ಬಿಗ್ಬಾಸ್ಗೆ ಸ್ನೇಹಾ ವೈಲ್ಡ್ ಕಾರ್ಡ್ ಎಂಟ್ರಿ; ಈ ಬಗ್ಗೆ ಸಂಜನಾ ಹೇಳಿದ್ದೇನು?
ನ್ಯೂಸ್ ಆ್ಯರೋ: ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಯಾರೂ ಊಹಿಸದ ಟ್ವಿಸ್ಟ್ ಬಂದುಬಿಟ್ಟಿದೆ. ಪುಟ್ಟಕ್ಕನ ಮಗಳು ಸ್ನೇಹಾ (ಸಂಜನಾ ಬುರ್ಲಿ) ನಿಧನ ಹೊಂದಿದ್ದಾಳೆ. ಈ ಬೆಳವಣಿಗೆಯಿಂದ ಧಾರಾವಾಹಿಯ ನಿರ್ದೇಶಕರ ಮೇಲೆ ವೀಕ್ಷಕರಿಗೆ ಸಿಟ್ಟು ಬರುವಂತೆ ಆಗಿದೆ. ಇದರಲ್ಲಿನ ಕೊನೆಯ ದೃಶ್ಯಗಳು ಕಲ್ಲು ಹೃದಯಬನ್ನೂ ಕರಗಿಸುವಂತಿವೆ.
ಪ್ರತಿಯೊಬ್ಬರ ಅಭಿನಯ ಮನ ಮುಟ್ಟುವಂತಿದೆ. ಅಂದ್ಹಾಗೆ, ಸ್ನೇಹಾಳಿಗೆ ಸಕಲ ಸರ್ಕಾರಿ ಗೌರವಗಳನ್ನ ನೀಡಲಾಯ್ತು. ಈ ದೃಶ್ಯದ ಸಿದ್ಧತೆಗೆ ರಿಯಲ್ ಪೊಲೀಸ್ ಬಂದು ಎಲ್ಲಾ ಕಲಾವಿದರಿಗೆ ಟ್ರೈನಿಂಗ್ ಮಾಡಿದ್ದರಂತೆ. ಇನ್ನೂ ಸ್ನೇಹಾ ಪಾತ್ರ ಮುಕ್ತಾಯವಾಗಿದೆ.
ಸೀರಿಯಲ್ನಿಂದ ಆಚೆ ಬಂದಿದ್ದ ಸ್ನೇಹ ಅಂದ್ರೆ ಸಂಜನಾ ಬುರ್ಲಿ ಅವರಿಗೆ ಬಿಗ್ಬಾಸ್ನಿಂದ ಆಫರ್ ಬಂದಿದೆ. ಹೀಗಾಗಿ ಅವರನ್ನು ಸೀರಿಯಲ್ನಲ್ಲಿ ಅಪಘಾತ ಮಾಡಿಸಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಾಮೆಂಟ್ಸ್ಗಳನ್ನು ಹಾಕುತ್ತಿದ್ದಾರೆ. ಇನ್ನೂ ಈ ಬಗ್ಗೆ ಕೂಡ ಸಂಜನಾ ಅವರು ಮಾತಾಡಿದ್ದಾರೆ.
“ನಾನು ಸೀರಿಯಲ್ಗೆ 3 ತಿಂಗಳು ನೋಟೀಸ್ ಪಿರಿಯಡ್ ಕೊಟ್ಟಿದೆ. ಆಗ ನಮ್ಮ ಡೈರೆಕ್ಟರ್ ಆರೂರ್ ಜಗದೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಪ್ರಮುಖ ಪಾತ್ರಕ್ಕೆ ನಟಿ ಬೇಕಾಗಿದ್ದಾರೆ ಅಂತ. ಸ್ನೇಹಾಳ ಕ್ಯಾರೆಕ್ಟರ್ಗೆ ರಿಪ್ಲೇಸ್ ಮಾಡೋದಕ್ಕೆ ಅಲ್ಲ. ಆಗ ಸಾಕಷ್ಟು ಮಂದಿ ಇದನ್ನು ಗೇಸ್ ಮಾಡಿದ್ದರು. ಸಂಜನಾ ಅವರು ಬಿಗ್ಬಾಸ್ಗೆ ಹೋಗುತ್ತಾರೆ ಅಂತ ಮುಂಚೆಯೇ ಗೇಸ್ ಮಾಡಿದ್ದರು. ಆದರೆ ಈಗ ಸ್ನೇಹಾ ಕ್ಯಾರೆಕ್ಟರ್ ಎಂಡ್ ಆದ ಮೇಲೆ ಬಿಗ್ಬಾಸ್ಗೆ ವೈಲ್ಡ್ಕಾರ್ಡ್ ಎಂಟ್ರಿ ಕೊಡುತ್ತಾರೆ ಅಂತ ಜನ ಅಂದುಕೊಳ್ಳುತ್ತಿದ್ದಾರೆ. ನಾನು ಯಾವ ರಿಯಾಲಿಟಿ ಶೋಗೂ ಹೋಗುತ್ತಿಲ್ಲ” ಅಂತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
Leave a Comment