Mangalore : ಬಹುದಿನಗಳ ಬಳಿಕ ನಗರದಲ್ಲಿ ರಕ್ತದೋಕುಳಿ – ನಟೋರಿಯಸ್ ರೌಡಿ ಕಡಪ್ಪರ ಸಮೀರ್ ನನ್ನು ತಾಯಿ ಕಣ್ಣೆದುರೇ ಕೊಚ್ಚಿ ಕೊಲೆಗೈದ ಗ್ಯಾಂಗ್..!

Spread the love

ನ್ಯೂಸ್ ಆ್ಯರೋ : ಬಹುಸಮಯದ ಬಳಿಕ ಕರಾವಳಿ ನಗರಿ ಮಂಗಳೂರಿನಲ್ಲಿ ರಕ್ತದೋಕುಳಿ ಹರಿದಿದ್ದು, ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ, ಉಳ್ಳಾಲದ ರೌಡಿಶೀಟರ್ ಕಡಪ್ಪರ ಸಮೀರ್ ನನ್ನು ದುಷ್ಕರ್ಮಿಗಳ ಗ್ಯಾಂಗ್ ವೊಂದು ಕೊಲೆಗೈದು ಪರಾರಿಯಾಗಿದೆ.

ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ವಿಕೆ ಫರ್ನಿಚರ್ ಬಳಿ ಘಟನೆ ನಡೆದಿದ್ದು, ಸಮೀರ್ ಭಾನುವಾರ ರಾತ್ರಿ ತಾಯಿ ಜೊತೆ ಕಾರಿನಲ್ಲಿ ಕಲ್ಲಾಪಿನ ಫಾಸ್ಟ್ ಫುಡ್ ವೊಂದಕ್ಕೆ ಊಟಕ್ಕಾಗಿ ತೆರಳಿದ್ದ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ.

ಸಮೀರ್ ಕಾರು ಇಳಿಯುತ್ತಿದ್ದಂತೆ ಆತನ ಕಾರ್ ಅನ್ನೇ ಮತ್ತೊಂದು ಕಾರು ಬೆನ್ನಟ್ಟಿ ಬಂದಿದ್ದು ಅದರಲ್ಲಿದ್ದ ಮೂವರ ತಂಡವು ಮಾರಕಾಸ್ತ್ರಗಳಿಂದ ಏಕಾಏಕಿ ಸಮೀರ್ ನ ಮೇಲೆ ಹಲ್ಲೆ ನಡೆಸಿತ್ತು. ಈ ವೇಳೆ ಸಮೀರ್ ತಪ್ಪಿಸಿಕೊಂಡು ರೈಲ್ವೇ ಹಳಿ ಕಡೆಗೆ ಓಡಿಹೋಗಿದ್ದ ಎನ್ನಲಾಗಿದೆ.

ಮಾರಣಾಂತಿಕ ಹಲ್ಲೆ ಘಟನೆಯ ಬೆನ್ನಲ್ಲೇ ಕಲ್ಲಾಪು ಜಂಕ್ಷನ್ ನಲ್ಲಿ ಜನಸ್ತೋಮವೇ ನೆರೆದಿದ್ದು ತಪ್ಪಿಸಿಕೊಂಡಿರುವ ರೌಡಿಶೀಟರ್ ಸಮೀರ್ ಗಾಗಿ ಹುಡುಕಾಟ ನಡೆಸಿದ್ದು, ತಡರಾತ್ರಿ ಸಮೀರ್ ಮೃತ ದೇಹವು ವಿಕೆ ಫರ್ನಿಚರ್ ಬಳಿಯ ಪೊದೆಯಲ್ಲಿ ಪತ್ತೆಯಾಗಿದೆ.

ಟಾರ್ಗೆಟ್ ಇಲಿಯಾಸ್ ಕೊಲೆ ಪ್ರಕರಣದ ಬಳಿಕ
ಸಮೀರ್ ಮತ್ತಾತನ ತಂಡವು ಇತ್ತೀಚೆಗಷ್ಟೆ ದರೋಡೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು ಎರಡು ದಿನಗಳ ಹಿಂದಷ್ಟೆ ಸಮೀರ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.

ಕಳೆದ ಜುಲೈ 1ರಂದು ಸಮೀರ್ ಹಾಗೂ ಆತನ‌ ಸಹಚರ ಮೊಹ್ಮದ್ ಮನ್ಸೂರ್ ನನ್ನು ಕೊಡಿಯಾಲ್ ಬೈಲ್ ನ ಸಬ್ ಜೈಲಿನಲ್ಲಿ ಹತ್ತು ತಂಡವೊಂದು ಚಮಚ ಸೇರಿದಂತೆ ಇತರ ಕಿಚನ್ ಸಾಮಾಗ್ರಿಗಳಿಂದ ಕೊಲೆಗೆ ಯತ್ನಿಸಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ತಿಂಗಳು ಕಳೆದು ಸಮೀರ್ ಹೊರಬಂದಿದ್ದು, ಬೀದಿ ಹೆಣವಾಗಿದ್ದಾನೆ.

Leave a Comment

Leave a Reply

Your email address will not be published. Required fields are marked *