ವೈರಲ್ ಆಗುತ್ತಿದೆ ಆಟೋದ ಹಿಂಬದಿಯಲ್ಲಿ ಬರೆದಿರುವ ಸಾಲುಗಳು; ಏನಿದೆ ಕಹಾನಿ ಗೊತ್ತಾ ?
ಬೆಂಗಳೂರು: ಬೆಂಗಳೂರಿನ ಆಟೋವೊಂದು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಟೋ ಚಾಲಕ ತನ್ನ ಆಟೋ ಹಿಂಬದಿಯಲ್ಲಿ ಸಂದೇಶವೊಂದನ್ನು ಬರೆದಿದ್ದು, ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದೇಶದ ಬಗ್ಗೆ ಚರ್ಚೆ ನಡೆದಿದೆ.
ಆಟೋ ಚಾಲಕ ತಮ್ಮ ಆಟೋ ಹಿಂಭಾಗದಲ್ಲಿ “Slim or fat, black or white, virgin or not. All girls deserve respect,” ಎಂದು ಬರೆಯಲಾಗಿದೆ. ದಪ್ಪಗಿರಲಿ ಅಥವಾ ಸಣ್ಣ, ಬೆಳ್ಳಗಿರಲಿ ಅಥವಾ ಕಪ್ಪಗೆ, ವರ್ಜಿನ್ ಅಥವಾ ಅಲ್ಲ ಏನೇ ಆದರೂ ಎಲ್ಲಾ ಹುಡುಗಿಯರು ಗೌರವಕ್ಕೆ ಅರ್ಹರಾಗಿರುತ್ತಾರೆ ಎಂದು ಬರೆಯಲಾಗಿದೆ. ಯಾವುದೇ ವಿಷಯದಲ್ಲೂ ಕೀಳಾಗಿ ನೋಡಬೇಡಿ ಎಂದು ವಿವರಿಸಲಾಗಿದೆ.
ಈ ವೈರಲ್ ಪೋಸ್ಟ್ ನೋಡಿದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಭುಗಿಲೆದ್ದಿದೆ. @kreepkroop ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
Leave a Comment