
ದುಡ್ಡಿನ ವಿಚಾರವಾಗಿ ಗೋವಿಂದ ಪೂಜಾರಿ ಜೊತೆ ಜಗಳವಾಡಿದ್ದೆ – ಚೈತ್ರಾ ಪ್ರಕರಣದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?
- ಕರ್ನಾಟಕ
- September 18, 2023
- No Comment
- 59
ನ್ಯೂಸ್ ಆ್ಯರೋ : ಬಹುಕೋಟಿ ರೂಪಾಯಿ ಹಗರಣದಲ್ಲಿ ಸದ್ಯ ಪೊಲೀಸ್ ಬಲೆಗೆ ಬಿದ್ದಿರುವ ಚೈತ್ರಾ ಮತ್ತು ತಂಡದ ಜೊತೆ ತಮ್ಮ ಹೆಸರು ಥಳಕು ಹಾಕಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧ ಇಲ್ಲ
ಯಾಕೆ ಹೀಗೆ ದುಡ್ಡು ಕೊಟ್ರಿ ಎಂದು ಗೋವಿಂದ ಬಾಬು ಪೂಜಾರಿ ಜೊತೆ ಈ ಹಿಂದೆ ಜಗಳವಾಡಿದ್ದೆ. ನನಗೆ ಹಾಲಶ್ರೀ ಸ್ವಾಮೀಜಿ ಜೊತೆಗೆ ಬೇರೆ ಅನೇಕ ಸ್ವಾಮೀಜಿಗಳ ಪರಿಚಯವಿದೆ. ಹಾಗಂತ ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಸೂಲಿಬೆಲೆ ಸ್ಪಷ್ಟಪಡಿಸಿದ್ದಾರೆ.
ಗೋವಿಂದ ಬಾಬು ನನ್ನ ಆತ್ಮೀಯರು. ಹೀಗಾಗಿ ದುಡ್ಡಿನ ವಿಚಾರದಲ್ಲಿ ಅವರ ಜೊತೆ ಜಗಳವಾಡಿದ್ದೆ. ಇದೀಗ ಈ ಪ್ರಕರಣದಲ್ಲಿ ನನ್ನನ್ನು ಎಳೆದು ತರುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯಲ್ಲಿ ದುಡ್ಡು ಕೊಟ್ಟು ಟಿಕೆಟ್ ಪಡೆಯುವ ವ್ಯವಸ್ಥೆ ಇಲ್ಲ. ಸಿ.ಟಿ.ರವಿ ಕೂಡ ಇದನ್ನೇ ಹೇಳಿದ್ದರು. ಇದೇ ವಿಚಾರವಾಗಿ ನಾನು ಗೋವಿಂದ ಪೂಜಾರಿ ಅವರನ್ನು ತರಾಟೆ ತೆಗೆದುಕೊಂಡಿದ್ದೆ ಎಂದು ಸೂಲಿಬೆಲೆ ವಿವರಿಸಿದ್ದಾರೆ.