ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ಮಾಡಿ ಕಜ್ಜಾಯ ನೈವೇದ್ಯ ಮಾಡಿ – ಮಾಡುವ ವಿಧಾನ ಇಲ್ಲಿದೆ‌..

ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ಮಾಡಿ ಕಜ್ಜಾಯ ನೈವೇದ್ಯ ಮಾಡಿ – ಮಾಡುವ ವಿಧಾನ ಇಲ್ಲಿದೆ‌..

ನ್ಯೂಸ್ ಆ್ಯರೋ : ನಾಳೆ ವರಮಹಾಲಕ್ಷಿ ಹಬ್ಬ. ಈ ಮಂಗಳಕರ ಹಬ್ಬವನ್ನು ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ಬಾರಿಯ ವರಮಹಾಲಕ್ಷ್ಮೀ ವ್ರತವನ್ನು ಆಗಸ್ಟ್ 25 ರಂದು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯನ್ನು ಮೆಚ್ಚಿಸಲು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ.

ವಿಶೇಷವಾಗಿ ಈ ವ್ರತಾಚರಣೆಯನ್ನು ಸುಮಂಗಲಿಯರು ಆಚರಿಸುತ್ತಾರೆ. ಈ ವ್ರತಾಚರಣೆ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು ಜೊತೆಗೆ ಆ ವ್ಯಕ್ತಿಯು ಸಂಪತ್ತು, ಕೀರ್ತಿ, ಸಂತಾನ, ಸಂತೋಷದ ಅದೃಷ್ಟವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

ಈ ವಿಶೇಷ ದಿನ ಮನೆಯಲ್ಲಿ ಹಬ್ಬದ ಅಡುಗೆ ಮಾಡಿ ದೇವರಿಗೆ ನೈವೇದ್ಯ ಸಲ್ಲಿಸಬಹುದು. ದೇವರಿಗೆ ನೈವೇದ್ಯ ರೂಪದಲ್ಲಿ ಸಲ್ಲಿಸಬಹುದಾದ ಕಜ್ಜಾಯ ಪಾಕವಿಧಾನದ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

 • ಅಕ್ಕಿ – ಒಂದೂವರೆ ಕಪ್
 • ಬೆಲ್ಲ- 1 ಕಪ್
 • ತುಪ್ಪ ಅಥವಾ ಎಣ್ಣೆ- 4-5 ಚಮಚ
 • ಎಳ್ಳು- 2 ಚಮಚ
 • ಗಸಗಸೆ- 1 ಚಮಚ
 • ಏಲಕ್ಕಿ- 2 ಚಮಚ
 • ಎಣ್ಣೆ- ಕರಿಯಲು

ಮಾಡುವ ವಿಧಾನ:

 • ಅಕ್ಕಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿಡಿ.
 • ನಂತರ ನೀರು ಬಸಿದು ಅಕ್ಕಿ ತೆಗೆದು ಒಣಗಿಸಿಕೊಳ್ಳಿ.
 • ಒಣಗಿದ ಅಕ್ಕಿಯನ್ನು ಪುಡಿ ಮಾಡಿಕೊಂಡು, ಅದನ್ನು ಜಲಾರಿ ಮಾಡಿ ಗಂಟು, ಕಸವನ್ನು ತೆಗೆಯಿರಿ.
 • ಒಲೆ ಮೇಲೆ ಬಾಣಲೆ ಇಟ್ಟು ಅರ್ಧ ಕಪ್ ನೀರು ಮತ್ತು ಬೆಲ್ಲ ಹಾಕಿ.
 • ಬೆಲ್ಲ ನಜ್ಜುಗುಜ್ಜು ಮಾಡಿ ಪಾಕ ಬರುವವರೆಗೂ ಕುದಿಸಿ.
 • ಒಲೆಯ ಉರಿ ಕಡಿಮೆ ಮಾಡಿ ಪುಡಿ ಮಾಡಿದ ಅಕ್ಕಿಯನ್ನು ಹಾಕಿ.
 • ಎಳ್ಳು, ಗಸಗಸೆ, ಏಲಕ್ಕಿ ಹಾಕಿ ಮಿಕ್ಸ್ ಮಾಡಿ.
 • ಗಂಟು ಬಾರದ ರೀತಿಯಲ್ಲಿ ಸ್ಪಲ್ವ ಗಟ್ಟಿಯಾಗುವರೆಗೂ ಮಿಕ್ಸ್ ಮಾಡಿ, ಒಲೆಯಿಂದ ಕೆಳಗಿಳಿಸಿ.
 • ನಂತರ ಬೇರೆ ಬಾಣಲಿಗೆ ಎಣ್ಣೆ ಹಾಕಿ ಕಾಯಲು ಇಡಿ.
 • ಸಿದ್ದ ಮಾಡಿದ ಹಿಟ್ಟನ್ನು ಸ್ವಲ್ಪ ತೆಗೆದು ಒಂದು ಪ್ಲೇಟ್‍ನಲ್ಲಿ ಸಣ್ಣದಾಗಿ ಒಬ್ಬಟ್ಟಿನ ರೀತಿಯಲ್ಲಿ ತಟ್ಟಿಕೊಳ್ಳಿ.
 • ನಂತರ ಅದನ್ನು ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಿರಿ.

Related post

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ – ಚಾಮರಾಜನಗರ, ಹಾಸನ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಗೆಲುವಿನ ಖಾತೆ ತೆರೆದಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರು ಒಂದು ಲಕ್ಷಕ್ಕೂ ಅಧಿಕ…
Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? – ದಕ್ಷಿಣ ಕನ್ನಡ, ಬೆಂ.ಗ್ರಾಮಾಂತರ ಉಡುಪಿಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಎಣಿಕೆ ಕಾರ್ಯ ಇನ್ನೂ ಮುಂದುವರಿದಿದ್ದು, ಆಡಳಿತಾರೂಢ ಬಿಜೆಪಿ ಪಕ್ಷ ಸರಳ ಬಹುಮತದ ಕೊರತೆ ಎದುರಿಸುವ ಆತಂಕಕ್ಕೆ ಸಿಲುಕಿದೆ. ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು…
ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಬಸುರಿಯು ನೆಲದ ಮೇಲೆ ನಡೆದುಕೊಂಡು ಹೋಗುವಾಗ ವಿಶೇಷ ಕಾಳಜಿ ವಹಿಸಬೇಕು. ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು…

Leave a Reply

Your email address will not be published. Required fields are marked *