
ಮೈದಾನದ ಹೊರಗೂ ದಾಖಲೆ ಬರೆದ ಕಿಂಗ್ ಕೊಹ್ಲಿ – Instagram ಹಿಂಬಾಲಕರ ಸಂಖ್ಯೆ 25 ಕೋಟಿಗೆ ಏರಿಕೆ
- ಕ್ರೀಡಾ ಸುದ್ದಿ
- May 26, 2023
- No Comment
- 98
ನ್ಯೂಸ್ ಆ್ಯರೋ : ಕ್ರಿಕೆಟ್ ಜಗತ್ತಿನ ಕಿಂಗ್ ಕೊಹ್ಲಿ ಹೆಸರಿಗೆ ತಕ್ಕಂತೆ ಮತ್ತೊಮ್ಮೆ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿಗೆ ಇನ್ ಸ್ಟಾಗ್ರಾಂನಲ್ಲಿ ಬರೋಬ್ಬರಿ 25 ಕೋಟಿಯಷ್ಟು ಫಾಲೋವರ್ಸ್ ಹೆಚ್ಚಳವಾಗಿದ್ದು ಈ ಮೂಲಕ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಏಷ್ಯಾದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 25 ಕೋಟಿ ಫಾಲೋವರ್ಸ್ ಹೊಂದಿರುವ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.
ಜೊತೆಗೆ ವಿಶ್ವದಲ್ಲೇ ಅತೀ ಹೆಚ್ಚಿನ ಇನ್ ಸ್ಟಾಗ್ರಾಂ ಹಿಂಬಾಲಕರನ್ನು ಹೊಂದಿರುವ ಮೂರನೇ ಕ್ರೀಡಾಪಟು ಆಗಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ಜನಪ್ರಿಯ ಫುಟ್ಬಾಲ್ ತಾರೆಗಳಾದ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಲಿಯೋನೆಲ್ ಮೆಸ್ಸಿ ಇದ್ದಾರೆ.
ಪೋರ್ಚುಗಲ್ ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ 58.5 ಕೋಟಿ, ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ 46.4 ಕೋಟಿ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಐಪಿಎಲ್‌ನಲ್ಲಿ ಮಿಂಚು
16ನೇ ಆವೃತ್ತಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ತಂಡ ಕ್ವಾಲಿಫೈಯರ್ ಹಂತಕ್ಕೆ ಏರದಿದ್ದರೂ ತಮ್ಮ ಆಟದ ಮೂಲಕ ಕೊಹ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. 2023ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 14 ಪಂದ್ಯಗಳನ್ನಾಡಿ 53.25ರ ಬ್ಯಾಟಿಂಗ್ ಸರಾಸರಿಯಲ್ಲಿ 6 ಅರ್ಧಶತಕ ಹಾಗೂ ಎರಡು ಅಮೋಘ ಶತಕಗಳ ನೆರವಿನಿಂದ 639 ರನ್ ಬಾರಿಸಿದ್ದಾರೆ. ಜೊತೆಗೆ ಐಪಿಎಲ್ ನಲ್ಲಿ ಅತಿ ಹೆಚ್ಚಿನ ಶತಕ(7) ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.