
ರಾಯಲ್ ಎನ್ಫೀಲ್ಡ್ ಗೆ ಪೈಪೋಟಿ ನೀಡಲು ಬರುತ್ತಿದೆ ಸಿಬಿ350 ಬಾಬ್ಟ್ ಕಫೆ ರೇಸರ್ ಬೈಕ್ – ಹೇಗಿದೆ ಗೊತ್ತಾ ಇದರ ಫೀಚರ್ಸ್?
- ಟೆಕ್ ನ್ಯೂಸ್
- November 16, 2023
- No Comment
- 39
ನ್ಯೂಸ್ ಆ್ಯರೋ : ಹೋಂಡಾ ಮೋಟಾರು ಸೈಕಲ್ ಕಂಪೆನಿಯು ಶೀಘ್ರದಲ್ಲೇ ಇನ್ನಷ್ಟು ಪ್ರೀಮಿಯಂ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಸಿಬಿ350 ಆಧರಿಸಿರುವ ಹೊಸ ಸಿಬಿ350 ಬಾಬ್ಟ್ ಕಫೆ ರೇಸರ್ ಬೈಕ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿದೆ.
ಬಿಗ್ ವಿಂಗ್ ಶೋರೂಂಗಳ ಮೂಲಕ ಪ್ರೀಮಿಯಂ ಬೈಕ್ ಮಾರಾಟದ ಮೇಲೆ ಹೆಚ್ಚಿನ ಗಮನಹರಿಸುತ್ತಿರುವ ಹೋಂಡಾ ಮೋಟಾರ್ ಸೈಕಲ್ ಈಗ ಹೊಸ ಸಿಬಿ350 ಬಾಬ್ಟ್ ಕಫೆ ರೇಸರ್ ಬೈಕ್ ಮಾದರಿಯ ಮೊದಲ ಟೀಸರ್ ಅನ್ನು ಹಂಚಿಕೊಂಡಿದೆ.
ರಾಯಲ್ ಎನ್ ಫೀಡ್ ಕ್ಲಾಸಿಕ್ 350 ಮತ್ತು ಬುಲೆಟ್ 350 ಮಾದರಿಗಳಿಗೆ ಪೈಪೋಟಿಯಾಗಿ 350 ಸಿಸಿ ವಿಭಾಗದಲ್ಲಿ ಹೊಸ ಸಿಬಿ 350 ಬಾಬ್ಟ್ ಕಫೆ ರೇಸರ್ ಬೈಕ್ ಹೊರಬರಲಿದೆ.
ಬುಲೆಟ್ ಮತ್ತು ಕ್ಲಾಸಿಕ್ 350 ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲು ಮಾರುಕಟ್ಟೆಯಲ್ಲಿ ಸಿಬಿ350 ಆರ್ ಎಸ್ ಬೈಕ್ ಮಾದರಿ ಲಭ್ಯತೆವಿದ್ದರೂ ಇದು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ.
ಗ್ರಾಹಕರ ಬೇಡಿಕೆಯಂತೆ ಸಿಬಿ350 ಆರ್ ಎಸ್ ನವೀಕರಣ ಮಾಡಿ ಹೊಸ ಸಿಬಿ350 ಬಾಬ್ಟ್ ಬಿಡುಗಡೆ ಮಾಡಲಾಗುತ್ತಿದ್ದು 2.20 ಲಕ್ಷದಿಂದ ರೂ. 2.50 ಲಕ್ಷ ರೂ. ಗೆ ಮಾರುಕಟ್ಟೆಗೆ ಬರಲಿದೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡು ವಿಶೇಷ ವಿನ್ಯಾಸದ ಹೊಸ ಸಿಬಿ350 ಬಾಬ್ಟ್ ಬೈಕ್ ಮಾದರಿಯು 350 ಸಿಸಿ ಎಂಜಿನ್ ನೊಂದಿಗೆ ಕ್ಲಾಸಿಕ್ ಆಗಿ ನಿರ್ಮಾಣವಾಗುತ್ತಿದೆ. 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 21 ಹಾರ್ಸ್ ಪವರ್ ಮತ್ತು 30 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ನಿತ್ಯದ ಬಳಕೆಯ ಜೊತೆಗೆ ಅಡ್ವೆಂಚರ್ ಚಾಲನಾ ಉದ್ದೇಶಕ್ಕೂ ಇದನ್ನು ಬಳಸಬಹುದಾಗಿದೆ.
ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್ ಜೊತೆಗೆ ಹೋಂಡಾ ಸ್ಮಾರ್ಟ್ ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂ, ಎಲ್ಇಡಿ ಲೈಟ್ಸ್, ಅಸಿಸ್ಟ್ ಅಂಡ್ ಸ್ಲಿಪ್ಪರ್ ಕ್ಲಚ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಅಪ್ ಮತ್ತು ಗೇರ್ ಪೊಸಿಷನ್ ಇಂಡಿಕೇಟರ್ ಸೌಲಭ್ಯಗಳನ್ನು ಹೊಂದಿರುವ ಈ ಹೊಸ ಬೈಕ್ ನ ಮಾದರಿಯ ಕುರಿತಾಗಿ ಇತರ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪೆನಿ ಹಂಚಿಕೊಂಡಿಲ್ಲ.
2024ರ ಜನವರಿಯಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆ ಇದ್ದು, ಟೀಸರ್ ಬಗ್ಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ.