
ಮಂಗಳೂರು : ದೈವ ಹಾಗೂ ಮಗುವಿನ ಮುಗ್ಧತೆಗೆ ಮನಸೋತ ಕರಾವಳಿ ಮಂದಿ – ವೈರಲ್ ಆಯ್ತು 25 ಸೆಕೆಂಡಿನ ಮುದ್ದು ವಿಡಿಯೋ..!!
- Viral Newsಕರ್ನಾಟಕ
- January 28, 2023
- No Comment
- 7495
ನ್ಯೂಸ್ ಆ್ಯರೋ : ದೈವದ ನರ್ತನ ಸೇವೆ ನಡೆಯುತ್ತಿದ್ದ ವೇಳೆ ಮಗುವೊಂದು ತನ್ನ ಕೈಯಲ್ಲಿದ್ದ ತಿಂಡಿಯನ್ನು ದೈವಕ್ಕೆ ನೀಡಿದ್ದು, ಸದ್ಯ ಕರಾವಳಿಗರ ಮನಸ್ಸನ್ನು ಗೆದ್ದಿರುವ ಈ ವಿಡಿಯೋ ಎಲ್ಲರ ಸ್ಟೇಟಸ್‌ನಲ್ಲೂ ಕಾಣಿಸುತ್ತಿದೆ.
ಗುರುವಾರ ಮಂಗಳೂರಿನ ಬಿಕರ್ನಕಟ್ಟೆಯ ಬಜ್ಜೋಡಿಯ ದೊಂಪದಲಿ ಸೇವೆಯಲ್ಲಿ ಈ ದೃಶ್ಯ ಸೆರೆಯಾಗಿದೆ. ಅದೇ ದಿನ ರಾತ್ರಿ ಕಾಂತೇರಿ ಜುಮಾದಿ ದೈವದ ನೇಮದ ನರ್ತನ ಸೇವೆ ನಡೆದಿದೆ. ನೇಮದಲ್ಲಿ ದೈವವು ಬೇಟೆಯ ಪರಿಕಲ್ಪನೆಯನ್ನು ನರ್ತನದ ಮೂಲಕ ಬಿಂಬಿಸುತ್ತಿರುವಾಗ ಅಲ್ಲೇ ಕುಳಿತು ಸ್ವೀಟ್ ಕಾರ್ನ್ ತಿನ್ನುತ್ತಿದ್ದ ಮಗುವಿನ ಬಳಿ ಹೋಗಿ ದೈವ ಕೈಚಾಚಿ ತನಗೂ ನೀಡುವಂತೆ ಕೇಳಿದೆ.
ಮಗು ಹೆದರದೆ ತನ್ನ ಕೈಯಲ್ಲಿದ್ದ ತಿನಿಸನ್ನು ದೈವಕ್ಕೆ ನೀಡಲು ಮುಂದಾಗಿದೆ. ಈ ದೃಶ್ಯವನ್ನು ಅಲ್ಲಿದ್ದವರು ನೋಡಿ ಖುಷಿಯಾಗಿದ್ದಾರೆ. ಅದಲ್ಲದೆ ಅಲ್ಲೇ ಇದ್ದವರು ಈ ಮುಗ್ಧ ವಿಡಿಯೋವನ್ನು ಸೆರೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೈವ ಹಾಗೂ ಮಗುವಿನ ನಡುವೆ ನಡೆದ ಕೇವಲ 25 ಸೆಕೆಂಡುಗಳ ದೃಶ್ಯ ಎಲ್ಲಾ ಕರಾವಳಿಗರ ಹೃದಯವನ್ನೇ ಗೆದ್ದಿದೆ. ಎರಡೂವರೆ ವರ್ಷದ ಮಗುವಿನ ಹೆಸರು ಶಮಿತ್. ಈತ ಶಕ್ತಿನಗರ, ಪ್ರಶಾಂತಿ ನಗರದ ದೀಪಕ್ ಹಾಗೂ ದೀಪ್ತಿ ದಂಪತಿಯ ಪುತ್ರನಾಗಿದ್ದಾನೆ.