ಬಡ ಮಕ್ಕಳಿಗಾಗಿ ಫ್ರೀ ತರಬೇತಿ ನೀಡ್ತಿದ್ದ ಸೆಹ್ವಾಗ್ ಹಿಂದೆ ಸರಿದದ್ದೇಕೆ? – ಹೃದಯವಂತನ ಈ ನಿರ್ಧಾರ ಹಿಂದೆ ಇರೋ ಕಾರಣ ಏನ್ ಗೊತ್ತಾ?

ಬಡ ಮಕ್ಕಳಿಗಾಗಿ ಫ್ರೀ ತರಬೇತಿ ನೀಡ್ತಿದ್ದ ಸೆಹ್ವಾಗ್ ಹಿಂದೆ ಸರಿದದ್ದೇಕೆ? – ಹೃದಯವಂತನ ಈ ನಿರ್ಧಾರ ಹಿಂದೆ ಇರೋ ಕಾರಣ ಏನ್ ಗೊತ್ತಾ?

ನ್ಯೂಸ್‌ ಆ್ಯರೋ : ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಭಾರತದ ಸಿಡಿಲಬ್ಬರದ ಆಟಗಾರ. ಇವರು ಭಾರತ ಕ್ರಿಕೆಟ್ ತಂಡದ ಸದಸ್ಯರು ಮತ್ತು ಆಕ್ರಮಣಕಾರಿ ಆರಂಭಿಕ ಬಲಗೈ ಬ್ಯಾಟ್ಸ್ ಮ್ಯಾನ್. ಇವರನ್ನು ನವಾಬ್ ಆಫ್ ನಜಾಫಗಡ್ ಎಂದು ಕರೆಯುತ್ತಾರೆ.

ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ಟರೆ ಎಂತಹ ಬೌಲಿಂಗ್‌ಗೂ ಕ್ಯಾರೇ ಎನ್ನದೆ ನುಗ್ಗಿ ಬಾರಿಸುವ ಆಟಗಾರ. ಇವರು ಮೈದಾನದಲ್ಲಿರುವ ಹಾಗೂ ಆಫ್‌ ದಿ ಫೀಲ್ಡ್‌ನಲ್ಲಿ ವರ್ತನೆಗೆ ಅಜಗಜಾಂತರ ವ್ಯತ್ಯಾಸವಿದೆ. ಆಫ್‌ ದಿ ಫೀಲ್ಡ್‌ ನಲ್ಲಿ ತುಂಬಾನೇ ಹೃದಯವಂತ ವೀರೇಂದ್ರ ಸೆಹ್ವಾಗ್.

ಸೆಹ್ವಾಗ್ ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಸಹಾಯದ ಹಸ್ತ ಚಾಚೋದ್ರಲ್ಲಿ ಎತ್ತಿದ ಕೈ. ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಬಳಿಕ ಅಕಾಡೆಮಿಯೊಂದನ್ನ ತೆರೆದ ಸೆಹ್ವಾಗ್​​, ಅಲ್ಲಿ ಬಡ ಮಕ್ಕಳಿಗೆ ಉಚಿತ ಪ್ರವೇಶ ಕೂಡ ನೀಡಿದ್ದರು. ಆದರೆ, ಇದ್ದಕ್ಕಿದ್ದಂತೆ ಅದನ್ನ ನಿಲ್ಲಿಸಿದ್ರು. ಆ ನಿರ್ಧಾರದ ಹಿಂದೆ ಒಂದು ಬಲವಾದ ಕಾರಣ ಇದೆ ಅಂತೆ.

ಉಚಿತದಿಂದ ಯಾವ ಕೆಲಸವು ಆಗಲ್ಲ. ನಾನು ಕ್ರಿಕೆಟ್​ ಅಕಾಡೆಮಿ ಶುರುಮಾಡಿದೆ. ಅರಂಭದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ಟ್ರೈನಿಂಗ್​​ ನೀಡುತ್ತಿದ್ದೆ. ಆದರೆ ಅವರು ಉಚಿತದ ಮಹತ್ವದ ಅರ್ಥಮಾಡಿಕೊಳ್ಳಲಿಲ್ಲ. ವಾರದಲ್ಲಿ ಎರಡು ದಿನ ಅಭ್ಯಾಸಕ್ಕೆ ಬಂದ್ರೆ ಉಳಿದ ದಿನ ಅಕಾಡೆಮಿಗೆ ಬರುತ್ತಿರಲಿಲ್ಲ.

ಯಾವಾಗ ನೀವು ನೂರು ರೂಪಾಯಿ ಕೊಟ್ಟು ಬರ್ತಿರೋ ಆಗ ಹಣದ ಮಹತ್ವ ತಿಳಿಯುತ್ತೆ. ಪ್ರತಿದಿನ ಅಕಾಡೆಮಿಗೆ ಬರ್ತಾರೆ. ತಂದೆ-ತಾಯಂದಿರು ದುಡ್ಡು ಕಟ್ಟಿದ್ದೇವೆ. ಪ್ರಾಕ್ಟೀಸ್​ಗೆ ಹೋಗು ಎಂದು ಕಳಿಸುತ್ತಾರೆ. ಇಲ್ಲವಾದ್ರೆ ಎರಡು ದಿನ ಬಂದು, ಇನ್ನೆರಡು ದಿನ ಗೈರಾಗ್ತಾರೆ. ಫೀಸ್ ಕಟ್ಟಿದ್ರೆ ಜವಾಬ್ದಾರಿ ಹೆಚ್ಚುತ್ತೆ ಎಂಬ ಕಾರಣಕ್ಕೆ ಈ ಒಳ್ಳೆ ಕಾರ್ಯವನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *