
ರಾಜ್ಯದಲ್ಲಿ ಎಲ್ಲಿಯೂ ‘ಸ್ಮಶಾನವಿರದ’ ಗ್ರಾಮವಿರಬಾರದು – ರಾಜ್ಯ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ರವಾನಿಸಿದ ಹೈಕೋರ್ಟ್
- ಕರ್ನಾಟಕ
- March 17, 2023
- No Comment
- 33
ನ್ಯೂಸ್ ಆ್ಯರೋ : ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಷ್ಟ್ರೀಯ ರಾಜಕೀಯ ಪಕ್ಷಗಳೆಲ್ಲವೂ ಭರದಿಂದ ಪ್ರಚಾರ ನಡೆಸುತ್ತಿವೆ. ಮತದಾರರನ್ನು ಸೆಳೆಯುವ ಉದ್ದೇಶದಿಂದ ಅದ್ದೂರಿಯಾದ ಯೋಜನೆಗಳ ಘೋಷಣೆಯಾಗುತ್ತಿವೆ. ಆದರೆ ಈ ನಡುವೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೊಂದು ಖಡಕ್ ವಾರ್ನಿಂಗ್ ರವಾನಿಸಿದೆ.
ಹೌದು, ಹೈಕೋರ್ಟ್ ‘ರಾಜ್ಯದಲ್ಲಿ ಎಲ್ಲಿಯೂ ಸ್ಮಶಾನ ಭೂಮಿ ಇರದ ಗ್ರಾಮಗಳು ಇರಬಾರದು. ಒಂದು ವೇಳೆ ಸ್ಮಶಾನಗಳಿರದ ಗ್ರಾಮಗಳಿದ್ದರೆ ಆ ಬಗ್ಗೆ ಜನರಿಂದ ಮಾಹಿತಿ ಪಡೆಯುವ ಸಲುವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಬೇಕು ಎಂದಿದೆ.
ಗ್ರಾಮ, ಗ್ರಾಮಗಳಲ್ಲಿ ಹೇಗೆ ಮತದಾನದ ಹಕ್ಕುಗಳಿವೆಯೋ ಹಾಗೆಯೇ ಅಲ್ಲಿನ ಜನರಿಗೆ ಸೂಕ್ತ ಮೂಲಭೂತ ಹಕ್ಕುಗಳಿರಬೇಕು. ಮತದಾನ ಬಂದಾಗ ಘೋಷಣೆಗಳನ್ನೋ, ಉಡುಗೊರೆಗಳನ್ನೋ ಹಂಚುವ ಬದಲು ಜನರಿಗೆ ಬೇಕಾದ ಮೂಲ ಸೌರ್ಯಗಳನ್ನು ಒದಗಿಸಿ ಎಂದು ಹೈಕೋರ್ಟ್ ತಿಳಿಸಿದೆ.
ಸ್ಮಶಾನ ಭೂಮಿಯನ್ನು ಒದಗಿಸಿರುವ ಬಗ್ಗೆ ಸುಳ್ಳು ದಾಖಲೆಗಳನ್ನು ನೀಡಿರುವ ಕೆಲ ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಭೇಟಿ ನೀಡಲು ಹೈಕೋರ್ಟ್ ಆದೇಶ ಹೊರಡಿಸಿತ್ತು. ಸ್ಮಶಾನವಿಲ್ಲದ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಿಗೆ ಸೂಕ್ತ ಭೂಮಿ ಒದಗಿಸುವ ಬಗ್ಗೆ ಹೈಕೋರ್ಟ್ ಹೊರಡಿಸಿರುವ ಅದೇಶವನ್ನು ಸರ್ಕಾರ ಗಾಳಿಗೆ ತೂರಿದೆ ಎಂದು ಬೆಂಗಳೂರಿನ ಇಕ್ಬಾಲ್ ಅವರು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆಗೂ ಮುನ್ನ ಸ್ಮಶಾನ ಕೊರತೆ ನೀಗಲಿದೆಯಾ ಎಂದು ಇನ್ನಷ್ಟೇ ಕಾದು ನೋಡಬೇಕಾಗಿದೆ.