Shikhar Dhawan : ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ “ಗಬ್ಬರ್” – ಬಲಿಷ್ಠ ಎಡಗೈ ಆಟಗಾರ ಇನ್ನು ಕ್ರಿಕೆಟ್ ನಿಂದ ದೂರ
ನ್ಯೂಸ್ ಆ್ಯರೋ : ಗಬ್ಬರ್ ಖ್ಯಾತಿಯ ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಘೋಷಿಸಿದ್ದು, ವಿದಾಯ ಪಂದ್ಯವೇ ಇಲ್ಲದೆ ನಿವೃತ್ತಿಯಾದ ಆಟಗಾರರ ಪಟ್ಟಿ ಸೇರಿದ್ದಾರೆ.
ಕ್ರಿಕೆಟಿಗ ಶಿಖರ್ ಧವನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮೂರು ಸ್ವರೂಪಗಳು ಮತ್ತು ಇತರ ಎಲ್ಲಾ ಪಂದ್ಯಗಳಿಂದ ನಿವೃತ್ತಿ ಘೋಷಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಶಿಖರ್ ಧವನ್ ನನ್ನ ಕ್ರಿಕೆಟ್ ಪ್ರಯಾಣದ ಈ ಅಧ್ಯಾಯವನ್ನು ನಾನು ಮುಗಿಸುತ್ತಿರುವಾಗ, ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಯನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು! ಜೈ ಹಿಂದ್!” ಎಂದು ಬರೆದುಕೊಂಡಿದ್ದಾರೆ.
1985ರ ಡಿಸೆಂಬರ್ 5ರಂದು ಹೊಸದಿಲ್ಲಿಯಲ್ಲಿ ಜನಿಸಿದ ಶಿಖರ್ ಧವನ್ ಅವರು ಧೋನಿ ಹಾಗೂ ಕೊಹ್ಲಿ ನಾಯಕತ್ವದ ಅವಧಿಯಲ್ಲಿ ರೋಹಿತ್ ಶರ್ಮಾ ಜೊತೆಗೂಡಿ ಟೀಂ ಇಂಡಿಯಾ ತಂಡಕ್ಕೆ ಬಲಿಷ್ಠ ಆರಂಭ ಒದಗಿಸುವಲ್ಲಿ ಭಾರೀ ಪಾತ್ರ ನಿರ್ವಹಿಸುತ್ತಿದ್ದರು. ತದನಂತರ ಫಾರ್ಮ್ ಕಳೆದುಕೊಂಡ ಧವನ್ ಟೀಂ ಇಂಡಿಯಾದಿಂದ ದೂರವಾಗಿದ್ದರು.
Leave a Comment