
ಪೊಕ್ಸೊ ಪ್ರಕರಣದ ಆರೋಪಿ ಮುರುಘಾಶ್ರೀ ಜೈಲಿನಿಂದ ಬಿಡುಗಡೆ – ಹೊರಬಂದ ಬಳಿಕ ಮಾಧ್ಯಮದ ಮುಂದೆ ಹೇಳಿದ್ದೇನು?
- ಕರ್ನಾಟಕ
- November 16, 2023
- No Comment
- 106
ನ್ಯೂಸ್ ಆ್ಯರೋ : ಮುರುಘಾ ಮಠದ ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇರೆಗೆ ಪೊಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ ಮುರುಘಾ ಮಠದ ಮಾಜಿ ಸ್ವಾಮೀಜಿ ಇಂದು ಬಿಡುಗಡೆಯಾಗಿದ್ದಾರೆ.
ಕಳೆದ 14 ತಿಂಗಳಿನಿಂದ ಕಾರಾಗೃಹದಲ್ಲಿದ್ದ ಮುರುಘಾ ಶರಣರು ಇಂದು ಬಿಡುಗಡೆಯಾಗುತ್ತಿದ್ದಂತೆ ದಾವಣಗೆರೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಚಿತ್ರದುರ್ಗಕ್ಕೆ ಕಾಲಿಡದಂತೆ ಜಾಮೀನಿನಲ್ಲಿ ಷರತ್ತು ಹಾಕಿದ್ದ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಚಿತ್ರದುರ್ಗದತ್ತ ಸ್ವಾಮೀಜಿ ಪ್ರಯಾಣ ಬೆಳೆಸಿದರು.

ನಿನ್ನೆಯೇ ಬಿಡುಗಡೆಯಾಗಬೇಕಿದ್ದರೂ ನ್ಯಾಯಾಲಯವು ಇಂದಿಗೆ ಆದೇಶ ಕಾಯ್ದಿರಿಸಿತ್ತು. ಇಂದು ನ್ಯಾಯಾಲಯದ ಆದೇಶದಂತೆ ಜಿಲ್ಲಾ ಕಾರಾಗೃಹದ ಅಧಿಕಾರಿ ಸ್ವಾಮೀಜಿಯನ್ನು ಬಿಡುಗಡೆಗೊಳಿಸಿದ್ದಾರೆ.
ಬಸವಲಿಂಗ ಪ್ರಭು ಶ್ರೀ ಹಾಗೂ ಇತರರು ಶರಣರನ್ನು ಖಾಸಗಿ ವಾಹನದಲ್ಲಿ ಕರೆದುಕೊಂಡು ದಾವಣಗೆರೆ ಕಡೆಗೆ ಹೊರಟಿದ್ದು, ಜೈಲಿಂದ ದಾವಣಗೆರೆಯ ವಿರಕ್ತ ಮಠಕ್ಕೆ ಮುರುಘಾ ಶರಣರು ಆಗಮಿಸಿದರು.
ದಾವಣಗೆರೆಯ ಜಯದೇವ ವೃತ್ತದಲ್ಲಿರುವ ಹಿರಿಯ ಸ್ವಾಮೀಜಿಗಳ ಗದ್ದುಗೆಗೆ ಮುರುಘಾ ಶರಣರು ನಮಸ್ಕರಿಸಿದ್ದು,ಈ ವೇಳೆ ದಾವಣಗೆರೆ ಭಕ್ತರು, ವಿರಕ್ತ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳಿಂದ ಪಾದಪೂಜೆ ನೇರವೇರಿಸಿ ಅದ್ದೂರಿ ಸ್ವಾಗತ ಕೋರಲಾಯಿತು.
ಮುರುಘಾಶರಣರಿಂದ ಪ್ರಥಮ ಪ್ರತಿಕ್ರಿಯೆ ಹೀಗಿತ್ತು..
ನಾವು ಮೌನಕ್ಕೆ ಶರಣಾಗುತ್ತೆವೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಿಮ್ಮ ಸಹಕಾರವಿರಲಿ, ನಮ್ಮ ವಕೀಲರು ನಿಮಗೆಲ್ಲ ತಿಳಿಸಿದ್ದಾರೆ ಎಂದ ಶರಣರು ಹೇಳಿದ್ದಾರೆ
ಚಿತ್ರದುರ್ಗ ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ ಹಿನ್ನೆಲೆಯಲ್ಲಿ ದಾವಣಗೆರೆಯ ಜಯದೇವ ವೃತ್ತದಲ್ಲಿ ಇರುವ ಶಿವಯೋಗಿ ಮಂದಿರದಲ್ಲಿ ವಾಸ್ತವ್ಯಕ್ಕೆ ಸಿದ್ಧತೆ ಮಾಡಲಾಗಿದೆ.