ಶುಭ ಕಾರ್ಯಕ್ಕೆ ಹೊರಡುವ ಮುನ್ನ ಅಪ್ಪಿ- ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ‌ – ಇದು ಮೂಢನಂಬಿಕೆಯಲ್ಲ, ಈ ವರದಿ ಓದಿ..

ಶುಭ ಕಾರ್ಯಕ್ಕೆ ಹೊರಡುವ ಮುನ್ನ ಅಪ್ಪಿ- ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ‌ – ಇದು ಮೂಢನಂಬಿಕೆಯಲ್ಲ, ಈ ವರದಿ ಓದಿ..

ನ್ಯೂಸ್ ಆ್ಯರೋ : ಶುಭ ಕಾರ್ಯಗಳಿಗೆ ತೆರಳುವಾಗ ಅಥವಾ ಹೊರಗಡೆ ಹೋಗುವ ಮುನ್ನಾ ಕೆಲ ಕೆಲಸಗಳನ್ನು ಮಾಡಿದರೆ ಆ ದಿನ ಅಷ್ಟೊಂದು ಶುಭಕರವಾಗಿರುವುದಿಲ್ಲ ಎಂಬುದು ಹಿಂದೂ ಪುರಾಣದಲ್ಲಿದೆ. ಈಗಲೂ ಜನರು ಇದನ್ನು ನಂಬುತ್ತಾರೆ. ಹಾಗಾದರೆ ಜ್ಯೋತಿಷ್ಯದ ಪ್ರಕಾರ ಮನೆಯಿಂದ ಹೊರಗಡೆ ಹೋಗುವ ಸಂದರ್ಭದಲ್ಲಿ ಮಾಡಬಾರದು ಕೆಲಸಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

  1. ಉಗುರು ಅಥವಾ ಕೂದಲನ್ನು ಕತ್ತರಿಸೋದು

ಕೂದಲನ್ನು ನಾವು ಹುಟ್ಟಿದ ದಿನದಂದು ಕತ್ತರಿಸಬಾರದೆಂದು ಹೇಳಲಾಗಿದೆ. ಅದಲ್ಲದೆ ಶುಭ ಕಾರ್ಯಕ್ಕೆ ಹೊರಗಡೆ ಹೋಗುವ ದಿನದಂದು ಕೂದಲು ಅಥವಾ ಉಗುರುಗಳನ್ನು ಕತ್ತರಿಸಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಚಂದ್ರನ ಚಕ್ರವು ಉಬ್ಬರವಿಳಿತದ ಮೇಲೆ ಪ್ರಭಾವ ಬೀರುತ್ತದೆ ಮತ್ತು ನಮ್ಮ ಭಾವನಾತ್ಮಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ.

  1. ಖಾಲಿ ಕನ್ನಡಿಯನ್ನು ನೋಡುವುದು

ಮಂದ ಬೆಳಕು ಇರೋ ಕೋಣೆಯೊಳಗಡೆ ಖಾಲಿ ಕನ್ನಡಿಯನ್ನು ನೋಡಲೇಬಾರದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಅದ್ರಲ್ಲೂ ಹೊರಗಡೆ ಹೋಗುವ ಸಂದರ್ಭದಲ್ಲಿ ಈ ರೀತಿ ಮಾಡಲೇಬಾರದು ಎಂದು ಹೇಳಲಾಗುತ್ತದೆ. ಖಾಲಿ ಕನ್ನಡಿಯನ್ನು ನೋಡುವುದು ಅನಗತ್ಯ ಶಕ್ತಿಗಳು ಅಥವಾ ನಕಾರಾತ್ಮಕ ಶಕ್ತಿಗಳನ್ನು ಆಹ್ವಾನಿಸಬಹುದು. ಇದು ನಿಮ್ಮ ಶುಭ ದಿನದ ಮೇಲೆ ಪರಿಣಾಮ ಬೀರಬಹುದು.

  1. ಶನಿಯ ದಿನದಂದು ಶುಭ ಕಾರ್ಯ ಹಮ್ಮಿಕೊಳ್ಳಬಾರದು

ಶನಿಯ ದಿನದಂದು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅಶುಭವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರವು ಈ ದಿನವು ಹೊಸದನ್ನು ಪ್ರಾರಂಭಿಸುವುದಕ್ಕಿಂತ ಹೆಚ್ಚಾಗಿ ಯೋಜನೆ ಮತ್ತು ಕಾರ್ಯತಂತ್ರಕ್ಕೆ ಸೂಕ್ತವಾಗಿರುತ್ತದೆ ಎಂದು ಸೂಚಿಸುತ್ತದೆ. ಶನಿಯ ಶಕ್ತಿಯು ಹೊಸ ಪ್ರಯತ್ನಗಳ ಸುಗಮ ಪ್ರಗತಿಗೆ ಅಡ್ಡಿಯಾಗಬಹುದು ಎಂದು ನಂಬಲಾಗಿದೆ.

  1. ಮನೆ ಅಶುದ್ಧವಾಗಿದ್ದಾಗ ಹೊರ ಹೋಗುವುದು ಸೂಕ್ತವಲ್ಲ

ಮನೆಯನ್ನು ಸ್ವಚ್ಛ ಮಾಡದೆ, ಅಶುದ್ಧವಾಗಿರೋ ಸಂದರ್ಭದಲ್ಲಿ ಮನೆಯಿಂದ ಶುಭ ಕಾರ್ಯಕ್ಕೆ ಹೋಗಬಾರದು. ಮನೆ ಗಜಿ ಬಿಜಿಯಾಗಿದ್ದರೆ, ನಮ್ಮ ಮನಸ್ಥಿತಿಯೂ ಹಾಗೆಯೇ ಇರುತ್ತದೆ ಎಂಬುದು. ಚದುರಿದ ಆಲೋಚನೆಗಳು ಮತ್ತು ಗಮನದ ಕೊರತೆಗೆ ಕಾರಣವಾಗಬಹುದು ಎಂದು ಜ್ಯೋತಿಷ್ಯವು ಸೂಚಿಸುತ್ತದೆ. ಮತ್ತೊಂದೆಡೆ ಅಚ್ಚುಕಟ್ಟಾದ ಪರಿಸರವು ಸ್ಪಷ್ಟತೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

  1. ಬೆಳಗ್ಗಿನ ತಿಂಡಿ ಸೇವನೆ ಮಾಡದಿರುವುದು

ದೇಹ ಮತ್ತು ಮನಸ್ಸಿಗೆ ಪೋಷಣೆ ಮತ್ತು ಶಕ್ತಿಯನ್ನು ಒದಗಿಸುವಲ್ಲಿ ಆಹಾರ ಬೇಕೇ ಬೇಕು. ಬೆಳಗ್ಗಿನ ಉಪಹಾರವನ್ನು ನಿರ್ಲಕ್ಷಿಸುವುದರಿಂದ ಆರೋಗ್ಯದ ಸಮಸ್ಯೆಗಳು ಎದುರಾಗಬಹುದು. ಅನಾರೋಗ್ಯದಿಂದ ಆ ದಿನ ಕೈಗೊಂಡ ಕೆಲಸಗಳು ಅಷ್ಟೊಂದು ಚೆನ್ನಾಗಿ ಆಗದೇ ಇರುವ ಸಾಧ್ಯತೆಯಿದೆ.

ಈ ಎಲ್ಲ ಮೇಲ್ಕಂಡ ಕಾರ್ಯಗಳನ್ನು ನಾವು ಶುಭದಿನದಂದು ಮಾಡಬಾರದು. ಮೂಡನಂಬಿಕೆ ಎಂದೆನಿಸಿದರೂ ವೈಜ್ಞಾನಿಕವಾಗಿಯೂ ಇದಕ್ಕೆ ಕೆಲವೊಂದು ಕಾರಣಗಳಿವೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *