ಕೋಕಾ ಕೋಲಾ ಸ್ಮಾರ್ಟ್ಫೋನ್ ಮಾರುಕಟ್ಟೆಗೆ – ನಿಮ್ಮನ್ನು ನಿಬ್ಬೆರಗಾಗಿಸುತ್ತೆ ಇದರ ಫೀಚರ್ಸ್..!!

ಕೋಕಾ ಕೋಲಾ ಸ್ಮಾರ್ಟ್ಫೋನ್ ಮಾರುಕಟ್ಟೆಗೆ – ನಿಮ್ಮನ್ನು ನಿಬ್ಬೆರಗಾಗಿಸುತ್ತೆ ಇದರ ಫೀಚರ್ಸ್..!!

ನ್ಯೂಸ್ ಆ್ಯರೋ : ವ್ಯಾಪಕವಾಗಿ ಬೆಳವಣಿಗೆ ಕಾಣುತ್ತಿರುವ ಮೊಬೈಲ್ ಮಾರುಕಟ್ಟೆಗೆ ದಿನಕ್ಕೊಂದು ಮೊಬೈಲ್ ತಯಾರಿಕಾ ಕಂಪೆನಿಗಳೊಂದಿಗೆ, ಸ್ಮಾರ್ಟ್ಫೋನ್ ಲಗ್ಗೆ ಇಡುತ್ತಿದೆ. ಇದೀಗ, ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ, ಸಾಪ್ಟ್ ಡ್ರಿಂಕ್ಸ್ ಸಾಮ್ರಾಜ್ಯದ ಅಧಿಪತಿ ಕೋಕಾ ಕೋಲಾ ಹೆಸರು ಕೇಳಿ ಬರುತ್ತಿದೆ‌.

ಹೌದು, ವಿಶ್ವದಾದ್ಯಂತ ಮಾರುಕಟ್ಟೆಯಿರುವ ಅಮೇರಿಕಾ ಮೂಲದ ಕೂಲ್ ಡ್ರಿಂಕ್ಸ್ ತಯಾರಿಕಾ‌ ಸಂಸ್ಥೆ ಇದೀಗ, ಮೊಬೈಲ್ ಮಾರುಕಟ್ಟೆಯನ್ನು ಆವರಿಸಿಕೊಳ್ಳಲು ತಯಾರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೋಕಾ‌ ಕೋಲಾ ಕಂಪೆನಿಯ ಹೊಸ ಮೊಬೈಲ್ ಫೋನ್‌ನ ಫೀಚರ್ಸ್ ಹಾಗೂ ವಿನ್ಯಾಸ ಸಾಕಷ್ಟು ವೈರಲ್ ಆಗುತ್ತಿದೆ‌.

ಸ್ಮಾರ್ಟ್ಫೋನ್ ಫೋಟೋ ಹಂಚಿಕೊಂಡ ಮುಕುಲ್ ಶರ್ಮಾ

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಾಗಿರುವ ಕೋಕಾ‌ ಕೋಲಾ ಕಂಪೆನಿಯ ಮುಕುಲ್ ಶರ್ಮಾ ಟ್ವಿಟ್ಟರ್ ಮೂಲಕ ಸ್ಮಾರ್ಟ್ಫೋನ್ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋನ್ ಕೆಂಪು ಬಣ್ಣದ ವೇರಿಯಂಟಲ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ‌.

ಕೋಕಾ‌ ಕೋಲಾ ಸ್ಮಾರ್ಟ್ಫೋನ್ ಹೀಗಿದೆ..

ಮುಕುಲ್ ಶರ್ಮಾ ಶೇರ್ ಮಾಡಿರುವ ಫೋಟೋ ಬಗ್ಗೆ ಹೇಳುವುದಾದರೆ, ಫೋನ್ ಹಿಂಬಾಗದ ಫ್ಯಾನಲ್ ನಲ್ಲಿ ಕೋಕಾ‌ ಕೋಲಾ ಬ್ರಾಂಡಿಂಗನ್ನು‌‌ ದೊಡ್ಡ ಫಾಂಟ್ ನಲ್ಲಿ ಬರೆಯಲಾಗಿದೆ‌. ಈ ಫೋನ್ ಡ್ಯುಯಲ್ ರೀಯಲ್ ಕ್ಯಾಮರದೊಂದಿಗೆ, ಎಲ್ಇಡಿ ಫ್ಲಾಶ್‌ ಹೊಂದಿರಬಹುದು ಎಂದು‌ ಅಂದಾಜಿಸಲಾಗಿದೆ. ಇ‌ನ್ನು, ಹಿಂಬಾಗದಲ್ಲಿ ಫಿಂಗರ್‌ ಪ್ರಿಂಟ್ ಇಲ್ಲದ ಕಾರಣ, ಸೈಡ್ ಪವರ್ ಬಟನ್ ಪಕ್ಕದಲ್ಲಿ ಫಿಂಗರ್‌ ಪ್ರಿಂಟ್ ಇರುವ ಸಾಧ್ಯತೆ ಇದೆ. ಇದೇ ವರ್ಷ ಮೊಬೈಲ್ ಮಾರುಕಟ್ಟೆಗೆ ಕೋಕಾ‌ ಕೋಲಾ ಕಂಪೆನಿಯ ಮೊದಲ ಸ್ಮಾರ್ಟ್ಫೋನ್ ಪಾದಾರ್ಪಣೆ ಮಾಡಬಹದು ಎನ್ನಲಾಗಿದೆ‌.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *