Glenn Maxwell : ಅಫ್ಘನ್ ವಿರುದ್ಧ ನೋವಲ್ಲೂ ಮ್ಯಾಕ್ಸಿ ಶತಕದಾಟ – ಅತಿಯಾದ ಆತ್ಮವಿಶ್ವಾಸಕ್ಕೆ ಭಾರೀ ಬೆಲೆತೆತ್ತ ಅಫ್ಘಾನಿಸ್ತಾನ : ಗ್ಲೆನ್ ಅಬ್ಬರಕ್ಕೆ ಪಂಜುರ್ಲಿ ದೈವ ಕಾರಣ..!!

Glenn Maxwell : ಅಫ್ಘನ್ ವಿರುದ್ಧ ನೋವಲ್ಲೂ ಮ್ಯಾಕ್ಸಿ ಶತಕದಾಟ – ಅತಿಯಾದ ಆತ್ಮವಿಶ್ವಾಸಕ್ಕೆ ಭಾರೀ ಬೆಲೆತೆತ್ತ ಅಫ್ಘಾನಿಸ್ತಾನ : ಗ್ಲೆನ್ ಅಬ್ಬರಕ್ಕೆ ಪಂಜುರ್ಲಿ ದೈವ ಕಾರಣ..!!

ನ್ಯೂಸ್ ಆ್ಯರೋ : ಇದು ಕ್ರಿಕೆಟ್ ಜಗತ್ತು ಎಂದಿಗೂ ಮರೆಯದ ರಣರೋಚಕ ಗೆಲುವು. ಇಂತಹದ್ದೊಂದು ಐತಿಹಾಸಿಕ ಗೆಲುವಿಗೆ ಕಾರಣವಾಗಿದ್ದು RCB ಪ್ಲೇಯರ್. ಹೌದು ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ನಿನ್ನೆ ನಡೆದ ಪಂದ್ಯಾಟದಲ್ಲಿ ಭಾಗಶಃ ಅಪ್ಘಾನ್ ಪಂದ್ಯವನ್ನು ತನ್ನ ತೆಕ್ಕೆಗೆ ಎಳೆದುಕೊಂಡಿತ್ತು. ಆದರೆ ಅದೇ ವೇಳೆಗೆ ಕ್ರೀಸ್ ಆಕ್ರಮಿಸಿಕೊಂಡ ಆಸ್ಟ್ರೇಲಿಯಾದ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಮೈದಾನದಲ್ಲಿ ಮಿರಾಕಲ್ ಮಾಡಿಬಿಟ್ಟರು. ಕ್ರಿಕೆಟ್ ಜಗತ್ತು ಎಂದೂ ಕಂಡು ಕೇಳರಿಯದ ಐತಿಹಾಸಿಕ ಗೆಲುವೊಂದನ್ನು ಸಾಧಿಸಿ ಆಸೀಸ್ ತಂಡಕ್ಕೆ ಸೆಮಿಸ್ ಟಿಕೆಟ್ ದೊರಕಿಸಿಕೊಟ್ಟರು. ಮ್ಯಾಕ್ಸ್‌ವೆಲ್ ಆಡಿದ ಈ ರಣರೋಚಕ ಆಟವನ್ನು ಇಡೀ ಕ್ರಿಕೆಟ್ ಜಗತ್ತು ಕೊಂಡಾಡುತ್ತಿದೆ.

ವಿಶ್ವಕಪ್‌ನಲ್ಲಿ ಐತಿಹಾಸಿಕ ದ್ವಿಶತಕ!

ಐತಿಹಾಸಿಕ ದ್ವಿಶತಕಕ್ಕೆ ಮುನ್ನುಡಿ ಬರೆದ ಸ್ಪೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ, 21 ಫೋರ್, 10 ಸಿಕ್ಸರ್ ಸಹಿತ ಬರೋಬ್ಬರಿ 201 ರನ್ ಸಿಡಿಸಿ, ಅಪ್ಘಾನ್ ಬೌಲರ್‌ಗಳನ್ನು ಧೂಳೀಪಟವಾಗಿಸಿದರು. ಇದರ ಫಲವಾಗಿ ಸೋಲಿನ ದವಡೆಯಿಂದ ಹೊರಬಂದ ಆಸ್ಟ್ರೇಲಿಯಾ ತಂಡ, 3 ವಿಕೆಟ್‌ಗಳಿಂದ ಅಫಘಾನಿಸ್ತಾನ ತಂಡವನ್ನು ಮಣಿಸಿತು.

ಆರು ಪಂದ್ಯಗಳ ಜಯದೊಂದಿಗೆ ಒಟ್ಟು 12 ಅಂಕ ಕಲೆಹಾಕಿದ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ನ 13ನೇ ಆವೃತ್ತಿಯಲ್ಲಿ ಮೂರನೇ ತಂಡವಾಗಿ ಸೆಮಿಫೈನಲ್ಸ್‌ಗೆ ಲಗ್ಗೆ ಹಾಕಿತು. ಆದರೆ ಗೆಲ್ಲುವ ಪಂದ್ಯ ಕೈಚೆಲ್ಲಿದ ಅಫ್ಘಾನಿಸ್ತಾನ ಸೆಮೀಸ್ ಹಾದಿಯನ್ನು ದುರ್ಗಮ‌ ಮಾಡಿಕೊಂಡಿತು.

ಅತಿಯಾದ ಆತ್ಮವಿಶ್ವಾಸ ಅಫ್ಘಾನ್ ಸೋಲಿಸಿತು..!

18.3 ಓವರ್‌ಗಳಲ್ಲಿ ಆಸೀಸ್‌ ಅಗ್ರ ಕ್ರಮಾಂಕದ 7 ವಿಕೆಟ್‌ಗಳನ್ನು ಉರುಳಿಸಿ ದಾಖಲೆಯ ಗೆಲುವಿನ ಹೊಸ್ತಿಲಲ್ಲಿದ್ದ ಅಫಘಾನಿಸ್ತಾನ, ಅತಿಯಾದ ಆತ್ಮವಿಶ್ವಾಸ ಹಾಗೂ ಕಳಪೆ ಕ್ಷೇತ್ರ ರಕ್ಷಣೆಯಿಂದಾಗಿ ಇತಿಹಾಸ ಸೃಷ್ಟಿಸುವ ಅತ್ಯುತ್ತಮ ಅವಕಾಶವನ್ನು ಕಳೆದುಕೊಂಡಿತಲ್ಲದೆ, ಸೆಮಿಫೈನಲ್‌ ಹಾದಿಯನ್ನು ಕಠಿಣ ಮಾಡಿಕೊಂಡಿತು. ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ಬಲಿಷ್ಠ ತಂಡಗಳನ್ನು ಹೆಡೆಮುರಿ ಕಟ್ಟಿದ್ದ ಅಫ್ಘನ್, ಮತ್ತೊಂದು ವಿಕ್ರಮ ಸಾಧಿಸುವ ಒತ್ತಡ ನಿಭಾಯಿಸುವಲ್ಲಿ ಎಡವಿತು.

ಎರಡು ಜೀವದಾನ, ಅಪ್ಘಾನ್ ಧೂಳೀಪಟ!

27 ರನ್ ಗಳಿಸಿದ್ದಾಗ ಎಲ್‌ ಬಿಡಬ್ಲ್ಯೂನಿಂದ ಹಾಗೂ 33 ರನ್ ಗಳಿಸಿದ್ದಾಗ ಮುಜೀಬ್ ಅವರಿಂದ ಜೀವದಾನ ಪಡೆದ ಬಲಗೈ ಬ್ಯಾಟರ್ ಮ್ಯಾಕ್ಸ್‌ವೆಲ್, ನಾನ್‌ಸ್ಟ್ರೈಕ್ ನಲ್ಲಿ ರಕ್ಷಣಾತ್ಮಕ ಆಟವಾಡಿದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ನಿಲ್ಲಿಸಿ ಸ್ಫೂರ್ತಿ ಪಡೆದು ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟರು. ಮ್ಯಾಕ್ಸ್ ವಿಶ್ವಕಪ್ ಇತಿಹಾಸದಲ್ಲಿ ಆಟಕ್ಕೆ ಇಡೀ ಕ್ರೀಡಾಂಗಣವೇ ಚಪ್ಪಾಳೆಯೊಂದಿಗೆ ಮೊದಲ ಆಟಗಾರ ಎಂದು ಅಭಿನಂಧಿಸಿತು.

ಅದರಲ್ಲೂ ಮುಜೀಬ್ ಎಸೆದ ಓವರ್ ನಲ್ಲಿ 3 ಸಿಕ್ಸರ್ ಮತ್ತು 1 ಫೋರ್ ಸಿಡಿಸಿದ ಮ್ಯಾಕ್ಸ್ ವೆಲ್ ಸಿಕ್ಸರ್‌ನೊಂದಿಗೆ ತಂಡದ ಗೆಲುವಿಗೆ ವೈಯಕ್ತಿಕ ದ್ವಿಶತಕದ ಸಂಭ್ರಮಕ್ಕೆ ಕಿಚ್ಚು ಹಚ್ಚಿದರು.

ಮ್ಯಾಕ್ಸ್ ವೆಲ್ ಅಬ್ಬರಕ್ಕೆ ಪಂಜುರ್ಲಿ ಕಾರಣ..!? ಟ್ರೋಲ್ ಗಳ ಸುರಿಮಳೆ..!!

ಗ್ಲೆನ್‌ ಮ್ಯಾಕ್ಸ್‌ವೆಲ್‌ ಭರ್ಜರಿ ಬ್ಯಾಟಿಂಗ್‌ಗೆ ಕನ್ನಡದ ಕಾಂತಾರ ಸಿನಿಮಾದ ಪಂಜುರ್ಲಿ ದೈವದ ನೆರವಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಹೌದು, ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವಾವೇಷದ ದೈವನರ್ತನ ಪಾತ್ರವು ಭಾರಿ ಗಮನ ಸೆಳೆದಿತ್ತು. ಇದೇ ದೈವ ನರ್ತಕನು ಗಾಯಗೊಂಡು ಮೈದಾನದಲ್ಲೇ ಒರಗಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರಿಗೆ ಆಶೀರ್ವಾದ ಮಾಡುವ, ಸ್ಫೂರ್ತಿ ತುಂಬಿ ಬಡಿದೆಬ್ಬಿಸುವ ರೀತಿಯ ಫೋಟೊಗಳನ್ನು ಜನ ಹಂಚಿಕೊಂಡಿದ್ದಾರೆ. ‘ಕಾಂತಾರದ ಪಂಜುರ್ಲಿ ದೈವವು ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬ್ಯಾಟಿಂಗ್‌ಗೆ ನೆರವಾಯಿತು’ ಎಂದೆಲ್ಲ ಬರೆದುಕೊಂಡಿದ್ದಾರೆ. ಈ ಫೋಟೊಗಳು ಹಾಗೂ ಪೋಸ್ಟ್‌ಗಳು ಭಾರಿ ವೈರಲ್‌ ಆಗಿವೆ.

ವಿಶ್ವಕಪ್ ದ್ವಿಶತಕ ದಾಖಲೆಗಳು:

ವಿಶ್ವಕಪ್‌ನಲ್ಲಿ ಇಂತಹ ರಣರೋಚಕ ದ್ವಿಶತಕ ಮೂಡಿ ಬಂದಿದ್ದು ಇದೇ ಮೊದಲಲ್ಲ. ಮ್ಯಾಕ್ಸ್‌ವೆಲ್ ಅವರಿಗಿಂತ ಮುನ್ನ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ 237ರನ್ ಬಾರಿಸಿದ್ದರು. ಇದೇ ವರ್ಷ ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡಿಸ್ ತಂಡದ ಕ್ರಿಸ್ ಗೇಲ್ 215ರನ್ ಬಾರಿಸಿದ್ದರು. ಆದರೆ ನಿನ್ನೆಯ ದಿನ ಮ್ಯಾಕ್ಸ್‌ವೆಲ್ ಮಾಡಿದ ಮೋಡಿ ಇನ್ನು ಹತ್ತಾರು ವಿಶ್ವಕಪ್ ನೆನಪಿಟ್ಟುಕೊಳ್ಳುವಂತಹದ್ದು ಎಂದರೆ ಅತಿಶಯೋಕ್ತಿಯಲ್ಲ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *