Rolls-Royce, Toyota Land Cruiser Prado, and other conman Sukesh's cars going for auction, bidding starts at Rs

ಜೈಲಿನಲ್ಲಿರುವ ಸುಕೇಶ್ ರೋಲ್ಸ್ ರಾಯ್ಸ್ ಸೇರಿ ಕೋಟ್ಯಾಂತರ ಮೌಲ್ಯದ ದುಬಾರಿ ಕಾರುಗಳ ಹರಾಜು! – ಬೆಲೆ ಮಾತ್ರ ಕೇವಲ 2ಲಕ್ಷ..! ಹರಾಜು‌ ದಿನಾಂಕ ಯಾವಾಗ ಗೊತ್ತೇ?

ನ್ಯೂಸ್ ಆ್ಯರೋ : 200 ಕೋಟಿ ಸುಲಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಸುಕೇಶ್ ಚಂದ್ರಶೇಖರ್ ಅವರಿಗೆ ಸೇರಿದ ಬಹುತೇಕ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಇದೀಗ ಸುಕೇಶ್ ಬಳಸಿದ್ದ ಐಶಾರಾಮಿ ಕಾರುಗಾದ ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಜ್, ಬ್ಯಾಂಬೋರ್ಗಿನಿ ಸೇರಿದಂತೆ ಕೋಟ್ಯಾಂತರ ಮೌಲ್ಯದ ಕಾರುಗಳು ಪೊಲೀಸರ ವಶದಲ್ಲಿದ್ದು, ಈ ಕಾರಿಗಳು ಹರಾಜಿನಲ್ಲಿ ಕೇವಲ 2 ಲಕ್ಷ ರೂಪಾಯಿಗೆ ಲಭ್ಯವಿದೆ ಎನ್ನುವ ವಿಚಾರ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಬಗೆಗಿನ ಡೀಟಿಯಲ್ಸ್ ಇಲ್ಲಿದೆ.

ನ.28 ರಂದು ಐಶಾರಾಮಿ ಕಾರುಗಳ ಹರಾಜು!

ವಂಚಕ ಸುಕೇಶ್ ಚಂದ್ರಶೇಖರ್ ಬಳಸಿದ್ದ ಬಹುಕೋಟಿ ಮೌಲ್ಯದ ಐಶಾರಾಮಿ ಕಾರುಗಳಾದ ಆಸ್ಟನ್ ಮಾರ್ಟಿನ್, ರೇಂಜ್ ರೋವರ್, ರೋಲ್ಸ್ ರಾಯ್ಸ್, BMW M5, ಜಗ್ವಾರ್ XKR ಕೂಪ್, ಟೊಯೋಟಾ ಇನೋವಾ ಕ್ರಿಸ್ಟಾ, ನಿಸಾನ್ ಟೆನಾ, ಟೋಯೋಟಾ ಫಾರ್ಚುನರ್, ಬೆಂಟ್ಲಿ, ಲ್ಯಾಂಬೋರ್ಗಿನಿ, ಟೋಯೋಟಾ ಪ್ರಾಡೋ ಸೇರಿದಂತೆ‌ ಇನ್ನಿತರ‌ಕಾರುಗಳು ಪೊಲೀಸ್ ಸುಪರ್ದಿಯಲ್ಲಿದ್ದು, ಇವುಗಳನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನ.28 ರಂದು ಐಶಾರಾಮಿ ಕಾರುಗಳ ಹರಾಜು ಪ್ರಕ್ರಿಯೆಯ ನಡೆಯಲಿದೆ ಎನ್ನಲಾಗಿದೆ.

80 ಕೋಟಿ ಮೌಲ್ಯದ ಕಾರು 2ಲಕ್ಷಕ್ಕೆ ಹರಾಜು!

ಸದ್ಯ, ಸುಕೇಶ್ ಬಳಸಿದ್ದ ಐಶಾರಾಮಿ ಕಾರುಗಳಾದ ಆಸ್ಟನ್ ಮಾರ್ಟಿನ್, ರೇಂಜ್ ರೋವರ್, ರೋಲ್ಸ್ ರಾಯ್ಸ್, BMW M5, ಜಗ್ವಾರ್ XKR ಕೂಪ್, ಟೊಯೋಟಾ ಇನೋವಾ ಕ್ರಿಸ್ಟಾ, ನಿಸಾನ್ ಟೆನಾ, ಟೋಯೋಟಾ ಫಾರ್ಚುನರ್, ಬೆಂಟ್ಲಿ, ಲ್ಯಾಂಬೋರ್ಗಿನಿ, ಟೋಯೋಟಾ ಪ್ರಾಡೋ ಕಾರುಗಳ ಒಟ್ಟು ಮೌಲ್ಯ ಬರೋಬ್ಬರಿ 80 ಕೋಟಿ. ಈ ಎಲ್ಲಾ ಕಾರುಗಳನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಕೇವಲ 2.03ಲಕ್ಷ ಆರಂಭಿಕ ಬೆಲೆಗೆ ಇವುಗಳನ್ನು ಹರಾಜು ಹಾಕಲಾಗುವುದು ಎನ್ನಲಾಗಿದೆ. ಇದರೊಂದಿಗೆ ವಂಚಕ ಸುಕೇಶ್ ಆಸ್ತಿ, ಪಾಸ್ತಿ ಜಪ್ತಿ ಹಾಗೂ ಹರಾಜಿನಿಂದ ಅಂದಾಜು 350 ಕೋಟಿ ವಸೂಲಿ ಮಾಡಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಜೈನಲ್ಲಿದ್ದುಕೊಂಡೇ 200 ಕೊಟಿ ವಂಚನೆ!

ಇನ್ನು ಉದ್ಯಮಿ ಶಿವೇಂದರ್‌ ಸಿಂಗ್‌ರನ್ನು ಜಾಮೀನಿನ ಮೇಲೆ ಬಿಡಿಸಲು ವಂಚಕ ಸುಕೇಶ್‌ ಚಂದ್ರಶೇಖರ್‌, ಶಿವೇಂದರ್ ಪತ್ನಿ ಅದಿತಿಗೆ ದೂರವಾಣಿ ಕರೆ ಮಾಡಿ, ತಾನು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿ. 200 ಕೋಟಿ ರು. ಕೊಟ್ಟರೆ ನಿಮ್ಮ ಪತಿಗೆ ಜಾಮೀನು ಕೊಡಿಸಲು ನೆರವಾಗುವುದಾಗಿ ನಂಬಿಸಿದ್ದಲ್ಲದೆ, ಅವರಿಂದ 200 ಕೋಟಿ ಪಡೆದುಕೊಂಡು ವಂಚಿಸಿದ್ದ. ಸುಕೇಶ್ ಜೈಲಿನಲ್ಲಿದ್ದುಕೊಂಡೇ ಇಷ್ಟೆಲ್ಲ ಮಾಡಿದ್ದು, ಇದಕ್ಕೂ ಮುನ್ನ ಈತ ಮಾಡಿದ ವಂಚನೆಗಳು ಒಂದೊಂದಾಗಿ ಬಯಲಾಗುತ್ತಿದೆ.