Viral News : ಈ ಶಿಕ್ಷಕಿಯ ಎದೆಯ ಭಾಗ ದೊಡ್ಡದಿರೋದೇ ಸಮಸ್ಯೆಯಂತೆ..! – ಎಂಟನೇ ತರಗತಿಯ ವಿದ್ಯಾರ್ಥಿಯ ದೂರು ಶಾಲೆಗೆ ಹೊತ್ತು ತಂದ ಪೋಷಕರು..!!

20240824 141735
Spread the love

ನ್ಯೂಸ್ ಆ್ಯರೋ : ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕ ಅಥವಾ ಶಿಕ್ಷಕರ ಮೇಲೆ ಕೆಲ ಮಕ್ಕಳಿಗೆ ಕ್ರಶ್ ಆಗುವ ಸುದ್ದಿಗಳನ್ನು ಆಗಾಗ ಎಲ್ಲಾದರೂ ಓದಿರುತ್ತೀರಿ ಅಥವಾ ಕೇಳಿರುತ್ತೀರಿ. ಆದರೆ ಶಿಕ್ಷಕಿಯೊಬ್ಬರ ಎದೆ ಭಾಗ ದೊಡ್ಡದಿದೆ ಎಂಬ ಬಗ್ಗೆ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರಿರುವ ಬಗ್ಗೆ ಶಿಕ್ಷಕಿಯೊಬ್ಬರು ರೆಡ್ಡಿಟ್ ನಲ್ಲಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಶಿಕ್ಷಕಿ ಪೋಸ್ಟ್ ಹಾಕಿ ಈ ವಿಚಾರದ ಬಗ್ಗೆ ಹಂಚಿಕೊಂಡಿದ್ದಾಳೆ. ಆಕೆ ಕಳೆದ ಆರು ವರ್ಷಗಳಿಂದ ಹೈಸ್ಕೂಲ್ ಮಕ್ಕಳಿಗೆ ಕಲಿಸುತ್ತಿದ್ದಾಳೆ. ಆಕೆ ಬ್ರೆಸ್ ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಿದೆ. ಇದು ಮುಜುಗರತರಿಸಬಾರದು ಎನ್ನುವ ಕಾರಣಕ್ಕೆ ಶಿಕ್ಷಕಿ ಸದಾ ಡ್ರೆಸ್ ಕೋಡ್ ಪಾಲನೆ ಮಾಡ್ತಾರೆ. ಒಂದು ದಿನವೂ ಯುನಿಫಾರ್ಮ್ ಮರೆಯದ ಶಿಕ್ಷಕಿ, ಬಹಳ ಎಚ್ಚರಿಕೆಯನ್ನು ವಹಿಸ್ತಾಳೆ. ಇಷ್ಟಾದ್ರೂ ಎಂಟನೇ ತರಗತಿ ಓದುವ ವಿದ್ಯಾರ್ಥಿಯೊಬ್ಬನ ಕಣ್ಣು ಅದ್ರ ಮೇಲೆ ಬಿದ್ದಿದೆಯಂತೆ..!

ವಿದ್ಯಾರ್ಥಿ ಪಾಲಕರು, ಸ್ಕೂಲ್ ಗೆ ಬಂದು ಶಿಕ್ಷಕಿ ಬ್ರೆಸ್ಟ್ ಬಗ್ಗೆ ಮಗ ಮಾತನಾಡ್ತಿದ್ದ ಎಂದಿದ್ದಾರೆ. ಶಿಕ್ಷಕಿ ಡ್ರೆಸ್ ಕೋಡ್ ಪಾಲನೆ ಮಾಡ್ತಿಲ್ಲ, ಹಾಗಾಗಿ ಮಗ ಇಂಥ ವಿಷ್ಯವನ್ನು ಮಾತನಾಡ್ತಿದ್ದಾನೆಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದರು. ಹೆಚ್ ಎಂ, ಶಿಕ್ಷಕಿಯನ್ನು ಕರೆದು ಇದ್ರ ಬಗ್ಗೆ ಮಾತನಾಡಿದ್ದಾರೆ. ಮಕ್ಕಳು ತನ್ನ ಬ್ರೆಸ್ಟ್ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಶಿಕ್ಷಕಿ ಆಘಾತಕ್ಕೊಳಗಾಗಿದ್ದಾಳೆ.

ನನ್ನ ದೇಹದ ಬಗ್ಗೆ ನನ್ನ ಪಾಲಕರು ಎಂದೂ ಮಾತನಾಡಿಲ್ಲ. ನಿಮಗೆ ಇಂಥ ಸಮಸ್ಯೆ ಕಾಡಿದೆಯಾ? ನಾನು ಆರೋಗ್ಯವಂತ ಮಹಿಳೆ, ದೈಹಿಕವಾಗಿ ನಾನು ಅದನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಶಿಕ್ಷಕಿ ಪೋಸ್ಟ್ ಹಂಚಿಕೊಂಡಿದ್ದಾಳೆ.

ಮಗು ಹಾಗು ಪೋಷಕರು ಯಾರು ಎಂಬುದು ನನಗೆ ತಿಳಿದಿಲ್ಲ. ನನಗೆ ವಿದ್ಯಾರ್ಥಿ ಹೀಗೆ ಹೇಳಿದ್ದಾನೆ ಎಂಬುದನ್ನು ನಂಬೋದು ಕಷ್ಟ. ಆ ವಿದ್ಯಾರ್ಥಿ ಯಾರು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇಲ್ಲ. ತಿಳಿದ್ರೆ ಪಾಠ ಮಾಡಲು ತೊಂದರೆಯಾಗುತ್ತದೆ. ಅದು ವೈಯಕ್ತಿಕ ಕಮೆಂಟ್ ಆಗಿರೋದ್ರಿಂದ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅದನ್ನು ಶಾಲೆ ಆಡಳಿತ ಮಂಡಳಿ ಹ್ಯಾಂಡಲ್ ಮಾಡ್ತಿದೆ ಎಂದು ಶಿಕ್ಷಕಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾಳೆ.

ಶಿಕ್ಷಕಿಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ತಿದ್ದಾರೆ. ಪಾಲಕರು ಅಡ್ಮಿನ್ ಗೆ ಬಂದು ತಿಳಿಸಿದ ವಿಷ್ಯವನ್ನು ಅಡ್ಮಿನ್ ನಿಮಗೆ ಹೇಳಬಾರದಿತ್ತು ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಇನ್ನೊಬ್ಬರು ಈ ವಿಷ್ಯವನ್ನು ಅಡ್ಮಿನ್ ವರೆಗೆ ತಂದ ಪಾಲಕರನ್ನು ದೂಷಿಸಿದ್ದಾರೆ.

ಮಕ್ಕಳಿಗೆ ಬೇರೆಯವರ ದೇಹವನ್ನು ಗೌರವಿಸಬೇಕು, ಅದ್ರ ಬಗ್ಗೆ ಮಾತನಾಡಬಾರದು ಎಂದು ಪಾಲಕರು ಸಲಹೆ ನೀಡಬೇಕು. ಶಿಕ್ಷಕರನ್ನು ಹೇಗೆ ನೋಡ್ಬೇಕು, ಅವರನ್ನು ಹೇಗೆ ಕಾಣಬೇಕು ಎಂಬುದನ್ನು ಪಾಲಕರು ತಿಳಿಸಬೇಕು. ಆದ್ರೆ ಪಾಲಕರು ಇಂಥ ವಿಷ್ಯವನ್ನು ಶಾಲೆಗೆ ತಂದು ಮತ್ತಷ್ಟು ದೊಡ್ಡದು ಮಾಡಿದ್ದಾರೆ. ಇದ್ರಲ್ಲಿ ಪೋಷಕರ ತಪ್ಪು ಹೆಚ್ಚಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Leave a Comment

Leave a Reply

Your email address will not be published. Required fields are marked *