ಭಾರಿ ಮಳೆಗೆ ಹಳಿ ಜಲಾವೃತ; ಹಲವು ರೈಲುಗಳ ಸಂಚಾರ ರದ್ದು

South Western Railway
Spread the love

ನ್ಯೂಸ್ ಆ್ಯರೋ: ಭಾರಿ ಮಳೆಗೆ ಹಳಿಗಳು ಜಲಾವೃತವಾಗಿರುವುದರಿಂದ ನೈರುತ್ಯ ರೈಲ್ವೆ ಬುಧವಾರ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

ಚೆನ್ನೈನ ಬೇಸಿನ್ ಬ್ರಿಡ್ಜ್ ಜೆಎನ್ ಮತ್ತು ಬೇಸಿನ್ ಬ್ರಿಡ್ಜ್ ಮತ್ತು ವ್ಯಾಸರಪಾಡಿ ರೈಲು ನಿಲ್ದಾಣಗಳ ನಡುವಿನ ಸೇತುವೆ ನಂ.114 ರ ಮೇಲೆ ನೀರು ತುಂಬಿಕೊಂಡ ಪರಿಣಾಮ ಕರ್ನಾಟಕದಿಂದ ಹೊರಡುವ 10 ರೈಲುಗಳ ಸಂಚಾರವನ್ನು ಇಂದು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ರದ್ದಾದ ರೈಲುಗಳ ವಿವರ:

  • ರೈಲು ಸಂಖ್ಯೆ 12657 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು
  • ರೈಲು ಸಂಖ್ಯೆ 12607 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು
  • ರೈಲು ಸಂಖ್ಯೆ 12608 ಕೆಎಸ್ಆರ್ ಬೆಂಗಳೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್
  • ರೈಲು ಸಂಖ್ಯೆ 12609 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು
  • ರೈಲು ಸಂಖ್ಯೆ 12610 ಮೈಸೂರು ಟು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್
  • ರೈಲು ಸಂಖ್ಯೆ 12027 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಮತ್ತು ಕೆಎಸ್ಆರ್ ಬೆಂಗಳೂರು
  • ರೈಲು ಸಂಖ್ಯೆ 12028 ಕೆಎಸ್‌ಆರ್ ಬೆಂಗಳೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್
  • ರೈಲು ಸಂಖ್ಯೆ 12007 – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು
  • ರೈಲು ಸಂಖ್ಯೆ 12008 ಮೈಸೂರು-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್
  • ರೈಲು ಸಂಖ್ಯೆ 06275 ಚಾಮರಾಜನಗರ-ಮೈಸೂರು
  • ರೈಲು ಸಂಖ್ಯೆ 20623 ಮೈಸೂರು-ಕೆಎಸ್‌ಆರ್ ಬೆಂಗಳೂರು ಮಾಲ್ಗುಡಿ ಎಕ್ಸ್‌ಪ್ರೆಸ್
  • ರೈಲು ಸಂಖ್ಯೆ 20624 ಕೆಎಸ್ಆರ್ ಬೆಂಗಳೂರು- ಮೈಸೂರು ಮಾಲ್ಗುಡಿ ಎಕ್ಸ್ ಪ್ರೆಸ್
  • ರೈಲು ಸಂಖ್ಯೆ 16022 ಮೈಸೂರು- ಡಾ. ಎಂಜಿಆರ್ ಸೆಂಟ್ರಲ್ ಕಾವೇರಿ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಬುಧವಾರ ಭಾರೀ ಮಳೆ, ಗುಡುಗು, ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಕ್ಟೋಬರ್ 18 ರವರೆಗೆ ಬೆಂಗಳೂರು ಮತ್ತು ಕರಾವಳಿ, ಉತ್ತರ ಒಳಭಾಗ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು IMD ಅಧಿಕಾರಿಗಳು ತಿಳಿಸಿದ್ದಾರೆ.ಬೆಂಗಳೂರು ಸುತ್ತಮುತ್ತ ಮುಂದಿನ ಮೂರ್ನಾಲ್ಕು ದಿನ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!