ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಮತ್ತೆ ನೋಡ್ಬೇಕಾ? – ಜಸ್ಟ್ ಇಷ್ಟು ಮಾಡಿದ್ರೆ ಸಾಕು, ಆದ್ರೆ ಈ ವಿಷ್ಯ ಗೊತ್ತಿರ್ಲಿ..!!

ನ್ಯೂಸ್ ಆ್ಯರೋ : ವಾಟ್ಸಾಪ್ ನಲ್ಲಿ ನಾವು ಪ್ರಪಂಚದ ಯಾವುದೇ ಭಾಗದಲ್ಲಿರುವ ವ್ಯಕ್ತಿಯ ಜೊತೆ ಸಂವಹನ ಮಾಡಲು ಸಾಧ್ಯವಿರುವುದರಿಂದ ಮತ್ತು ಇದರಲ್ಲಿನ ಅನೇಕ ವಿಶೇಷ ರೀತಿಯ ಫೀಚರ್ಸ್ ಗಳಿಂದ ದೊಡ್ಡ ಮಟ್ಟದ ಬಳಕೆದಾರರನ್ನು ಹೊಂದಿದೆ. ವಾಟ್ಸ್ಆ್ಯಪ್ ಕಾಲಕಾಲಕ್ಕೆ ಹೊಸ ಫೀಚರ್​​ಗಳನ್ನು ಅಪ್​ಡೇಟ್ ಮೂಲಕ ಜನರಿಗೆ ನೀಡುತ್ತದೆ. ಆದರೆ ಜನರು ಬಯಸುವ ಕೆಲವೊಂದು ಆಯ್ಕೆಗಳನ್ನು ವಾಟ್ಸ್​ಆ್ಯಪ್ ನೀಡುತ್ತಿಲ್ಲ. ಬಳಕೆದಾರರ ಖಾಸಗಿತನ ಮತ್ತು ಸುರಕ್ಷತೆಯ ಕಾರಣದಿಂದ ಕೆಲವು ಫೀಚರ್ಸ್ ಜನರಿಗೆ ದೊರೆಯುತ್ತಿಲ್ಲ.

ಯಾವ ಹೊಸ ಅಪ್ಲಿಕೇಶನ್ ಗಳು ಕೂಡಾ ವಾಟ್ಸಾಪ್ ಗುಣಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್, ಇಂದು ಜಾಗತಿಕವಾಗಿ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಥರ್ಡ್ ಪಾರ್ಟಿ ಆ್ಯಪ್ ಗಳ ಪಾತ್ರ ಮಹತ್ವದ್ದು..

ಕೆಲವೊಂದು ಮಾಹಿತಿಗಳನ್ನು ವಾಟ್ಸಾಪ್ ನೀಡದಿರುವ ಕಾರಣ ಈ ಥರ್ಡ್ ಪಾರ್ಟಿ ಆ್ಯಪ್ ಗಳು ಹುಟ್ಟಿಕೊಂಡಿದೆ. ಇದರಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ನೋಡುವುದರಿಂದ ಹಿಡಿದು ನಮ್ಮ ಡಿಪಿ ಯಾರೆಲ್ಲಾ ನೋಡಿದ್ದಾರೆ ಎಂಬುವ ಮಾಹಿತಿ ಕೂಡಾ ನಮಗೆ ಲಭ್ಯವಾಗುತ್ತದೆ. ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ನಿಮಗೆ ಯಾರಾದರೂ ಮೆಸೇಜ್ ಮಾಡಿ ನಂತರ ಅದನ್ನು ಡಿಲೀಟ್ ಮಾಡಿದರೆ ಆ ಮೆಸೇಜ್ ಏನೆಂಬುವುದನ್ನು ನೋಡಲು ಸಾಧ್ಯವಾಗೋದಿಲ್ಲ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಥರ್ಡ್ ಪಾರ್ಟಿ ಆ್ಯಪ್ ಮೂಲಕ ನಾವು ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜನ್ನು ಮತ್ತೆ ಕಾಣಬಹುದಾಗಿದೆ.

ಯಾವ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು..?

ಡಬ್ಲ್ಯೂಎಎಮ್ ಆರ್ ವಾಟ್ಸಾಪ್ ಡಿಲೀಟ್, ಡಿಲೀಟ್ ವಾಟ್ಸಾಪ್ ಮೆಸೇಜ್ ಮುಂತಾದ ಹೆಸರಿನ ಥರ್ಡ್ ಪಾರ್ಟಿ ಆ್ಯಪ್ ಮೂಲಕ ಡಿಲೀಟ್ ಆದ ಮೆಸೇಜ್ ನಾವು ಮತ್ತೆ ಓದಬಹುದು.

ಅನುಸರಿಸಬೇಕಾದ ಹಂತಗಳು:

  • ಗೂಗಲ್ ಪ್ಲೇ ಸ್ಟೋರ್ ನಿಂದ ವಾಟ್ಸಾಪ್ ರಿಮೂವ್ಡ್ ಅಪ್ಲಿಕೇಶನ್ ನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಅಪ್ಲಿಕೇಶನ್ ಸೆಟ್ಟಿಂಗ್ ನ್ನು ಪೂರ್ಣಗೊಳಿಸಿ ಅನುಮತಿ ನೀಡಿ
  • ಬಳಿಕ ಯಾವ ಅಪ್ಲಿಕೇಶನ್ ನೋಟಿಫಿಕೇಶನ್ ನ್ನು ಸೇವ್ ಮಾಡಿಕೊಳ್ಳಬೇಕೋ ಅದನ್ನು ಸೆಲೆಕ್ಟ್ ಮಾಡಿ.
  • ಅಂದರೆ ವಾಟ್ಸಾಪ್ ನೋಟಿಪಿಕೇಶನ್ ಸೇವ್ ಮಾಡ್ಬೇಕು ಎಂದಾದಲ್ಲಿ ವಾಟ್ಸಾಪ್ ಮೇಲೆ ಕ್ಲಿಕ್ ಮಾಡಿ ನೆಕ್ಸ್ಟ್ ಆಯ್ಕೆಯನ್ನು ಒತ್ತಿರಿ.
  • ಇದಾದ ಬಳಿಕ ಹೊಸ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಅದಕ್ಕೆ ಅನುಮತಿ ನೀಡಿ.

ಈ ಎಲ್ಲಾ ಹಂತಗಳ ಬಳಿಕ ನೀವು ಅಪ್ಲಿಕೇಶನ್ ಬಳಸಲು ಯೋಗ್ಯವಾಗುತ್ತದೆ. ಈ ಮೂಲಕ ನೀವು ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜನ್ನು ಮತ್ತೆ ಕಾಣಬಹುದಾಗಿದೆ.

ಥರ್ಡ್ ಪಾರ್ಟಿ ಆ್ಯಪ್ ಸುರಕ್ಷಿತವಲ್ಲ….!

ಈ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದಕ್ಕಿಂತ ಮುಂಚೆ ಕೆಲವೊಂದು ಮಾಹಿತಿಗಳನ್ನು ನೀವು ತಿಳಿದುಕೊಳ್ಳಲೇಬೇಕು. ಈ ಥರ್ಡ್ ಪಾರ್ಟಿ ಆ್ಯಪ್ ಗಳು ಅಷ್ಟೊಂದು ಸಮಂಜಸ ಮತ್ತು ಸುರಕ್ಷಿತವಲ್ಲ. ಯಾಕೆಂದರೆ ಇವು ನಿಮ್ಮ ಮೊಬೈಲ್ ನ ಡೇಟಾವನ್ನು ಆಕ್ರಮಿಸಿಕೊಳ್ಳುತ್ತದೆ. ನಂಬಿಕೆಗೆ ಅರ್ಹವಾಗಿದ್ದರೆ ಮಾತ್ರ ಇದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.