ತಿರುಪತಿ ಲಡ್ಡು ಕಲಬೆರಕೆ ಕೇಸ್; ಎಸ್‌ಐಟಿ ತನಿಖೆ ತಾತ್ಕಾಲಿಕವಾಗಿ ಸ್ಥಗಿತ

SIT probe into Tirupati laddus
Spread the love

ದೆಹಲಿ: ತಿರುಪತಿ ಲಡ್ಡುಗಳ ಕಲಬೆರಕೆ ಪ್ರಕರಣವು ಸುಪ್ರೀಂಕೋರ್ಟ್‌ನ ವ್ಯಾಪ್ತಿಯಲ್ಲಿರುವುದರಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಂಧ್ರಪ್ರದೇಶ ಡಿಜಿಪಿ ಮಂಗಳವಾರ ತಿಳಿಸಿರುವುದಾಗಿ ವರದಿಯಾಗಿದೆ.

“ಮೊದಲು ಅವರು (ಎಸ್‌ಐಟಿ) ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು, ಅದನ್ನು ಅಧ್ಯಯನ ಮಾಡಬೇಕು ಮತ್ತು ಎಲ್ಲಾ ಮಾಹಿತಿಯನ್ನು ತೆಗೆದುಕೊಳ್ಳಬೇಕು, ಆದರೆ ಈ ಮಧ್ಯೆ, ಸುಪ್ರೀಂಕೋರ್ಟ್‌ನಿಂದ ಆದೇಶ ಬಂದಿದೆ ಮತ್ತು ಅದಕ್ಕೆ ಅನುಗುಣವಾಗಿ ನಾವು ಅದನ್ನು (ತನಿಖೆ) ನಿಲ್ಲಿಸಿದ್ದೇವೆ” ಎಂದು ಆಂಧ್ರದ ಉನ್ನತ ಪೊಲೀಸ್ ಅಧಿಕಾರಿ ದ್ವಾರಕಾ ತಿರುಮಲ ರಾವ್ ಹೇಳಿದ್ದಾರೆ.

ಸೋಮವಾರ, ಎಸ್‌ಐಟಿ ತಿರುಮಲದ ಹಿಟ್ಟಿನ ಗಿರಣಿಯಲ್ಲಿ ತುಪ್ಪವನ್ನು ಸಂಗ್ರಹಿಸಿ, ಲಡ್ಡುಗಳನ್ನು ತಯಾರಿಸಲು ಬಳಸುವ ಮೊದಲು ಲ್ಯಾಬ್‌ನಲ್ಲಿ ಪರೀಕ್ಷಿಸಲಾಯಿತು.

ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂಬ ಆಂಧ್ರ ಸಿಎಣ ಚಂದ್ರಬಾಬು ನಾಯ್ಡು ಅವರ ಬಹಿರಂಗ ಹೇಳಿಕೆಯನ್ನು ಸೋಮವಾರ, ಸುಪ್ರೀಂಕೋರ್ಟ್ ಗಮನಿಸಿದಾಗ, ರಾಜಕೀಯದಿಂದ ದೇವರುಗಳನ್ನು ದೂರವಿಡಬೇಕು ಎಂದಿದೆ.

ಇದು ಬಳಸಿದ ತುಪ್ಪ ಅಲ್ಲ ಎಂಬುದು ವರದಿಯಿಂದ ಸ್ಪಷ್ಟವಾಗಿದೆ, ನಿಮಗೆ ಖಚಿತವಾಗದಿದ್ದರೆ, ನೀವು ಅದನ್ನು ಹೇಗೆ ಸಾರ್ವಜನಿಕವಾಗಿ ಹೇಳಿದ್ದೀರಿ?” ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠ ಹೇಳಿದೆ.

Leave a Comment

Leave a Reply

Your email address will not be published. Required fields are marked *