ಗಣಿ ಮತ್ತು ಭೂವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ – ಮಾಜಿ ಕಾರ್ ಚಾಲಕ ಪೋಲಿಸರ ವಶಕ್ಕೆ, ಸೇಡಿನ ಹಿನ್ನೆಲೆಯಲ್ಲಿ ಕೊಲೆ ಶಂಕೆ..!

ಗಣಿ ಮತ್ತು ಭೂವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ – ಮಾಜಿ ಕಾರ್ ಚಾಲಕ ಪೋಲಿಸರ ವಶಕ್ಕೆ, ಸೇಡಿನ ಹಿನ್ನೆಲೆಯಲ್ಲಿ ಕೊಲೆ ಶಂಕೆ..!

ನ್ಯೂಸ್ ಆ್ಯರೋ : ಬೆಂಗಳೂರಿನಲ್ಲಿ ಸರ್ಕಾರಿ ಕರ್ತವ್ಯದಲ್ಲಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಅವರ ಕೊಲೆಗೆ ಸಂಬಂಧಪಟ್ಟಂತೆ ಇದೀಗ ಬಿಗ್ ಅಪ್ಡೇಟ್ ಸಿಕ್ಕಿದ್ದು, ಪ್ರತಿಮಾ ಅವರ ಹಿಂದಿನ ಕಾರು ಚಾಲಕನೊಬ್ಬ ಈ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸುಬ್ರಮಣ್ಯ ಠಾಣೆಯ ಪೊಲೀಸ್ ಅಧಿಕಾರಿಗಳು ಕಾರು ಚಾಲಕ ಕಿರಣ್ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣನೇ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಮೇಲೆ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಕಿರಣ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕೆಲಸದಿಂದ ತೆಗೆದುಹಾಕಿದ್ದರಿಂದ ಕಿರಣ್ ಹಾಗೂ ಪ್ರತಿಮಾ ಮಧ್ಯೆ ಹಲವು ಭಿನ್ನಾಭಿಪ್ರಾಯಗಳು ಇದ್ದವು. ಹಾಗಾಗಿ ಆತನೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಕಿರಣ್ ಪ್ರತಿಮಾ ಅವರ ಕಾರ್ ಚಾಲಕನಾಗಿದ್ದ ಎನ್ನಲಾಗಿದೆ.‌ ಸದ್ಯ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಕಿರಣನನ್ನು ಬಂಧಿಸುವ ಸಾಧ್ಯತೆ ಇದ್ದು ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *