Gobi Manchurian Recipe : ಬಾಯಲ್ಲಿ ನೀರೂರಿಸುವ ಈ ಖಾದ್ಯ ಮನೆಯಲ್ಲೇ ಮಾಡಿ – ಸಿಂಪಲ್ ವಿಧಾನ ಇಲ್ಲಿದೆ ನೋಡಿ..

Gobi Manchurian Recipe : ಬಾಯಲ್ಲಿ ನೀರೂರಿಸುವ ಈ ಖಾದ್ಯ ಮನೆಯಲ್ಲೇ ಮಾಡಿ – ಸಿಂಪಲ್ ವಿಧಾನ ಇಲ್ಲಿದೆ ನೋಡಿ..

ನ್ಯೂಸ್ ಆ್ಯರೋ : ಹಿರಿಯರಿಂದ ಹಿಡಿದು ಸಣ್ಣ ಮಕ್ಕಳವರೆಗೂ‌ ಎಲ್ಲರಿಗೂ ಇಷ್ಟವಾಗುವ ಗೋಬಿ ಮಂಚೂರಿಯ ಟೇಸ್ಟ್ ಒಂಥರಾ ಡಿಫರೆಂಟ್.‌ ಮಾಂಸಾಹಾರಿಗಳೂ ಕೂಡ ಗೋಬಿ ಮಂಚೂರಿ ಅಂದ್ರೆ ಬಾಯಗಲಿಸಿ ತಿಂದೇ ತಿಂತಾರೆ. ಇಂತಹ ಗೋಬಿ ಮಂಚೂರಿ ರಸ್ತೆ ಬದಿಯಲ್ಲೋ ಹೋಟೆಲ್ ನಲ್ಲೋ ತಿನ್ನುವ ಬದಲು ಮನೆಯಲ್ಲೇ ಮಾಡಿಕೊಂಡು ತಿಂದ್ರೆ ಇನ್ನೂ ಒಳ್ಳೆಯದು. ಹಾಗಾದ್ರೆ ಇನ್ಯಾಕೆ ತಡ ಮನೆಯಲ್ಲೇ ಗೋಬಿ ಮಂಚೂರಿ ಮಾಡೋ ವಿಧಾನ ನಾವು ಹೇಳಿಕೊಡ್ತೇವೆ..

ಗೋಬಿ ಮಂಚೂರಿ ತಯಾರಿಸಲು ಏನೆಲ್ಲಾ ಬೇಕು?

ಸ್ವಚ್ಛಗೊಳಿಸಿದ ಒಂದು ಬೌಲ್ ಗೋಬಿ, ಅರ್ಧ ಬೌಲ್ ಕಾನ್ ಪ್ಲೋರ್, 8-10 ಬಿಡಿಸಿದ ಬೆಳ್ಳುಳ್ಳಿ, ಕಾಲು ಕಪ್ ಹೆಚ್ಚಿದ ಈರುಳ್ಳಿ, ಚಿಕ್ಕದಾಗಿ ಹೆಚ್ಚಿದ ಶುಂಠಿಯ ತುಣುಕು 5-6, 4-5 ಹೆಚ್ಚಿದ ಹಸಿಮೆಣಸಿನ ಕಾಯಿ, ಅರ್ಧ ಕಪ್ ಹೆಚ್ಚಿದ ದೊಣ್ಣೆ ಮೆಣಸಿನ ಕಾಯಿ, 4-5 ಸ್ಪೂನ್ ಟೊಮೆಟೋ ಸಾಸ್, 2-3 ಸ್ಪೂನ್ ಚಿಲ್ಲಿ ಸಾಸ್, 2 ಸ್ಪೂನ್ ಸೋಯಾ ಸಾಸ್. ಕರಿಯಲು ಅಗತ್ಯವಿರುವಷ್ಟು ಎಣ್ಣೆ. ರುಚಿಗೆ ತಕ್ಕಷ್ಟು ಉಪ್ಪು, ಗೋಬಿ ಅಲಂಕರಿಸಲು ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ

ಮೊದಲಿಗೆ ಸ್ವಚ್ಛಗೊಳಿಸಿದ ಗೋಬಿ ಪೀಸ್ ಗಳನ್ನು ಬಿಸಿ ನೀರಿಗೆ ಹಾಕಿ 10 ನಿಮಿಷ ಮಂದ ಉರಿಯಲ್ಲಿ ಬೇಯಿಸಿ, ಆರಿಸಿಕೊಳ್ಳಿ. ಬೌಲ್ಗೆ ಕಾರ್ನ್ ಪ್ಲೋರ್ ಹಾಕಿ, ಅಗತ್ಯವಿರುವಷ್ಟು ಉಪ್ಪು ಹಾಕಿ, ತೆಳುವಾಗಿ ಕಲೆಸಿಕೊಳ್ಳಿ. ಬಳಿಕ ಈ ಮಿಶ್ರಣಕ್ಕೆ ಗೋಬಿ ಪೀಸ್ ಗಳನ್ನು ಹಾಕಿ ಕಲೆಸಿ, ಎಣ್ಣೆಯಲ್ಲಿ ಕರಿದು ಎತ್ತಿಡಿ.

ಬಳಿಕ ಒಂದು ಅಗಲವಾದ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದೊಡನೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಈರುಳ್ಳಿ, ದೊಣ್ಣೆ ಮೆಣಸು ಒಂದೊಂದಾಗಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಈರುಳ್ಳಿಯನ್ನು ಎಣ್ಣೆಯಲ್ಲಿ ಹುರಿದ ಬಳಿಕ ಇದಕ್ಕೆ ಕರಿದ ಗೋಬಿ ಸೇರಿಸಿ ಹುರಿಯಿರಿ.

ಹುರಿಯುವಾಗ ಟೊಮೆಟೋ ಸಾಸ್, ಚಿಲ್ಲಿ ಸಾಸ್ಸೇರಿಸಿ, ಕೊನೆಯಲ್ಲಿ ಸೋಯಾ ಸಾಸ್ ಬೆರೆಸಿ, ಚೆನ್ನಾಗಿ ಹುರಿದು ಕೆಳಗಿಳಿಸಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ಸವಿಯಲು ಕೊಡಿ. ಇದಕ್ಕೆ ಯಾವುದೇ ಬಣ್ಣ ಸೇರಿಸದೇ ಮನೆಯಲ್ಲೇ ತಯಾರಿಸಿರೋದರಿಂದ ಯಾವುದೇ ಅನಾರೋಗ್ಯದ ಭಯವಿಲ್ಲ. ಹಾಗಾಗಿ ಎಂಜಾಯ್ ಮಾಡ್ತಾ ತಿನ್ನಿ..!

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *