ಬಿಗ್ ಬಾಸ್ ಗೆ ಕಿಚ್ಚನ ವಿದಾಯ ; ಅಪ್ಪನ ನಿರ್ಧಾರಕ್ಕೆ ಪುತ್ರಿ ಸಾನ್ವಿ ಏನಂದ್ರು?
ನ್ಯೂಸ್ ಆ್ಯರೋ: ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಅಂದ್ರೆ ಸುದೀಪ್.. ಸುದೀಪ್ ಅಂದ್ರೆ ಬಿಗ್ ಬಾಸ್ ಅಂತ ಅವರ ಅಭಿಮಾನಿಗಳು ಕರೆಯುತ್ತಾರೆ. ಬಿಗ್ ಬಾಸ್ ರಿಯಾಲಿಟಿ ಶೋಗೆ ಒಂದು ಖದರ್ ಬಂದಿದ್ದೇ ಸುದೀಪ್ ಅವರಿಂದ ಅಂತ ಹೇಳಿದ್ರೆ ತಪ್ಪಾಗೋದಿಲ್ಲ. ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಅವರು ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋಗೆ ಗುಡ್ ಬೈ ಹೇಳುವ ಮಾತನಾಡಿದ್ದಾರೆ. ಖುದ್ದು ಈ ಬಗ್ಗೆ ಅನೌನ್ಸ್ ಮಾಡಿರುವ ಕಿಚ್ಚ ಸುದೀಪ್, 11 ವರ್ಷ ಈ ಪಯಣ ಅದ್ಬುತ . ಇದು ನನ್ನ ಕೊನೆಯ ಸೀಸನ್. ನನ್ನ ನಿರ್ಧಾರವನ್ನ ಚಾನಲ್ ಮತ್ತು ಇಷ್ಟು ವರ್ಷ ಬಿಗ್ ಬಾಸ್ ವೀಕ್ಷಿಸಿದ ಜನರು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಬಿಗ್ ಬಾಸ್‌ಗೆ ವಿದಾಯ ಹೇಳುವ ಕಿಚ್ಚ ಸುದೀಪ್ ಅವರ ನಿರ್ಧಾರಕ್ಕೆ ಸಾನ್ವಿ ಸುದೀಪ್ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಸುದೀಪ್ ಅವರ ಟ್ವೀಟ್‌ಗೆ ಪೋಸ್ಟ್ ಮಾಡಿರುವ ಸಾನ್ವಿ, ಅಪ್ಪ ಬಿಗ್ ಬಾಸ್ ಶೋದಲ್ಲಿ ನಿಮಗೆ ಬೇರೆ ಯಾರು ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನಿಮ್ಮ ಕೊಡುಗೆಗೆ ನಾನು ಗೌರವಿಸುತ್ತೇನೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳಿದ್ದಾರೆ.
ಅಪ್ಪ ನಿಮ್ಮ ಬಿಗ್ ಬಾಸ್ ಜರ್ನಿ ಅತ್ಯಂತ ಹೆಮ್ಮೆ ಪಡುವಂತದ್ದು. ಬೇರೆ ಯಾರು ನಿಮ್ಮ ರೀತಿ ಮಾಡಲು ಸಾಧ್ಯವಿಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ನೀವು ಅಮೋಘವಾಗಿ ಕಾಣಿಸಿಕೊಳ್ಳುವುದನ್ನ ತಪ್ಪಿಸಿಕೊಳ್ಳುತ್ತೀರಿ. ಆದರೆ ಬಿಗ್ ಬಾಸ್ ಜರ್ನಿಯಲ್ಲಿ ನಿಮ್ಮನ್ನು ನೋಡಿದ್ದು ನನಗೆ ಅತ್ಯಂತ ಸಂತೋಷವನ್ನು ತಂದಿದೆ. ಬಿಗ್ ಬಾಸ್ ಶೋಗಾಗಿ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನೀವು ನೀಡಿರುವ ಕೊಡುಗೆಗೆ ನಾನು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.
Leave a Comment