
Jio Cinema Live : ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ – ಐಪಿಎಲ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಜಿಯೋಸಿನಿಮಾ..!!
- ಕ್ರೀಡಾ ಸುದ್ದಿ
- May 27, 2023
- No Comment
- 23
ನ್ಯೂಸ್ ಆ್ಯರೋ : ಈ ಬಾರಿಯ ಐಪಿಎಲ್ ನ ಫೈನಲ್ ಪಂದ್ಯವಷ್ಟೇ ಬಾಕಿ ಇದ್ದು, ದೇಶಕ್ಕೆ ಹಬ್ಬಿರುವ ಐಪಿಎಲ್ ಜ್ವರ ಇನ್ನೂ ಇಳಿದಿಲ್ಲ. ಕ್ರಿಕೆಟ್ ಪ್ರೇಮಿಗಳಿಗರ ಮನರಂಜನೆಯ ಬಾಡೂಟ ಬಡಿಸುವ ಈ ಚುಟುಕು ಕ್ರಿಕೆಟನ್ನು ಇಷ್ಟ ಪಡದವರೇ ಇಲ್ಲ. ಇದರೊಂದಿಗೆ ಇದೀಗ ಜಿಯೋ ಸಿನಿಮಾ ಎಲ್ಲರೂ ಉಚಿತವಾಗಿ ಐಪಿಎಲ್ ಕಣ್ತುಂಬಿಕೊಳ್ಳುವ ಅವಕಾಶ ನೀಡಿದೆ. ಇದೇ ಜಿಯೋ ಸಿನಿಮಾ ಇದೀಗ ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ. ಆ ಹೊಸ ವಿಶ್ವ ದಾಖಲೆಯ ಬಗೆಗಿನ ಮಾಹಿತಿ ಇಲ್ಲಿದೆ.
ಜಿಯೋ ಸಿನಿಮಾ ಮೂಲಕ ಐಪಿಎಲ್ ಆರಂಭವಾದ ಮೊದಲ ಏಳು ವಾರಗಳಲ್ಲಿ ಒಟ್ಟಾರೆ 1500 ಕೋಟಿ ಸಮಯ ವೀಕ್ಷಣೆಯಾಗಿರುವ ಬಗ್ಗೆ ವರದಿಯಾಗಿದೆ. ಮೊನ್ನೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯವು ಮತ್ತೊಮ್ಮೆ ಐಪಿಎಲ್ ನಲ್ಲಿ ಅತೀ ಹೆಚ್ಚು ಏಕಕಾಲಿನ ವೀಕ್ಷಣೆ ಪಡೆದ ಪಂದ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ.
ಈ ಎರಡು ತಂಡಗಳ ನಡುವೆ ನಡೆದ ಪಂದ್ಯದ ದ್ವಿತಿಯ ಇನ್ನಿಂಗ್ಸ್‌ನ ಕೊನೆಯ ಓವರ್‌ನ 2.5 ಕೋಟಿ ವೀಕ್ಷಣೆ ಪಡೆದುಕೊಂಡಿತ್ತು. 2019ರಲ್ಲಿ 18.7mn ವೀಕ್ಷಕರ ಹಿಂದಿನ ಐಪಿಎಲ್ ದಾಖಲೆಯನ್ನು ಮೀರಿಸುವ ಮೂಲಕ ಈ ಸೀಸನ್‌ನ ಡಿಜಿಟಲ್ ವೀಕ್ಷಣೆಯಲ್ಲಿ ನೂತನ ಕ್ರಾಂತಿ ಸೃಷ್ಟಿಸಿದೆ. ಈ ಸೀಸನ್‌ನಲ್ಲಿ 13ಕ್ಕೂ ಹೆಚ್ಚು ಪಂದ್ಯಗಳು 18mn ಗರಿಷ್ಠ ಏಕಕಾಲಿನ ವೀಕ್ಷಣೆ ಪಡೆದಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಏಪ್ರಿಲ್ 12 ರಂದು ನಡೆದ ಪಂದ್ಯವು 2.23 ಕೋಟಿ ವೀಕ್ಷಣೆ ಪಡೆದಿತ್ತು. ಅದಾದ ಕೆಲ ದಿನಗಳಲ್ಲಿ RCB ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯ ಏಕಕಾಲಕ್ಕೆ 2.4 ಕೋಟಿ ವೀಕ್ಷಣೆ ಪಡೆಯುವ ಮೂಲಕ ತನ್ನದೇ ದಾಖಲೆಯನ್ನು ಮುರಿಯಿತು.
ಕ್ರಿಕೆಟ್ ಅಭಿಮಾನಿಗಳ ಈ ಅಭೂತಪೂರ್ವ ಬೆಂಬಲದಿಂದ ಸಂತುಷ್ಟಗೊಂಡ ಜಿಯೋ ಸಿನಿಮಾ 360 ಡಿಗ್ರಿ ವೀಕ್ಷಣಾ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತು. ಇಷ್ಟೇ ಅಲ್ಲದೆ ಬೋಜ್ ಪುರಿ, ಪಂಜಾಬಿ, ಕನ್ನಡ ಮತ್ತು ಗುಜರಾತಿ ಭಾಷೆಯಲ್ಲೂ ಪಂದ್ಯ ವೀಕ್ಷಿಸುವ ಅವಕಾಶ ಕಲ್ಪಿಸಿದೆ.
2023ರ ಟಾಟಾ ಐಪಿಎಲ್ ಜಿಯೋ ಸಿನಿಮಾ ಮೂಲಕ ಡಿಜಿಟಲ್ ಸ್ಟ್ರೀಮಿಂಗ್ ಗಾಗಿ ಒಟ್ಟಾರೆ 26 ಉತ್ಪನ್ನ ಬ್ರಾಂಡ್ ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ ಅವುಗಳೆಂದರೆ ಡ್ರೀಮ್11, ಜಿಯೋ ಮಾರ್ಟ್, ಫೋನ್ ಪೇ, ಜಿಯೋ Appy Fizz, Castrol, ಇಟಿ ಮನಿ, ಬಿಂಗೋ, ಸ್ಟಿಂಗ್, ಅಜಿಯೋ, ಹೈಪರ್, ರೂಪೆ, ಲೂಯಿಸ್, ಫಿಲಿಪ್ ಜೀನ್ಸ್, ಅಮೆಜಾನ್, ರಾಪಿಡೋ, ಅಲ್ಟ್ರಾಟೆಕ್ ಸಿಮೆಂಟ್, ಪೂಮಾ, ಕಮಲಾ ಪಸಂದ್, ಕಿಂಗ್ ಫಿಶರ್ ಪವರ್ ಸೋಡಾ, ಸೌದಿ ಪ್ರವಾಸೋದ್ಯಮ ಇತ್ಯಾದಿ.