ಕೆಪಿಸಿಸಿ‌ ಕಾರ್ಯಾಧ್ಯಕ್ಷ, ದಲಿತ ಮುಖಂಡ ಧ್ರುವ ನಾರಾಯಣ್ ಹೃದಯಾಘಾತದಿಂದ ನಿಧನ

ಕೆಪಿಸಿಸಿ‌ ಕಾರ್ಯಾಧ್ಯಕ್ಷ, ದಲಿತ ಮುಖಂಡ ಧ್ರುವ ನಾರಾಯಣ್ ಹೃದಯಾಘಾತದಿಂದ ನಿಧನ

ನ್ಯೂಸ್ ಆ್ಯರೋ : ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗಾಗಿ ಕಾಂಗ್ರೆಸ್ ಚುನಾವಣೆಗಾಗಿ ಸಿದ್ಧತೆಯಲ್ಲಿ ತೊಡಗಿರುವ ನಡುವೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ, ದಲಿತ ಮುಖಂಡ ಧ್ರುವನಾರಾಯಣ್ ಅವರು ಇಂದು ಮುಂಜಾನೆ 6.40 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಇವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದರು. ಕೊಳ್ಳೇಗಾಲ ಮತ್ತು ಸಂತೇಮರಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದು, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಧ್ರುವನಾರಾಯಣ್ ಅವರನ್ನು ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಯೋಚಿಸಿತ್ತು. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಆಪ್ತರಾಗಿದ್ದರು.

ಪಕ್ಷದ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ 9.30ಕ್ಕೆ ನಿಗದಿಯಾಗಿದ್ದ ಮಾಧ್ಯಮಗೋಷ್ಠಿಯನ್ನು ಕಾಂಗ್ರೆಸ್ ರದ್ದುಗೊಳಿಸಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಮಾಹಿತಿ ನೀಡಿದ್ದಾರೆ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 1 ಮತದಿಂದ ಗೆಲುವ ಮೂಲಕ ಧ್ರುವ ನಾರಾಯಣ್ ಅವರು ಇತಿಹಾಸ ನಿರ್ಮಿಸಿದ್ದರು. ಹಳೆ ಮೈಸೂರು ಭಾಗದಲ್ಲಿ ಪ್ರಮುಖ ದಲಿತ ಮುಖವಾಗಿದ್ದ ಧ್ರುವನಾರಾಯಣ್ ಅವರು ಸರಳ, ಸಜ್ಜನ ರಾಜಕಾರಣಿ ಎಂದೇ ಜನಜನಿತರಾಗಿದ್ದರು. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೇ ಆರೋಗ್ಯವಾಗಿದ್ದ ಧ್ರುವನಾರಾಯಣ್ ಅವರ ಸಾವು ಅವರ ಅಭಿಮಾನಿಗಳನ್ನು ‌ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *