IND vs AUS 4th TEST : ಇಶಾನ್ ಕಿಶನ್ ಗೆ ಹೊಡೆದ್ರಾ ರೋಹಿತ್ ಶರ್ಮಾ? – ಟೀಂ‌ ಇಂಡಿಯಾ ನಾಯಕನ ಕೋಪ ತೋರಿಸೋ ವಿಡಿಯೋ ವೈರಲ್..!!

IND vs AUS 4th TEST : ಇಶಾನ್ ಕಿಶನ್ ಗೆ ಹೊಡೆದ್ರಾ ರೋಹಿತ್ ಶರ್ಮಾ? – ಟೀಂ‌ ಇಂಡಿಯಾ ನಾಯಕನ ಕೋಪ ತೋರಿಸೋ ವಿಡಿಯೋ ವೈರಲ್..!!

ನ್ಯೂಸ್ ಆ್ಯರೋ : ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂದು ನಾಯಕ ರೋಹಿತ್ ಶರ್ಮಾ ವಿರುದ್ಧ ಟೀಕೆಯೊಂದು ಕೇಳಿ ಬಂದಿದ್ದು, ನೆಟಿಜನ್ಸ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ರೋಹಿತ್ ಶರ್ಮಾ ಆಟಗಾರರ ಮೇಲೆ ಸಿಟ್ಟಾಗಿರುವ ಘಟನೆ ನಡೆದಿದೆ. ಇಶಾನ್ ಕಿಶನ್ ಅವರನ್ನು ಹೊಡೆಯಲು ಪ್ರಯತ್ನಿಸಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ರೋಹಿತ್ ಅವರೇ ನಾಯಕನಾಗಿ ಇಷ್ಟೊಂದು ಕೋಪ ಒಳ್ಳೆಯದಲ್ಲ ಎಂದು ನೆಟ್ಟಿಗರು, ಕ್ರಿಕೆಟ್ ಪ್ರೇಮಿಗಳು ವಾಗ್ದಾಳಿ ನಡೆಸಿದ್ದಾರೆ. ಆಟಗಾರರೊಂದಿಗೆ ತಾಳ್ಮೆಯಿಂದ ವರ್ತಿಸಿ ಎಂದು ಸಲಹೆ ನೀಡಿದ್ದಾರೆ.

ನಡೆದಿದ್ದು ಏನು.?

ಪಂದ್ಯದ ಡ್ರಿಂಕ್ಸ್ ಬ್ರೇಕ್ ವೇಳೆ ವಾಟರ್ ಬಾಯ್ ಆಗಿ ಇಶಾನ್ ಕಿಶನ್, ಮೈದಾನಕ್ಕೆ ಬಂದಿದ್ದರು. ನೀರಿನ ಬಾಟಲಿ ನೀಡಲು ಓಡಿ ಬಂದ ಇಶಾನ್, ಅಷ್ಟೇ ವೇಗವಾಗಿ ಮರಳುವ ಸಂದರ್ಭದಲ್ಲಿ ರೋಹಿತ್ ಬಳಿ ನೀರಿನ ಬಾಟಲಿ ತೆಗೆದುಕೊಂಡರು. ಆದರೆ, ಓಡುವ ಆತುರದಲ್ಲಿ ಬಾಟಲಿಯನ್ನು ನೆಲದ ಮೇಲೆ ಬೀಳಿಸಿದರು. ಇಶಾನ್ ಕೈಯಿಂದ ಬಾಟಲಿ ಜಾರಿದ ತಕ್ಷಣವೇ ರೋಹಿತ್, ಹೊಡೆಯಲು ಪ್ರಯತ್ನಿಸಿದರು. ಆದರೆ ಇಶಾನ್ ಅದರಿಂದ ಪಾರಾದರು.

ಆದರೆ ಇದೇ ವಿಷಯವನ್ನಿಟ್ಟುಕೊಂಡು ನೆಟ್ಟಿಗರು ಟ್ವಿಟರ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಭಾರತ ತಂಡದ ನಾಯಕ, ಇಶಾನ್ ಕಿಶನ್ ಅವರೊಂದಿಗೆ ಅಗೌರವವಾಗಿ ನಡೆದುಕೊಂಡಿದ್ದಾರೆ. ‘ಮ್ಯಾನ್‌ಹ್ಯಾಂಡ್ಲಿಂಗ್’ ಮಾಡಿದ್ದಾರೆ ಎಂದೆಲ್ಲಾ ಆರೋಪಿಸಿದ್ದಾರೆ. ಇದು ಟ್ವಿಟರ್ನಲ್ಲಿ ಟ್ರೆಂಡಿಂಗ್ ಕೂಡ ಆಗುತ್ತಿದೆ. ನಾಯಕನಾಗಿ ಆಟಗಾರರೊಂದಿಗೆ ಸ್ನೇಹಿತರಂತೆ ವರ್ತಿಸಿ ಎಂದು ಸೂಚಿಸುತ್ತಿದ್ದು, ಮೊದಲ ದಿನದಾಟದಲ್ಲಿ ಭರ್ಜರಿ ರನ್ ಕಲೆಹಾಕಿರುವ ಆಸ್ಟ್ರೇಲಿಯಾದ ಆಟದಿಂದ ರೋಹಿತ್ ಈ ರೀತಿ ವರ್ತಿಸಿದರಾ ಎಂಬ ಅನುಮಾನ‌ ಮೂಡಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *