ʼರಣಜಿ ಟ್ರೋಫಿಯೇ ನನ್ನ ಕೊನೆ ಪಂದ್ಯವಾಗಿದೆʼ; ದಿಢೀರ್ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಆಟಗಾರ

Wriddhiman Saha
Spread the love

ನ್ಯೂಸ್ ಆ್ಯರೋ: ಭಾರತದ ಟೆಸ್ಟ್‌ ತಂಡದಲ್ಲಿ ವಿಕೆಟ್‌ ಕೀಪರ್‌ ಆಗಿದ್ದ, ಹಲವು ಐಪಿಎಲ್‌ ತಂಡಗಳಲ್ಲಿ ಆಡಿರುವ ವೃದ್ದಿಮಾನ್‌ ಸಹಾ ಅವರು ಎಲ್ಲಾ ಮಾದರಿ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ್ದಾರೆ. ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ಕೂಟದಲ್ಲಿ ಕೊನೆಯ ಬಾರಿಗೆ ಬೆಂಗಾಲ್‌ ತಂಡವನ್ನು ಪ್ರತಿನಿಧಿಸುವುದಾಗಿ ಸಹಾ ಹೇಳಿದ್ದಾರೆ.

Wriddhiman Saha

ಇತ್ತೀಚಿನ ದಿನಗಳಲ್ಲಿ ಭಾರತ ಹೊಂದಿರುವ ಅತ್ಯುತ್ತಮ ವಿಕೆಟ್-ಕೀಪರ್ ಆಗಿರುವ ಸಹಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಋತುವಿನಲ್ಲಿ ಸಹ ಕಾಣಿಸಿಕೊಳ್ಳಲು ಬಯಸುತ್ತಿದಿಲ್ಲ ಎಂದು ವರದಿಯಾಗಿದೆ.

“ಉತ್ತಮ ಕ್ರಿಕೆಟ್‌ ಜೀವನದ ಬಳಿಕ ಈ ಸೀಸನ್‌ ನನ್ನ ಕೊನೆಯದಾಗಿದೆ. ಬೆಂಗಾಲ್‌ ತಂಡವನ್ನು ಅಂತಿಮವಾಗಿ ಪ್ರತಿನಿಧಿಸಲಿದ್ದೇನೆ. ವಿದಾಯಕ್ಕಿಂತ ಮೊದಲು ಕೊನೆಯ ಬಾರಿಗೆ ರಣಜಿ ಟ್ರೋಫಿ ಪಂದ್ಯವನ್ನು ಆಡಲಿದ್ದೇನೆ” ಎಂದು ವೃದ್ದಿಮಾನ್‌ ಸಹಾ ಹೇಳಿದರು. ಇದೀಗ ತಮ್ಮ 40ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದು, ಈ ಮೂಲಕ ಸುದೀರ್ಘ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.

Wriddhiman Saha

ಸಹಾ ಅವರು ಭಾರತದ ಟೆಸ್ಟ್‌ ತಂಡದ ಪ್ರಮುಖ ಭಾಗವಾಗಿದ್ದರು. ಅತ್ಯುತ್ತಮ ವಿಕೆಟ್‌ ಕೀಪರ್‌ ಆಗಿರುವ ಸಹಾ ಧೋನಿ ನಿವೃತ್ತಿಯ ಬಳಿಕ ಟೆಸ್ಟ್‌ ಕೀಪರ್‌ ಆಗಿದ್ದರು. ಆದರೆ ರಿಷಭ್‌ ಪಂತ್‌ ತಂಡಕ್ಕೆ ಬಂದ ಬಳಿಕ ಸಹಾಗೆ ಅವಕಾಶ ಕಡಿಮೆಯಾಗಿತ್ತು. ಆದರೆ 2023ರ ಬಿಸಿಸಿಐ ಕೇಂದ್ರಿಯ ಗುತ್ತಿಗೆಯಿಂದ ಅವರನ್ನು ಕೈಬಿಡಲಾಗಿತ್ತು. 40 ಟೆಸ್ಟ್‌ ಪಂದ್ಯವಾಡಿರುವ ವೃದ್ದಿಮಾನ್‌ ಸಹಾ 29.41ರ ಸರಾಸರಿಯಲ್ಲಿ 1353 ರನ್‌ ಗಳಿಸಿದ್ದಾರೆ. ಮೂರು ಶತಕ ಮತ್ತು ಆರು ಅರ್ಧಶತಕ ಬಾರಿಸಿದ್ದಾರೆ. ವಿಕೆಟ್‌ ಕೀಪರ್‌ ಆಗಿ 92 ಕ್ಯಾಚ್‌ ಪಡೆದಿರುವ ಅವರು 12 ಸ್ಟಂಪೌಟ್‌ ಗಳಿಗೆ ಕಾರಣರಾಗಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!