ಉಡುಪಿ ‌: ಕಡಲ ಕೊರೆತದ ನಡುವೆ ಮರವಂತೆ ಬೀಚ್ ನಲ್ಲಿ ಪ್ರವಾಸಿಗರ ಹುಚ್ಚಾಟ – ಸಮುದ್ರಕ್ಕೆ ಇಳಿದು ಅನಾಹುತಕ್ಕೆ ಆಹ್ವಾನ : ಜಿಲ್ಲಾಡಳಿತ ಇತ್ತ ಗಮನ ಹರಿಸಿ…!

20240706 091358
Spread the love

ನ್ಯೂಸ್ ಆ್ಯರೋ : ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆ ಹಿನ್ನೆಲೆ ಸಾಕಷ್ಟು ಭಾಗದಲ್ಲಿ ಕಡಲ ಕೊರೆತ ಸಮಸ್ಯೆ ಉಂಟಾಗಿದೆ. ಆದರೆ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಬೀಚ್​ನಲ್ಲಿ (Maravanthe Beach) ಪ್ರವಾಸಿಗರ ಹುಚ್ಚಾಟ ಹೆಚ್ಚಾಗಿದೆ.

ಪ್ರತಿ ದಿನ ಪ್ರವಾಸಿಗರು ಮರವಂತೆ ಬೀಚ್​ಗೆ ಆಗಮಿಸುವ ಪ್ರವಾಸಿಗರು ಸಮುದ್ರದ ಅಲೆಗಳ ನರ್ತನವನ್ನು ಎಂಜಾಯ್ ಮಾಡಿದ್ದಾರೆ. ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ಕೊಡದೆ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಅನಾಹುತಕ್ಕೆ ಆಹ್ವಾನ ಕೊಟ್ಟಂತಾಗಿದೆ.

ಮಳೆಗಾಲದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬೀಚ್ಗಳಿಗೂ ಪ್ರವೇಶ ನಿಷೇಧ ಹೇರಲಾಗಿದೆ. ಮಳೆಗಾಲದಲ್ಲಿ ಕಡಲಬ್ಬರ ಜಾಸ್ತಿ ಆಗುವ ಹಿನ್ನಲೆಯಲ್ಲಿ ಬೀಚ್ಗಳ ಬಳಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ.

ಮಳೆಗಾಲದಲ್ಲಿ‌ ಸಮುದ್ರಕ್ಕೆ ಇಳಿಯುವುದಕ್ಕೆ ನಿಷೇಧ ಮಾಡಲಾಗಿದೆ. ಪೊಲೀಸ್ ರಿಬ್ಬನ್ ಕಟ್ಟಿದ್ರೂ ಕೂಡ ಪ್ರವಾಸಿಗರ ಅಟ್ಟಹಾಸ ಮೆರೆಯುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಮಲ್ಪೆ ಬೀಚ್ ಗೆ ಬಲೆ ಅಳವಡಿಕೆ ಮಾಡಲಾಗಿದೆ. ಆದರೆ ಮರವಂತೆ ಬೀಚ್ ಗೆ ಯಾವುದೇ ಭದ್ರತೆ ಕೈಗೊಂಡಿಲ್ಲ. ಹೀಗಾಗಿ ಮೂರು ಕಿಲೋಮೀಟರ್ ಉದ್ದದ ಬೀಚ್ಗೆ ಪ್ರವಾಸಿಗರು ನಿತ್ಯ ಆಗಮಿಸುತ್ತಿದ್ದಾರೆ.

ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ನೀಡದೆ ಸಮುದ್ರಕ್ಕೆ ಇಳಿದು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತೆ ಬೀಚ್​ಗೆ ಇಳಿಯುತ್ತಿದ್ದಾರೆ. ದಿನವೂ ಸಾವಿರಾರು ಪ್ರವಾಸಿಗರು ಮರವಂತೆ ಬೀಚ್​ಗೆ ಭೇಟಿ ನೀಡುತ್ತಿದ್ದು ಬೀಚ್​ಗೆ ಫೆನ್ಸಿಂಗ್ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ರತಿ ವರ್ಷವೂ ಕೂಡ ಒಂದಲ್ಲ ಒಂದು ಅವಘಡಗಳು ಇಲ್ಲಿ ನಡೆಯುತ್ತವೆ. ಹೀಗಾಗಿ ಮಲ್ಪೆ ಬೀಚಿನಷ್ಟೇ ಪ್ರಾಮುಖ್ಯತೆಯನ್ನು ಮರವಂತೆ ಬೀಚ್ ಗೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ

Leave a Comment

Leave a Reply

Your email address will not be published. Required fields are marked *

error: Content is protected !!