
ಗಣೇಶನಿಗೆ ಪ್ರಿಯವಾದ ವಸ್ತುಗಳಾವುವು..?- ಚತುರ್ಥಿ ದಿನ ಗಣಪನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು? ಇಲ್ಲಿದೆ ಉತ್ತರ
- ಧಾರ್ಮಿಕ
- September 18, 2023
- No Comment
- 41
ನ್ಯೂಸ್ ಆ್ಯರೋ : ಈ ಬಾರಿಯ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 18 ಮತ್ತು 19 ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಚತುರ್ಥಿ ತಿಥಿಯು ಗಣೇಶನಿಗೆ ಸಮರ್ಪಿತವಾಗಿದೆ. ವಾಸ್ತವವಾಗಿ, ಪ್ರತಿ ತಿಂಗಳು ಎರಡು ಚತುರ್ಥಿ ದಿನಾಂಕಗಳಿವೆ. ಶುಕ್ಲ ಪಕ್ಷದಲ್ಲಿ ಒಂದು ಮತ್ತು ಕೃಷ್ಣ ಪಕ್ಷದಲ್ಲಿ ಒಂದು. ಆದರೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಗಣಪತಿಯು ಈ ದಿನ ಜನಿಸಿದನೆನ್ನುವ ನಂಬಿಕೆಯಿದೆ. ಈ ಹಬ್ಬವನ್ನು ಗಣೇಶ ಜನ್ಮೋತ್ಸವ ಎಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
10 ದಿನಗಳ ಕಾಲ ನಡೆಯುವ ಗಣೇಶೋತ್ಸವ ಸೆಪ್ಟೆಂಬರ್ 18 ರಿಂದ ಆರಂಭವಾಗುತ್ತದೆ. ಚತುರ್ಥಿ ತಿಥಿಯಂದು ಗಣಪತಿಯನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಜ್ಞಾನ ಮತ್ತು ಸಮೃದ್ಧಿ ದೊರೆಯುತ್ತದೆ. ಜೊತೆಗೆ ಈ 10 ದಿನಗಳಲ್ಲಿ ಗಣೇಶನಿಗೆ ದಿನವೂ ವಿಶಿಷ್ಟವಾಗಿ ಪೂಜಾ ಅರ್ಚನೆಗಳು ನೆರವೇರುತ್ತವೆ.
ಗಣೇಶ ಚತುರ್ಥಿಯಂದು ಗಣೇಶನನ್ನು ಕೆಲವೊಂದು ವಸ್ತುಗಳಿಂದ ವಿಶೇಷವಾಗಿ ಪೂಜಿಸಲಾಗುತ್ತದೆ. ಅವುಗಳು ಯಾವುವು ಗೊತ್ತೇ..?
- ಮೋದಕ
ಗಣೇಶನಿಗೆ ಮೋದಕ ಅಥವಾ ಮೊತೀಚೂರ್ ಸಿಹಿ ತಿಂಡಿ ಅರ್ಪಿಸಬೇಕು. ಶ್ರೀ ಗಣೇಶನಿಗೆ ಮೋದಕ ಅಥವಾ ಮೊತೀಚೂರ್ ಸಿಹಿ ತಿಂಡಿ ಅರ್ಪಿಸಬೇಕು.
ಗಣೇಶನ ಪೂಜೆ ವೇಳೆ ಭಕ್ತರು ನಾನಾ ಸ್ವರೂಪ, ಸ್ವಾದಿಷ್ಟದ ಸಿಹಿ ತಿನಿಸನ್ನು ಅರ್ಪಿಸುತ್ತಾರೆ. ಆದರೆ ಮೋದಕ ಅಥವಾ ಕಡುಬು ಮೇಲೆ ಭಗವಂತನಿಗೆ ವಿಶೇಷ ಪ್ರೀತಿ. ಹಾಗಾಗಿ ಅದನ್ನೇ ಮೃಷ್ಟಾನ್ನವಾಗಿ ಸಮರ್ಪಿಸಬೇಕು.
- ಗರಿಕೆ
ವಿಘ್ನ ವಿನಾಯಕನನ್ನು ಸಂಪ್ರೀತಗೊಳಿಸಲು ಸುಭಿಷ್ಟವಾಗಿ ದೊರಕುವ ಗರಿಕೆಯಿಂದ ಅರ್ಚನೆ ಮಾಡಬೇಕು. ಶ್ರೀ ವಿಘ್ನ ವಿನಾಯಕನನ್ನು ಸಂಪ್ರೀತಗೊಳಿಸಲು ಸುಭಿಷ್ಟವಾಗಿ ದೊರಕುವ ಗರಿಕೆಯಿಂದ ಅರ್ಚನೆ ಮಾಡಬೇಕು. ಆ ಗರಿಕೆಯಲ್ಲಿ 3 ಅಥವಾ 5 ಎಳೆಗಳು ಇರಬೇಕು. ಹೀಗೆ ಗರಿಕೆಯೊಂದಿಗೆ ಪೂಜೆ ಮಾಡುವುದರಿಂದ ಗಣಪತಿ ಬಪ್ಪಾ ಸಂಪ್ರೀತನಾಗಿ ನಿಮ್ಮ ಇಷ್ಟಾರ್ಥಗಳನ್ನುನೆರವೇರಿಸುತ್ತಾನೆ ಎಂಬುದು ಪ್ರತೀತಿ.
3.ಸಿಂಧೂರ
ಗಣೇಶನಿಗೆ ಸಿಂಧೂರದಿಂದ ತಿಲಕವಿಡಬೇಕು. ಇದು ಶುಭದ ಸಂಕೇತ. ತಿಲಕವು ಸುಖ ಮತ್ತು ಸಮೃದ್ಧಿಯನ್ನು ತರುತ್ತದೆ. ಭಗವಾನ್ ಗಣೇಶನಿಗೆ ಸಿಂಧೂರದಿಂದ ತಿಲಕವಿಡಬೇಕು. ಇದು ಶುಭದ ಸಂಕೇತ. ತಿಲಕವು ಸುಖ ಮತ್ತು ಸಮೃದ್ಧಿಯನ್ನು ತರುತ್ತದೆ. ಗಣೇಶನಿಗೆ ಕುಂಕುಮದಿಂದ ತಿಲಕವಿಟ್ಟು, ಪೂಜೆ ಮಾಡುವ ಭಕ್ತರೂ ಸಹ ತಮ್ಮ ಹಣೆಗೆ ತಿಲಕವಿಟ್ಟುಕೊಂಡು ಪೂಜೆ ಮಾಡಿದರೆ ಭಗವಂತ ಹೆಚ್ಚು ಸಂಪ್ರೀತಿಗೊಂಡು, ಭಕ್ತಗಣದ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.
4.ಬಾಳೆಹಣ್ಣು
ಪ್ರಥಮ ಪೂಜಕ ಗಣೇಶನಿಗೆ ಬಾಳೆಹಣ್ಣಿನಿಂದ ನೈವೇದ್ಯ ಮಾಡುವ ಸಂಪ್ರದಾಯವಿದೆ. ಪ್ರಥಮ ಪೂಜಕ ಗಣೇಶನಿಗೆ ಬಾಳೆಹಣ್ಣಿನಿಂದ ನೈವೇದ್ಯ ಮಾಡುವ ಸಂಪ್ರದಾಯವಿದೆ. ಹಾಗಾಗಿ ಗಣೇಶನಿಗೆ ಈ ಬಾರಿಯೂ ಬಾಳೆಹಣ್ಣುಗಳನ್ನಿಟ್ಟು ಪೂಜೆ ಮಾಡಿ.
- ಹಯಗ್ರೀವ
ಹಯಗ್ರೀವ ಅಥವಾ ಪಾಯಸ ಗಣಪ್ಪನಿಗೆ ಇಷ್ಟ ಮತ್ತು ಶ್ರೇಷ್ಠ. ಪೌರಾಣಿಕ ಕತೆಗಳ ಪ್ರಕಾರ ಶಿವನಿಗೆ ಪಾಯಸ ಅಂದ್ರೆ ತುಂಬಾ ಇಷ್ಟ. ಹಯಗ್ರೀವ ಅಥವಾ ಪಾಯಸ ಗಣಪ್ಪನಿಗೆ ಇಷ್ಟ ಮತ್ತು ಶ್ರೇಷ್ಠ. ಪೌರಾಣಿಕ ಕತೆಗಳ ಪ್ರಕಾರ ಶಿವನಿಗೆ ಪಾಯಸ ಅಂದ್ರೆ ತುಂಬಾ ಇಷ್ಟ. ಪಾರ್ವತಿ ಪಾಯಸ ಮಾಡಿದಾಗಲೆಲ್ಲ ಬಾಲ ಗಣಪ ಸುಪ್ರಸನ್ನನಾಗುತ್ತಿದ್ದ. ಮತ್ತು ಇಷ್ಟಪಟ್ಟು ಪಾಯಸ ತಿನ್ನುತ್ತಿದ್ದ. ಹಾಗಾಗಿ ಶಿವನಿಗೆ ಪ್ರೀತಿ ಪಾತ್ರವಾದ ಪಾಯಸವನ್ನು ಗಣೇಶನಿಗೂ ಸಮರ್ಪಿಸುವುದರಿಂದ ಆತ ಸಂಪ್ರೀತನಾಗಿ ನಿಮ್ಮ ಕೃಪೆ ತೋರುತ್ತಾನೆ.