Renukaswamy Murder Case: ಮತ್ತೆ ಹಾಸ್ಯ ನಟ ಚಿಕ್ಕಣ್ಣಗೆ ಸಂಕಷ್ಟ, ನೋಟಿಸ್ ನೀಡಲು ತಯಾರಿ – ಪ್ರಕರಣದ 4000 ಪುಟಗಳ ಚಾರ್ಜ್ ಶೀಟ್ ರೆಡಿ
ನ್ಯೂಸ್ ಆ್ಯರೋ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ ಶುರುವಾಗುವ ಲಕ್ಷಣಗಳು ಕಾಣ್ತಿದ್ದು, ಪೋಲಿಸರು ಮತ್ತೆ ಚಿಕ್ಕಣ್ಣನಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಚಿಕ್ಕಣ ಸಾಕ್ಷಿಯಾಗಿದ್ದಾರೆ. ಅಲ್ಲದೇ ಜಡ್ಜ್ ಮುಂದೆ 164 ಹೇಳಿಕೆ ಕೂಡ ನೀಡಿದ್ದಾರೆ. ಆದರೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇರುವಾಗಲೇ ಜೈಲಿಗೆ ಹೋಗಿ ದರ್ಶನ್ ಭೇಟಿ ಆಗಿದ್ದು, ಇದರ ಕಾರಣ ಕೇಳಿ ಚಿಕ್ಕಣ್ಣಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವ ಉದ್ದೇಶಕ್ಕಾಗಿ ಭೇಟಿ ಆಗಿದ್ದೀರಾ? ಏನೆಲ್ಲಾ ಚರ್ಚಿಸಿದ್ರಿ? ಎಂಬ ಬಗ್ಗೆ ತನಿಖೆ ನಡೆಯಲಿದೆ.
ಇನ್ನು ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ಗಳು ಬರುತ್ತಲೇ ಇವೆ. ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದ್ದು ದರ್ಶನ್ ಅನ್ನೇ ಎ1 ಆರೋಪಿ ಮಾಡಲು ಅಂತಿಮ ಹಂತದ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಒಟ್ಟು 4000ಕ್ಕೂ ಹೆಚ್ಚು ಪುಟದ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಲಾಗಿದೆ.
ಇದುವರೆಗೆ 60 ದಿನಗಳ ಕಾಲ ಈ ಪ್ರಕರಣದ ಬಗ್ಗೆ ಪೋಲಿಸರು ತನಿಖೆ ಮಾಡಿದ್ದು ಚಾರ್ಜ್ ಶೀಟ್ ಕೋರ್ಟ್ಗೆ ಸಲ್ಲಿಸೋಕೆ ಕೌಂಟ್ ಡೌನ್ ಶುರುವಾಗಿದೆ. ಈ ಕೊಲೆ ಪ್ರಕರಣದಲ್ಲಿ 17 ಜನ ಆರೋಪಿಗಳಿದ್ದು 200ಕ್ಕೂ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಜಾಣತನದಿಂದ ಪೋಲಿಸರು ಚಾರ್ಜ್ಶೀಟ್ ರೆಡಿ ಮಾಡಿದ್ದಾರೆ ಎನ್ನಲಾಗಿದೆ. ತೀರ್ಪು ಕೊಡುವ ಸಂದರ್ಭದಲ್ಲಿ ಚಾರ್ಜ್ ಶೀಟ್ ತುಂಬಾ ಪ್ರಮುಖ ಅಂಶವಾಗಿರಲಿದೆ.
Leave a Comment