ಮರೆಯಾದ ಭಾರತದ ರತ್ನ ರತನ್‌ ಟಾಟಾ; ಮಹಾರಾಷ್ಟ್ರ ವಿವಿಯಿಂದ ಸಿಕ್ಕಿತ್ತು ಹೀಗೊಂದು ಗೌರವ

Tata
Spread the love

ನ್ಯೂಸ್ ಆ್ಯರೋ: ಮಹಾರಾಷ್ಟ್ರ ಕೌಶಲ್ಯ ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸಲು ಮಹಾರಾಷ್ಟ್ರ ಸಚಿವ ಸಂಪುಟ ನಿರ್ಧರಿಸಿದೆ. ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯದ ಹೆಸರನ್ನು “ಪದ್ಮ ವಿಭೂಷಣ ರತನ್ ಟಾಟಾ ಕೌಶಲ್ಯ ವಿಶ್ವವಿದ್ಯಾಲಯ” ಎಂದು ಬದಲಾಯಿಸಲಾಗುತ್ತಿದೆ. ಕೌಶಲ್ಯಾಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಈ ಮಾಹಿತಿ ನೀಡಿದ್ದಾರೆ.

ರತನ್ ಟಾಟಾ ಅವರನ್ನು ಗೌರವಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮಹಾರಾಷ್ಟ್ರ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯವನ್ನು ಇನ್ನು ರತನ್ ಟಾಟಾ ವಿಶ್ವವಿದ್ಯಾಲಯ ಎಂದು ಕರೆಯಲಾಗುತ್ತದೆ. ಅಕ್ಟೋಬರ್ 9ರಂದು ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ ಹೊಂದಿದ್ದಾರೆ. ರತನ್ ಟಾಟಾ ಅವರು ತಮ್ಮ ಇಡೀ ಜೀವನವನ್ನು ಸುಧಾರಿಸಲು ಮತ್ತು ಭಾರತಕ್ಕೆ ಹೊಸ ಗುರುತನ್ನು ನೀಡಲು ಮುಡಿಪಾಗಿಟ್ಟಿದ್ದರು.

ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಅವರ ಮಹತ್ವದ ಪಾತ್ರವನ್ನು ಗುರುತಿಸಿ ಕೈಗಾರಿಕೋದ್ಯಮಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಸ್ತಾಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ನೀತಿ ಸಂಹಿತೆ ಯಾವಾಗ ಬೇಕಾದರೂ ಜಾರಿಗೆ ಬರಬಹುದು.

ಖ್ಯಾತ ಉದ್ಯಮಿ, ಟಾಟಾ ಸನ್ಸ್‌ ಗೌರವಾಧ್ಯಕ್ಷ ಹಾಗೂ ಕೊಡುಗೈ ದಾನಿ ರತನ್‌ ಟಾಟಾ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ರತನ್‌ ಟಾಟಾ ಅವರು 1991ರಲ್ಲಿ ತಮ್ಮ ಮುತ್ತಜ್ಜ ಜಮ್ಶೆಡ್‌ಜೀ ಟಾಟಾ ಸ್ಥಾಪಿಸಿದ್ದ ಟಾಟಾ ಗ್ರೂಪ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಸುಮಾರು 100 ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆಯನ್ನು ಅವರು 2012ರವರೆಗೆ ಸಮರ್ಥವಾಗಿ ಮುನ್ನಡೆಸಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!