ಆನ್‌ಲೈನ್‌ನಲ್ಲಿದ್ದರೂ ಆಫ್‌ಲೈನ್‌ ಮೋಡ್‌ನಲ್ಲಿ ಚಾಟ್ ಮಾಡೋದು ಹೇಗೆ? – ಗೌಪ್ಯತೆಯ ಹೊಸ ಫೀಚರ್‌ನ ಮಾಹಿತಿ ಇಲ್ಲಿದೆ..

ಆನ್‌ಲೈನ್‌ನಲ್ಲಿದ್ದರೂ ಆಫ್‌ಲೈನ್‌ ಮೋಡ್‌ನಲ್ಲಿ ಚಾಟ್ ಮಾಡೋದು ಹೇಗೆ? – ಗೌಪ್ಯತೆಯ ಹೊಸ ಫೀಚರ್‌ನ ಮಾಹಿತಿ ಇಲ್ಲಿದೆ..

ನ್ಯೂಸ್‌ ಆ್ಯರೋ: ವಿಶ್ವದಲ್ಲಿ ತಿಂಗಳ ಅವಧಿಯಲ್ಲಿ 2.24 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ಮೆಟಾ ಒಡೆತನದ ನಂಬರ್ ವನ್ ಅಪ್ಲಿಕೇಷನ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೇ ವಾರಕ್ಕೆ ಒಂದರಂತೆ ಹೊಸ ಫೀಚರ್​​ಗಳನ್ನು ಪರಿಚಯಿಸುತ್ತಿರುವ ವಾಟ್ಸಾಪ್‌ನಲ್ಲಿ ಅನೇಕ ಮಂದಿಗೆ ತಿಳಿದಿರದ ಅದೆಷ್ಟೊ ಟ್ರಿಕ್​ಗಳು ಅಡಕವಾಗಿದೆ. ಅದು ಡಿಲೀಟ್ ಆದ ಮೆಸೇಜ್ ಅನ್ನು ನೋಡುವುದು ಇರಬಹುದು ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು. ಅಂತೆಯೆ ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್​ನಲ್ಲಿ ಇದ್ದರೂ ಆಫ್​ಲೈನ್ ಕಾಣಿಸುವಂತೆ ಮಾಡಬಹುದು. ಬದಲಾಗಿ ವಾಟ್ಸ್​ಆ್ಯಪ್​ನಲ್ಲೇ ಕೆಲ ಸೆಟ್ಟಿಂಗ್​ಗಳನ್ನು ಬದಲಾಯಿಸಿ ಈ ರೀತಿ ಮಾಡಬಹುದು.

ನೀವು ಮಾಡಬೇಕಾದದ್ದು ಇಷ್ಟೇ:

  • ಮೊದಲಿಗೆ ನಿಮ್ಮ ವಾಟ್ಸ್​ಆ್ಯಪ್ ಅನ್ನು ಹೊಸ ವರ್ಷನ್​ಗೆ ಅಪ್ಡೇಟ್ ಮಾಡಿಕೊಳ್ಳಿ.
  • ಆ ಬಳಿಕ, ವಾಟ್ಸ್​ಆ್ಯಪ್ ತೆರೆಯಿರಿ ಮತ್ತು ಸೆಟ್ಟಿಂಗ್ ಟ್ಯಾಬ್‌ಗೆ ಹೋಗಿ.
  • ನಂತರ ಅಲ್ಲಿ ಕಾಣಿಸುವ ಪ್ರೈವಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಈಗ ಮೊದಲಿಗೆ ಕಾಣಿಸುವ ಲಾಸ್ಟ್​ ಸೀನ್ ಮತ್ತು ಆನ್​ಲೈನ್ ಎಂಬ ಆಯ್ಕೆ ಸೆಲೆಕ್ಟ್ ಮಾಡಿರಿ.
  • ಇಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತದೆ. ನನ್ನ ಲಾಸ್ಟ್ ಸೀನ್ ಯಾರು ನೋಡಬೇಕು ಮತ್ತು ನಾನು ಆನ್​ಲೈನ್​ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು?
  • ಆನ್​ಲೈನ್​ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು ಎಂಬಲ್ಲಿ Everyone ಹಾಗೂ Same as Last Seen ಎರಡು ಆಯ್ಕೆ ಇದೆ.
  • ಇಲ್ಲಿ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಸೆಲೆಕ್ಟ್ ಮಾಡಿದರೆ ಆಯಿತು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *