್ಕೂ ಹೆಚ್ಚು ಡಿಜಿಟಲ್ ಟಿವಿಗಳಿಗೆ ಸೇವೆಯನ್ನು ಪಡೆಯುತ್ತಾರೆ. ಜಿಯೋ ಏರ್ ಫೈಬರ್ ಜೊತೆಗೆ ಬಳಕೆದಾರರು 4k ಸ್ಮಾರ್ಟ್ ಸೆಟ್ ಅಪ್ ಟಾಪ್ ಬಾಕ್ಸ್ ನ್ನು ಪಡೆಯುತ್ತಾರೆ.
ಯೋಜನೆಗಳ ಬಗ್ಗೆ ನೋಡೋದಾದ್ರೆ ಜಿಯೋ ಏರ್ಫೈಬರ್ ಪ್ಲಾನ್ ಗಳು ಒಂದು ತಿಂಗಳವರೆಗೆ ಜಿಎಸ್ ಟಿಯನ್ನು ಹೊರತುಪಡಿಸಿ 599ರೂ ಗಳಿಂದ ಪ್ರಾರಂಭವಾಗುತ್ತದೆ. ಈ ಯೋಜನೆಯು ಜಿಯೋ ಸಿನಿಮಾ, ಸೋನಿ ಲಿವ್, ಡಿಸ್ನಿ ಹಾಟ್ಸ್ಸ್ಟಾರ್ , ಝೀ5, ಡಿಸ್ಕವರಿ ಸೇರಿದಂತೆ ಅನೇಕ Ott ಸೇವೆಗಳಿಗೆ ಪ್ರವೇಶವನ್ನು ಪಡೆಯುತ್ತದೆ.
ಅಂತೆಯೇ 899ರೂ ಮತ್ತು 1199 ರೂ.ಗಳ ಮಾಸಿಕ ಯೋಜನೆಗಳು ಸಹ ಲಭ್ಯವಿವೆ. ಬಳಕೆದಾರರು ವಾರ್ಷಿಕ ಅಥವಾ ಆರು ತಿಂಗಳ ಯೋಜನೆಗಳನ್ನು ಸಹ ಆಯ್ಕೆ ಮಾಡಬಹುದು.