ಗರ್ಭ ನಿರೋಧಕ್ಕೆ ಪುರುಷರಿಗೂ ಸಿಗಲಿದೆ ಚುಚ್ಚು ಮದ್ದು – ಪತ್ನಿಯ ಮೇಲೆ ಪ್ರೀತಿ ತೋರಿಸಲು ಗಂಡಸರಿಗೆ ಬಂಪರ್ ಅವಕಾಶ

ಗರ್ಭ ನಿರೋಧಕ್ಕೆ ಪುರುಷರಿಗೂ ಸಿಗಲಿದೆ ಚುಚ್ಚು ಮದ್ದು – ಪತ್ನಿಯ ಮೇಲೆ ಪ್ರೀತಿ ತೋರಿಸಲು ಗಂಡಸರಿಗೆ ಬಂಪರ್ ಅವಕಾಶ

ನ್ಯೂಸ್ ಆ್ಯರೋ : ನಿತ್ಯದ ನೂರಾರು ಕೆಲಸ ಕಾರ್ಯಗಳ ಮಧ್ಯೆ ಗರ್ಭ ನಿರೋಧದ ವಿಚಾರದಲ್ಲಿ ಮಹಿಳೆಯರೇ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ಚಿಂತೆ ಇನ್ನಿಲ್ಲ. ಯಾಕೆಂದರೆ ಇದನ್ನು ಇನ್ನು ಪುರುಷರೂ ಮಾಡಿಕೊಳ್ಳಬಹುದು.

ಬೇಡದ ಗರ್ಭಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಶಸ್ತ್ರ ಚಿಕಿತ್ಸೆ ನಡೆಸುವುದು ಕೆಲವರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಮಹಿಳೆಯರೂ ನಿತ್ಯದ ಕೆಲಸದ ಮಧ್ಯೆ ಇದನ್ನು ನೆನಪಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ ಇನ್ನು ಈ ಚಿಂತೆ ಕೊಂಚ ಕಡಿಮೆಯಾಗುವುದು.

ಈವರೆಗೆ ಬಂದಿರುವ ಬಹುತೇಕ ಎಲ್ಲ ಗರ್ಭ ನಿರೋಧಕ ಔಷಧಗಳು ಮಹಿಳೆಯರಿಗಾಗಿ ಮಾತ್ರ ಆಗಿತ್ತು. ಆದರೆ ಇದೇ ಮೊದಲ ಬಾರಿಗೆ ಪುರುಷರಿಗೂ ಔಷಧವೊಂದನ್ನು ಕಂಡು ಹಿಡಿಯಲಾಗಿದೆ. ಇದು ಸರಿಯಾಗಿ ಬಳಕೆಯಾದರೆ ಬಹುತೇಕ ಮಹಿಳೆಯರ ಸಮಸ್ಯೆ ದೂರವಾಗುವುದು.

ಇವರಿಗೆ ಗರ್ಭ ನಿಯಂತ್ರಣ ಪ್ರಕ್ರಿಯೆಗಳನ್ನು ಮಹಿಳೆಯರಷ್ಟೇ ಮಾಡಿಕೊಳ್ಳುತ್ತಿದ್ದರು. ಇನ್ನು ಪುರುಷರಿಗೂ ಈ ಅವಕಾಶ ಸಿಗಲಿದೆ. ಮಡದಿಯರ ಬಗ್ಗೆ ಕಾಳಜಿ ವಹಿಸುವವರು ತಾವು ತಮ್ಮ ಮಡದಿಯನ್ನು ಎಷ್ಟು ಇಷ್ಟ ಪಡುತ್ತೇವೆ ಎನ್ನುವುದನ್ನು ಈ ಮೂಲಕ ಹೇಳಿಕೊಳ್ಳಬಹುದು.

ಗರ್ಭನಿಯಂತ್ರಣಕ್ಕೆ ಸಂಬಂಧಿಸಿ ಮಹಿಳೆಯರಿಗೆ ವಿವಿಧ ವೈದ್ಯಕೀಯ ಆಯ್ಕೆಗಳಿವೆ. ಇನ್ನು ಪುರುಷರೂ ಇದನ್ನು ಬಳಸಿಕೊಳ್ಳಬಹುದು. ಯಾಕೆಂದರೆ ಪುರುಷರಿಗಾಗಿಯೇ ವಿಶ್ವದ ಮೊಟ್ಟ ಮೊದಲ ಗರ್ಭನಿಯಂತ್ರಣ ಚುಚ್ಚುಮದ್ದನ್ನು ಅಭಿವೃದ್ಧಿ ಪಡಿಸಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌) ನಡೆಸಿರುವ ಹೊಸದಿಲ್ಲಿ, ಉಧಂಪುರ, ಲುಧಿಯಾನಾ, ಜೈಪುರ, ಖರಗ್‌ಪುರದಲ್ಲಿರುವ ಸಂಶೋಧನ ಕೇಂದ್ರಗಳಲ್ಲಿ ಮೂರು ಹಂತದಲ್ಲಿ ಚುಚ್ಚು ಮದ್ದನ್ನು ಪ್ರಯೋಗ ಮಾಡಿದೆ.

25 ರಿಂದ 40 ವಯಸ್ಸಿನ 303 ವಿವಾಹಿತ ಹಾಗೂ ಆರೋಗ್ಯವಂತ ಪುರುಷರು ಇದರಲ್ಲಿ ಪಾಲ್ಗೊಂಡಿದ್ದರು. ಶೇ.99ರಷ್ಟು ಗರ್ಭಧಾರಣೆಯನ್ನು ನಿಯಂತ್ರಿಸಬಹುದು ಎಂಬುದು ಇದರಿಂದ ದೃಢಪಟ್ಟಿದೆ. ಇವರೊಂದಿಗೆ ಅವರ ಪತ್ನಿಯರ ಆರೋಗ್ಯದ ಮೇಲೂ ನಿಗಾ ವಹಿಸಿದ್ದು, ಯಾವುದೇ ಅಡ್ಡ ಪರಿಣಾಮಗಳು ದಾಖಲಾಗಿಲ್ಲ.

ಗರ್ಭ ನಿರೋಧವಾಗಿ ಪುರುಷರಿಗೆ ವ್ಯಾಸಿಕ್ಟಮಿ ಶಸ್ತ್ರಚಿಕಿತ್ಸೆಯೊಂದಿಗೆ ಈಗ ಚುಚ್ಚು ಮದ್ದು ಕೂಡ ಬಂದಿರುವುದು ವೈದ್ಯಕೀಯ ಆಯ್ಕೆಯನ್ನು ಅವರಿಗೆ ಹೆಚ್ಚು ಮಾಡಿದಂತಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸದೇ ಇರುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

Related post

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ – ಚಾಮರಾಜನಗರ, ಹಾಸನ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಗೆಲುವಿನ ಖಾತೆ ತೆರೆದಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರು ಒಂದು ಲಕ್ಷಕ್ಕೂ ಅಧಿಕ…
Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? – ದಕ್ಷಿಣ ಕನ್ನಡ, ಬೆಂ.ಗ್ರಾಮಾಂತರ ಉಡುಪಿಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಎಣಿಕೆ ಕಾರ್ಯ ಇನ್ನೂ ಮುಂದುವರಿದಿದ್ದು, ಆಡಳಿತಾರೂಢ ಬಿಜೆಪಿ ಪಕ್ಷ ಸರಳ ಬಹುಮತದ ಕೊರತೆ ಎದುರಿಸುವ ಆತಂಕಕ್ಕೆ ಸಿಲುಕಿದೆ. ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು…
ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಬಸುರಿಯು ನೆಲದ ಮೇಲೆ ನಡೆದುಕೊಂಡು ಹೋಗುವಾಗ ವಿಶೇಷ ಕಾಳಜಿ ವಹಿಸಬೇಕು. ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು…

Leave a Reply

Your email address will not be published. Required fields are marked *