
ವಾಟ್ಸಾಪ್ ನಲ್ಲಿ ಬರೋ ಇಂತಹ ಮೆಸೇಜ್ ನ್ನು ಕಡೆಗಣಿಸಿಬಿಡಿ – ಇಲ್ದೇ ಇದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಆಗುತ್ತೆ ಎಚ್ಚರ…!!
- ಟೆಕ್ ನ್ಯೂಸ್
- November 15, 2023
- No Comment
- 59
ನ್ಯೂಸ್ ಆ್ಯರೋ : ಮೊಬೈಲ್ ಆ್ಯಪ್ ಗಳಲ್ಲಿ ಅನೇಕ ಅಪ್ಡೇಟ್ ಗಳು ಬರುತ್ತಲೇ ಇರುತ್ತವೆ. ಹೊಸ ಮಾದರಿಯ ಭಿನ್ನ ಶೈಲಿಯ ಪ್ರಯೋಗವನ್ನು ವಾಟ್ಸಾಪ್ , ಫೇಸಬುಕ್ ಗಳಲ್ಲಿ ನಾವು ನೋಡುತ್ತಲೇ ಬರುತ್ತೇವೆ. ಅದರಲ್ಲೂ ವಾಟ್ಸಾಪ್ ನಲ್ಲಿ ಅನೇಕ ಅಪರಿಚಿತ ಸಂದೇಶಗಳು ಬರುತ್ತಲೇ ಇರುತ್ತದೆ. ಆದರೆ ಈ ಮೆಸೇಜ್ ನ್ನು ಮಾತ್ರ ದಯವಿಟ್ಟು ಕ್ಲಿಕ್ ಮಾಡದಿರಿ…
ಹೌದು.. ಭದ್ರತಾ ಕಂಪೆನಿ ಮೆಕಾಫಿ ಸೈಬರ್ ಖದೀಮರು ಹ್ಯಾಕ್ ಮಾಡಲು ಅಥವಾ ಹಣವನ್ನು ಕದಿಯಲು ಎಸ್ ಎಂಎಸ್ ಅಥವಾ ವಾಟ್ಸಾಪ್ ನಲ್ಲಿ ಕಳಿಸುವ 7 ಅಪಾಯಕಾರಿ ಸಂದೇಶ ಸಾಲುಗಳನ್ನು ಪಟ್ಟಿ ಮಾಡಿದೆ.
ಒಂದು ವರದಿಯ ಪ್ರಕಾರ ಭಾರತದ 82% ಭಾರತೀಯರು ಇಂತಹ ನಕಲಿ ಸಂದೇಶಗಳನ್ನು ಕ್ಲಿಕ್ ಮಾಡಿದ್ದಾರೆ. ಅಥವಾ ಮೋಸ ಹೋಗಿದ್ದಾರೆಂದು ತಿಳಿದು ಬರುತ್ತದೆ.
ನಮಗೆ ಇಮೇಲ್ ಮೂಲಕವೋ ಅಥವಾ ವಾಟ್ಸಾಪ್ ಮೂಲಕವೋ ಅನೇಕ ರೀತಿಯ ನಕಲಿ ಮೆಸೇಜ್ ಗಳು ಬರುತ್ತಲೇ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಅಪಾಯವಂತೂ ಕಟ್ಟಿಟ್ಟ ಬುತ್ತಿ.
ಹಾಗಾದರೆ ಯಾವೆಲ್ಲಾ ರೀತಿಯಲ್ಲಿ ನಕಲಿ ಸಂದೇಶಗಳು ಬರುತ್ತದೆ ಎಂದರೆ…
- ಉದ್ಯೋಗವಕಾಶ
ಸಾಮಾನ್ಯವಾಗಿ ಜನರು ಉದ್ಯೋಗಕ್ಕೆ ಸಂಬಂಧಿಸಿದಂತಹ ಮಾಹಿತಿಗಳಿಗೆ ಒತ್ತು ಕೊಡುವುದು ಸಹಜ. ಅದನ್ನೇ ಮಾನದಂಡ ಮಾಡಿಕೊಂಡು ಅನೇಕ ರೀತಿಯಲ್ಲಿ ಹಗರಣಗಳು ನಡೆಯುತ್ತದೆ. ಆದರೆ ನೆನಪಿನಲ್ಲಿಡಬೇಕಾದ ಮುಖ್ಯ ವಿಚಾರವೆಂದರೆ ಉದ್ಯೋಗ ಆಫರ್ ಗಳು ಎಂದಿಗೂ ವಾಟ್ಸಾಪ್ ಮೆಸೇಜ್ ನಲ್ಲಿ ಅಥವಾ ಎಸ್ ಎಂಎಸ್ ನಲ್ಲಿ ಬರುವುದಿಲ್ಲ. ಆದ್ದರಿಂದ ಅಂತಹ ಸಂದೇಶಗಳ ಮೇಲೆ ಕ್ಲಿಕ್ ಮಾಡಬೇಡಿ.
- ನೀವು ಬಹುಮಾನವನ್ನು ಗೆದ್ದಿದ್ದೀರಿ:
ನಿಮ್ಮದೇ ಬ್ಯಾಂಕ್ ಅಕೌಂಟ್ ಗೆ ಹಣ ಬಂದಿರುವ ರೀತಿಯಲ್ಲಿ ಕೆಲವು ಫ್ರಾಡ್ ಕೆಲಸಗಳು ನಡೆಯುತ್ತದೆ. ಅದೇ ರೀತಿ ಬಳಕೆದಾರರು ಬಹುಮಾನವನ್ನು ಗೆದ್ದ ಅಥವಾ ಲಾಟರಿ ಗೆದ್ದ ಸಂದೇಶವನ್ನು ಸ್ವೀಕರಿಸಿದಾಗ ಅದರಿಂದ ಶೇ. 99 ವಂಚನೆಗೊಳಗಾಗುವ ಸಾಧ್ಯತೆಯಿದೆ. ಬಳಕೆದಾರರ ಬ್ಯಾಂಕ್ ವಿವರಗಳು ಮತ್ತು ಹಣವನ್ನು ಕದಿಯುವುದು ಇದರ ಮುಖ್ಯ ಧ್ಯೇಯವಾಗಿರುತ್ತದೆ.
- ಶಾಪಿಂಗ್ ಬಗೆಗಿನ ಖಡಕ್ ಎಚ್ಚರಿಕೆ:
ನೀವು ಇಲ್ಲಿಯವರೆಗೆ ಮಾಡದ ಖರೀದಿಯ ಬಗೆಗಿನ ಸಂದೇಶಗಳು ಬರುತ್ತಿದೆ ಎಂದಾದರೆ ನೀವು ಇದರಿಂದ ಸಂಕಷ್ಟಕ್ಕೆ ಸಿಲುಕುತ್ತೀರಿ ಎಂದರ್ಥ. ಹ್ಯಾಕ್ ಮಾಡಲು ಪ್ರಲೋಭಿಸಲು ಅಂತಹ ಸಂದೇಶಗಳನ್ನು ಕಳಿಸುತ್ತಾರೆ.
- ಬ್ಯಾಂಕ್ ಅಲರ್ಟ್
ಸಂದೇಶದಲ್ಲಿನ ಯುಎಲ್ಆರ್ ಅಥವಾ ಲಿಂಕ್ ಮೂಲಕ ಕೆವೈಸಿಯನ್ನು ಪೂರ್ಣಗೊಳಿಸುವಂತೆ ಬಳಕೆದಾರರಿಗೆ ಎಸ್ ಎಂಎಸ್ ಅಥವಾ ವಾಟ್ಸಾಪ್ ನಲ್ಲಿ ಸ್ವೀಕರಿಸಿದ ಬ್ಯಾಂಕ್ ಎಚ್ಚರಿಕೆ ಸಂದೇಶವು ನಕಲಿಯಾಗಿದೆ. ನಿಮ್ಮ ಹಣವನ್ನು ದರೋಡೆ ಹೊಡೆಯುವುದೇ ಇದರ ಉದ್ದೇಶವಾಗಿದೆ.
- ಅಮೆಜಾನ್ ಫೇಕ್ ಮಿಸ್ಡ್ ಡೆಲಿವರಿ
ಆನ್ಲೈನ್ ಶಾಪಿಂಗ್ ಬಗ್ಗೆ ನಿಮ್ಮ ಡೆಲಿವರಿ ರದ್ದುಗೊಂಡಿದೆ ಅಥವಾ ತಪ್ಪಿಹೋಗಿದೆ ಎಂದು ಎಸ್ಎಂಎಸ್ ಅಥವಾ ವಾಟ್ಸಾಪ್ ನಲ್ಲಿ ಸಂದೇಶ ಬಂದರೆ ಅದರಿಂದಲೂ ಮೋಸಹೋಗುವ ಸಾಧ್ಯತೆ ಇದೆ.
- ಒಟಿಟಿ ಚಂದಾದಾರಿಕೆ ನವೀಕರಣಗಳು
ಒಟಿಟಿಯ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಸ್ಕ್ಯಾಮರ್ ಗಳು ನೆಟ್ಫ್ಲಿಕ್ಸ್ ಅಥವಾ ಇತರ ಒಟಿಟಿ ಚಂದಾದಾರಿಕೆಗಳ ಸುತ್ತ ಸಂದೇಶ ಕಳುಹಿಸುವ ಮೂಲಕ ಸ್ಮಾರ್ಟ್ ಫೋನ್ ಬಳಕೆದಾರರನ್ನು ಆಕರ್ಷಿಸಲು ಯತ್ನಿಸುತ್ತಾರೆ. ಈ ಉಚಿತ ಕೊಡುಗೆಗಳು ಸ್ಕ್ಯಾಮ್ ಆಗಬಹುದು.
ಹೀಗೆ ನಾವು ಸ್ವಲ್ಪ ಎಡವಿದರೆ ಹಣದ ವಿಷಯದಲ್ಲಿ ಸಂಪೂರ್ಣವಾಗಿ ಮೋಸ ಹೋಗುವುದು ಸಹಜ. ಆದ ಕಾರಣ ಇಂತಹ ಕೆಲವು ಅನಗತ್ಯ ಸಂದೇಶಗಳನ್ನು ಕಡೆಗಣಿಸುವುದೇ ಒಳಿತು.