ಇನ್ನು ಮುಂದೆ ಮತದಾನ ಮಾಡಲು ಕ್ಯೂ ನಿಲ್ಲುವ ಅಗತ್ಯವಿಲ್ಲ – ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ ಹೊಸ ಆ್ಯಪ್, ನಿಮ್ಗೆ ಮೊದ್ಲೇ ನೀಡಲಾಗುತ್ತೆ ಟೈಮ್..!!

ಇನ್ನು ಮುಂದೆ ಮತದಾನ ಮಾಡಲು ಕ್ಯೂ ನಿಲ್ಲುವ ಅಗತ್ಯವಿಲ್ಲ – ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ ಹೊಸ ಆ್ಯಪ್, ನಿಮ್ಗೆ ಮೊದ್ಲೇ ನೀಡಲಾಗುತ್ತೆ ಟೈಮ್..!!

ನ್ಯೂಸ್ ಆ್ಯರೋ : ಮತದಾನ ಬಂತೆಂದರೆ ಸಾಕು ಕೆಲವರಿಗೆ ಎಷ್ಟು ಸಂತಸವಿರುತ್ತದೋ, ಇನ್ನು ಕೆಲವರಿಗೆ ಮತದಾನಕ್ಕಾಗಿ ದಿನಗಟ್ಟಲೆ ಕ್ಯೂ ನಿಲ್ಲಬೇಕಲ್ಲ ಎಂಬ ಚಿಂತೆಯೂ ಕಾಡುತ್ತಿರುತ್ತದೆ. ಆದರೆ ಇನ್ನು ಮುಂದೆ ಮತದಾರರಿಗೆ ಆ ಕಷ್ಟವೇ ಇಲ್ಲ. ಸಿನಿಮಾ, ರೈಲು, ವಿಮಾನ ಟಿಕೆಟ್ ಕಾಯ್ದಿರಿಸಿದಂತೆ ಇನ್ನು ಮುಂದೆ ಮತದಾನದ ಸಮಯವನ್ನು ಮೊದಲೇ ನಿಗದಿಪಡಿಸಬಹುದು. ಅಂತಹದ್ದೊಂದು ಮೊಬೈಲ್ ಆ್ಯಪನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ. ಆ ಬಗ್ಗೆ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ ನೋಡಿ.

ಬೆಂಗಳೂರು ಮಹಾನಗರ ಪಾಲಿಕೆಯ ಆವಿಷ್ಕಾರ

ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿತಿರುವಾಗ ಚುನಾವಣಾ ಆಯೋಗವು ಭರದಿಂದ ಕೆಲಸ ಮಾಡುತ್ತಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಬೆಂಗಳೂರಿನ ಮಹಾನಗರ ಪಾಲಿಕೆಯ ಚುನಾವಣಾ ವಿಭಾಗ ಈ ನೂತನ ಆ್ಯಪ್ ಅಭಿವೃದ್ಧಿಪಡಿಸಿದ್ದು, ಮತಗಟ್ಟೆಯಲ್ಲಿ ಉಂಟಾಗುವ ಗೊಂದಲ, ಮಾರುದ್ದದ ಸರತಿ ಸಾಲನ್ನು ತಪ್ಪಿಸಲು ಈ ಮಾರ್ಗ ಕಂಡಯಕೊಳ್ಳಲಾಗಿದೆ ಎನ್ನಲಾಗಿದೆ. ಈ ಅ್ಯಪ್ ಮೂಲಕ ಮತದಾನಕ್ಕೆ ಸಮಯ ನಿಗದಿಪಡಿಸಿ, ಯಾವುದೇ ಅಡೆತಡೆಯಿಲ್ಲದೆ ಮತದಾನ ಮಾಡಬಹುದಾಗಿದೆ. ಸದ್ಯಕ್ಕೆ, ಈ ನೂತನ ಆ್ಯಪ್ ಬಿಡುಗಡೆಗೆ ಸಜ್ಜಾಗಿದೆ ಎನ್ನಲಾಗಿದೆ.

ಮೆಸೇಜ್‌ ಮೂಲಕ ಖಾತ್ರಿಯಾಗಲಿದೆ ನಿಮ್ಮ‌ ಸಮಯ

ಮೊಬೈಲ್‌ ಆ್ಯಪ್ ನಲ್ಲಿ ಚುನಾವಣೆ, ಮತದಾನಕ್ಕೆ ಸಂಬಂಧಿಸಿದ ವಿಷಯಗಳ ಮಾಹಿತಿಗಳು ಲಭ್ಯವಿರಲಿದೆ. ಅದರಲ್ಲಿ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆ ನಮೂದಿಸಬೇಕಾಗುತ್ತದೆ. ಅನಂತರ ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಮಾಹಿತಿ ಆ್ಯಪ್ ಮೂಲಕವೇ ತಿಳಿಯಬಹುದಾಗಿದೆ.

ಇದಿಷ್ಟೇ ಅಲ್ಲದೆ , ಈ ಆ್ಯಪ್ ಮೂಲಕ ತಾವು ಯಾವ ಸಮಯದಲ್ಲಿ ಮತದಾನ ಮಾಡಲು ಬರುತ್ತೇವೆ ಎಂಬುದನ್ನು ಮತದಾರರು ನಮೂದಿಸಿದರೆ, ಅದನ್ನು ನೋಂದಣಿ ಮಾಡಿಕೊಂಡು, ಅವರ ಮೊಬೈಲ್‌ಗೆ ಎಸ್‌ಎಂಎಸ್‌ ಮೂಲಕ ಖಾತ್ರಿಯ ಸಂದೇಶ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ಈ ಆ್ಯಪ್ ಮುಂದಿನ ಚುನಾವಣೆಗೆ ಅಸ್ತಿತ್ವ ಪಡೆದುಕೊಂಡರೆ ಮತಗಟ್ಟೆಯಲ್ಲಿ ಸಮಯ ವ್ಯರ್ಥ ಆಗುವುದನ್ನು ತಡೆಯಬಹುದಾಗಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *