ಈ ಬಾರಿ ಐಪಿಎಲ್‌ಗೆ ಗಾಯದ ಪೆಟ್ಟು – ಕೋಟಿವೀರರೇ ಆಟದಿಂದ ಹೊರಕ್ಕೆ, ಯಾರೆಲ್ಲ ಹೊರ ಬಿದ್ರು ನೋಡಿ…

ಈ ಬಾರಿ ಐಪಿಎಲ್‌ಗೆ ಗಾಯದ ಪೆಟ್ಟು – ಕೋಟಿವೀರರೇ ಆಟದಿಂದ ಹೊರಕ್ಕೆ, ಯಾರೆಲ್ಲ ಹೊರ ಬಿದ್ರು ನೋಡಿ…

ನ್ಯೂಸ್‌ ಆ್ಯರೋ : ಬಹುಬೇಡಿಕೆಯ ಹಾಗೂ ಕೋಟಿ ಕೋಟಿ ಹಣವನ್ನು ಜೇಬಿಗೆ ತುಂಬಿಸಿಕೊಳ್ಳುತ್ತಿದ್ದ ಕ್ರಿಕೆಟ್ ಆಟಗಾರರು ಈ ಬಾರಿ ಆರೋಗ್ಯ ಹಾಗೂ ವೈಯ್ಯಕ್ತಿಕ ಸಮಸ್ಯೆಯಿಂದ ಐಪಿಎಲ್‌ನಿಂದ ಹೊರ ಉಳಿಯುವಂತಾಗಿದೆ.

ಬಹು ನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​​ ಲೀಗ್​ಗೆ ದಿನಗಣನೆ ಶರುವಾಗಿದ್ದು ಮಾರ್ಚ್‌ 31ರಿಂದ ಕ್ರಿಕೆಟ್‌ ಪಂದ್ಯಾಟಕ್ಕೆ ಚಾಲನೆ ಸಿಗಲಿದೆ.

ಬಿಸಿಸಿಐ, ಫ್ರಾಂಚೈಸಿಗಳು ಕೂಡ ಭರದ ಸಿದ್ಧತೆ ಆರಂಭಿಸಿದ್ದು, ಕೆಲವು ತಂಡಗಳು ಅಭ್ಯಾಸ ಶಿಬಿರಗಳನ್ನೂ ಆರಂಭಿಸಿವೆ. ಒಂದೆಡೆ ಸ್ಟಾರ್​​​​​ ಆಟಗಾರರ ಫಾರ್ಮ್​​​ ತಂಡದ ಬಲ ಹೆಚ್ಚಿಸಿದರೆ, ಮತ್ತೊಂದೆಡೆ ಪ್ರಮುಖ ಆಟಗಾರರೇ ಇಂಜುರಿಗೆ ತುತ್ತಾಗಿರುವುದು ಟೀಮ್​​ ಮ್ಯಾನೇಜ್​ಮೆಂಟ್ಸ್​​ ತಲೆಬಿಸಿಯಾಗಿದೆ.

ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ಕೋಟಿ ಕೋಟಿಯನ್ನು ಜೇಬಿಗಿಳಿಸಿಕೊಂಡ ಮಿಲೇನಿಯರ್​​​ಗಳೇ ಗಾಯದ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಈ ಆವೃತ್ತಿಂದ ಹೊರ ಬಿದ್ದಿದ್ದಾರೆ. ಈ ಪಟ್ಟಿಯ ಹೆಸರು ಉದ್ದವಾಗಿದ್ದು, ಯಾರೆಲ್ಲ ಇದ್ದಾರೆ ಎಂದು ಸಂಪೂರ್ಣ ಮಾಹಿತಿ ಇದೆ.

ಪ್ರತಿ ವರ್ಷವೂ ಗೆಲುವಿನ ದಡಕ್ಕೆ ಬರುವ ಮುಂಬೈ ಇಂಡಿಯನ್ಸ್‌ ಟೀಂ 15 ಆವೃತ್ತಿಗಳನ್ನು ಯಶಸ್ಸಿಯಾಗಿ ಮುಗಿಸಿರುವ ಒಟ್ಟು 5 ಬಾರಿ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಟೂರ್ನಿಗೂ ಮುನ್ನವೇ ವೇಗಿ ಜಸ್​ಪ್ರಿತ್​ ಬೂಮ್ರಾ ತಂಡದಿಂದ ಹೊರ ಬಿದ್ದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಇನ್ನೂ ಸಂಪೂರ್ಣವಾಗಿ ಚೇತರಿಕೆಯಾಗದ ಕಾರಣ ಈ ಬಾರಿ ಆಟವಾಡುತ್ತಿಲ್ಲ.

ಟೀಮ್​ ಇಂಡಿಯಾದ ವಿಕೆಟ್​ ಕೀಪರ್​​ ರಿಷಭ್​​ ಪಂತ್​​​ ಅವರು ಡಿಸೆಂಬರ್​ 30ರಂದು ಭೀಕರ ಅಪಘಾತಗ್ಗಾಗಿ ಗಂಭೀರವಾಗಿ ಗಾಐಗೊಂಡಿದ್ದರು. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಆಟದಿಂದ ಹೊರ ಉಳಿದಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸುತ್ತಿದ್ದ ತಂಡಕ್ಕೆ ಭಾರೀ ಆಘಾತವಾಗಿದೆ.

ತಾಯಿಯ ಅನಾರೋಗ್ಯದಿಂದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​ ಕಮಿನ್ಸ್​​, ಅವರು ಈ ಬಾರಿ ಐಪಿಎಲ್‌ನಿಂದ ಹೊರ ಉಳಿದಿದ್ದಾರೆ. ಕ್ಯಾನ್ಸರ್​ ರೋಗದಿಂದ ಬಳಲುತ್ತಿರುವ ಕಮಿನ್ಸ್​​ ಅವರ ತಾಯಿಯ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಈ ವೇಳೆ ತಾಯಿಯೊಂದಿಗೆ ಸಮಯ ಕಳೆಯಲು ಬಯಸಿರುವ ಕಮಿನ್ಸ್​​​​, ಭಾರತ ವಿರುದ್ಧ 3, 4ನೇ ಟೆಸ್ಟ್​ ಹಾಗೂ ಏಕದಿನ ಸರಣಿಗೆ ದೂರವಾಗಿದ್ದಾರೆ.

ನ್ಯೂಜಿಲೆಂಡ್​ ತಂಡದ ಸ್ಟಾರ್​​​ ಬೌಲರ್​ ಕೈಲ್​ ಜೆಮಿಸನ್​ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು 5ನೇ ಬಾರಿ ಚಾಂಪಿಯನ್​​​ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿರುವ ಯೆಲ್ಲೋ ಆರ್ಮಿ ಚೆನ್ನೈ ಸೂಪರ್​​ ಕಿಂಗ್ಸ್​ ತಂಡಕ್ಕೆ ಭಾರೀ ಹಿನ್ನಡೆ ಅಂದರೆ ತಪ್ಪಾಗಲ್ಲ. ಕಳೆದ 8 ತಿಂಗಳಿಂದ ಬೆನ್ನು ನೋವಿನ ಇಂಜುರಿಗೆ ತುತ್ತಾಗಿರುವ ಜೆಮಿಸನ್​, ಈಗ ಸರ್ಜರಿಗೆ ಮುಂದಾಗಿದ್ದಾರೆ. ಕನಿಷ್ಠ ನಾಲ್ಕೈದು ತಿಂಗಳಾದರೂ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರಾಜಸ್ಥಾನ್​ ರಾಯಲ್ಸ್​ ತಂಡದ ಮೇಜರ್​ ಬೌಲಿಂಗ್​ ವೆಪನ್ ಪ್ರಸಿದ್ಧ್​ ಕೃಷ್ಣ ಎಂದರೆ ತಪ್ಪಾಗಲ್ಲ. ಕಳೆದ ಬಾರಿ ರಾಯಲ್ಸ್​ ತಂಡವನ್ನು ಫೈನಲ್​ವರೆಗೂ ಕೊಂಡೊಯ್ಯಲು ಕಾರಣರಾಗಿದ್ದರು. ಪಾದದ ಒತ್ತಡದ ಸಮಸ್ಯೆಗೆ ಒಳಗಾಗಿರುವ ಪ್ರಸಿದ್ಧ್​​​ ಇನ್ನೂ ಚೇತರಿಸಿಕೊಂಡಿಲ್ಲ. ಯಾವಾಗ ಮರಳುತ್ತಾರೆ ಎಂಬ ಖಚಿತ ಪಡಿಸಿಲ್ಲ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *