
Udupi : ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ – ಮೃತರ ಮನೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್ ಹೇಳಿದ್ದೇನು?
- ಕರ್ನಾಟಕ
- November 17, 2023
- No Comment
- 68
ನ್ಯೂಸ್ ಆ್ಯರೋ : ರಾಜ್ಯದಾದ್ಯಂತ ಹಬ್ಬದ ಸಂಭ್ರಮ ಇರುವಾಗಲೇ ಕರಾವಳಿ ತೀರ ಉಡುಪಿಯಲ್ಲೂ ಹಬ್ಬದ ಛಾಯೆ ಕಳೆಗುಂದಿತ್ತು. ಹಬ್ಬದ ದಿನವೇ ರಜೆಯ ಸಂಭ್ರಮದಲ್ಲಿದ್ದ ಗಗನಸಖಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ನಡೆದಿದ್ದು ಎಲ್ಲರಿಗೂ ಈ ಘಟನೆ ಆಘಾತ ತಂದಿಟ್ಟಿತ್ತು. ಇಡೀ ಉಡುಪಿ ಜಿಲ್ಲೆಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗಿತ್ತು. ಹಾಡು ಹಗಲೇ ನಡೆದ ಈ ಅಮಾನುಷ ಕೃತ್ಯಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಉಡುಪಿ ತಾಲೂಕಿನ ಮಲ್ಪೆಯ ಕೆಮ್ಮಣ್ಣು ನೇಜಾರಿನ ನಿವಾಸಿಗಳಾದ ಹಸಿನಾ(48) ಮಕ್ಕಳಾದ ಅಫ್ನಾನ್(23), ಅಯ್ನಾಝ್(21) ಹಾಗೂ ಅಸೀಮ್(12) ಕೊಲೆಯಾದವರು. ಕೃತ್ಯ ಎಸಗಿದ್ದ ಅನಾಮಿಕ ವ್ಯಕ್ತಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಮೃತರ ಮನೆಗೆ ಭೇಟಿ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು..?
ಇದೀಗ ಮೃತರ ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು ‘ಉಡುಪಿಯಲ್ಲಿ ಎಲ್ಲರೂ ಬೆಚ್ಚಿ ಬೀಳುವ ಘಟನೆ ನಡೆದಿದೆ. ಆರೋಪಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಅಮಾನುಷವಾಗಿ ಕೊಂದಿದ್ದಾನೆ. ರಾಕ್ಷಸ ಕೃತ್ಯ ಎಸಗಿದ್ದಾನೆ. ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಪೊಲೀಸ್ ಇಲಾಖೆಯ ಕೆಲಸ ಶ್ಲಾಘನೀಯ. ಆದಷ್ಟು ಬೇಗ ನ್ಯಾಯ ದೊರಕಿಸಲು ಪ್ರಯತ್ನ ಪಡುತ್ತೇವೆ.
ಉಡುಪಿ ಜಿಲ್ಲೆ ಶಾಂತಿ ಪ್ರಿಯರ ಜಿಲ್ಲೆ, ಈ ಜಿಲ್ಲೆಯಲ್ಲಿ ಇಂತಹ ಕುಕೃತ್ಯ ನಡೆಯಲೇಬಾರದು. ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ. ಆ ಆರೋಪಿ ಎನ್ನಿಸಿಕೊಂಡವನು ಸೈಕೋ ರೀತಿಯಲ್ಲಿ ವರ್ತಿಸಿದ್ದಾನೆ. ಮದುವೆ ಕೂಡಾ ಆಗಿದ್ದಾನೆ. 20ನಿಮಿಷದಲ್ಲಿ ಕೃತ್ಯ ಮಾಡಿದ ಈತನ ಮೆಂಟಲ್ ಸ್ಟೇಟಸ್ ಯಾವ ರೀತಿ ಇರಬಹುದು. ಫಾಸ್ಟ್ ಟ್ರಾಕ್ ನ್ಯಾಯಾಲಯದ ಮೂಲಕ ತನಿಖೆಗೆ ಒತ್ತಾಯಿಸಿದ್ದಾರೆ. ಮನೆಯವರು ಈಗಾಗಲೇ ಒಬ್ಬರ ಹೆಸರು ಕೊಟ್ಟಿದ್ದಾರೆ. ಅವರ ಮೂಲಕ ತನಿಖೆ ಮಾಡುತ್ತೇವೆ.
ನಾನು ಬೆಳಗಾವಿಯಲ್ಲಿ ಇದ್ದ ಕಾರಣ ಬರಲು ಸ್ವಲ್ಪ ತಡವಾಯಿತು. ಆದರೂ ಅಲ್ಲಿಂದಲೇ ನಾನು ಕುಟುಂಬದ ಹಾಗೂ ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಈ ಘಟನೆಗೆ ಖಂಡಿತವಾಗಿಯೂ ನ್ಯಾಯ ದೊರಕಿಸಿಕೊಡುತ್ತೇನೆ’ ಎಂದು ಹೇಳಿದರು.