Ram Setu : ಆಕಾಶದ ಮೇಲೆ ನಿಂತು ನೋಡಿದ್ರೆ ರಾಮ‌ ಸೇತು ಹೇಗೆ ಕಾಣುತ್ತೆ? – ಯುರೋಪಿಯನ್ ಸ್ಪೇಸ್ ಏಜೆನ್ಸಿ ಬಿಡುಗಡೆ ಮಾಡಿರೋ ಚಿತ್ರಗಳು ಹೀಗಿವೆ ನೋಡಿ..

20240625 080634
Spread the love

ನ್ಯೂಸ್ ಆ್ಯರೋ : ಜಗತ್ತಿನ ಅಗ್ರಮಾನ್ಯ ಬಾಹ್ಯಾಕಾಶ ಸಂಸ್ಥೆಗಳ ಪೈಕಿ ಒಂದಾದ ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA-European Space Agency) ಭಾರತ ಮತ್ತು ಶ್ರೀಲಂಕಾದ ನಡುವೆ ರಾಮಯಾಣ ಕಾಲದಲ್ಲಿ ಶ್ರೀರಾಮಚಂದ್ರ ನಿರ್ಮಿಸಿದ್ದ ರಾಮ ಸೇತುವೆಯ ಫೋಟೋವನ್ನು ಬಿಡುಗಡೆಗೊಳಿಸಿದ್ದು, ಅಂತರಿಕ್ಷದಿಂದ ರಾಮಸೇತುವೆ (Ram Setu) ಹೇಗೆ ಕಾಣುತ್ತದೆ ಎಂಬುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ.

ರಾಮಸೇತುವೆ ಭಾರತದ ಆಗ್ನೇಯ ಭಾಗ ರಾಮೇಶ್ವರಂನಿಂದ ಶ್ರೀಲಂಕಾದ ಮನ್ನಾರ್ ದ್ವೀಪದವರೆಗೆ ಅಂದ್ರೆ ಬರೋಬ್ಬರಿ 48 ಕಿಲೀ ಮೀಟರ್‌ ಉದ್ದವಿದೆ. ಇದು ದಕ್ಷಿಣದಲ್ಲಿ ಮನ್ನಾರ್ ಕೊಲ್ಲಿಯನ್ನು ಉತ್ತರದ ಪಾಕ್ ಜಲಸಂಧಿಯಿಂದ ಪ್ರತ್ಯೇಕಿಸುತ್ತದೆ. ಮನ್ನಾರ್ ಕೊಲ್ಲಿಯನ್ನು ಹಿಂದೂ ಮಹಾಸಾಗರದ ಹೆಬ್ಬಾಗಿಲು ಅಂತಾ ಪಾಕ್ ಜಲಸಂಧಿ ಬಂಗಾಳದ ಗೇಟ್‌ ವೇ ಆಗಿದೆ.

ರಾಮಸೇತುವೆ ನಿಜಕ್ಕೂ ಮಾನವ ನಿರ್ಮಿತವಾಗಿದ್ದಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀರಾಮಚಂದ್ರರು ಸೀತೆಯನ್ನು ಹುಡುಕುತ್ತಾ ರಾವಣನ ವಾಸಸ್ಥಾನವಾದ ಲಂಕೆಗೆ ಹೊರಟಿದ್ದರು. ಈ ವೇಳೆ ಮಾರ್ಗಮಧ್ಯೆ ಸಮುದ್ರ ಬಂದಿದ್ದರಿಂದ ಸೇತುವೆ ನಿರ್ಮಿಸಲಾಯ್ತು ಎಂದು ಹೇಳಲಾಗುತ್ತದೆ. ಸೇತುವೆ ನಿರ್ಮಿಸಿದ ಜಾಗದಲ್ಲಿ ಸುಣ್ಣದ ಕಲ್ಲುಗಳು ಕಾಣಲು ಸಿಗುತ್ತವೆ. ಇದು ತೇಲುವೆ ಸೇತುವೆ ಆಗಿತ್ತು ಎಂದು ಧಾರ್ಮಿಕ ಗ್ರಂಥಗಳಿಂದ ಗೊತ್ತಾಗುತ್ತದೆ.

ರಾಮ ಸೇತುವೆಯನ್ನು ಆಡಂ ಬ್ರಿಜ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. 15ನೇ ಶತಮಾನದವರೆಗೂ ಜನರು ರಾಮಸೇತುವೆಯನ್ನು ಬಳಕೆ ಮಾಡುತ್ತಿದ್ದರು. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಇದೊಂದು ನಿಸರ್ಗ ನಿರ್ಮಿತ ಸೇತುವೆಯಾಗಿತ್ತು ಎಂದು ಹೇಳಿದೆ. 15ನೇ ಶತಮಾನದ ಬಳಿಕ ಕಾಲಕ್ರಮೇಣ ಬಿರುಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿ ರಾಮಸೇತುವೆ ನಾಶವಾಯ್ತು. ಸೇತುವೆ ಇತ್ತು ಎಂಬುದಕ್ಕೆ ಮರಳಿನ ದಿಬ್ಬದ ಕುರುಹುಗಳಿವೆ. ಕೆಲವು ಭಾಗದಲ್ಲಿ ಸಮುದ್ರದಾಳ ಕೇವಲ 1 ರಿಂದ 10 ಮೀಟರ್ ಇತ್ತು ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳುತ್ತದೆ.

ಪುರಾಣ ಈ ರಾಮ ಸೇತು ಬಗ್ಗೆ ಹೇಳೋದೇನು?
ಶ್ರೀ ರಾಮನು ತನ್ನ ಸೈನ್ಯದೊಂದಿಗೆ ಲಂಕೆಯನ್ನು ಆಕ್ರಮಿಸಲು ಧನುಷ್ಕೋಡಿಯಿಂದ ಶ್ರೀಲಂಕಾಕ್ಕೆ ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸಿದನು. ಈ ಸೇತುವೆಯನ್ನು ನಲ್ ನ ಸಾರಥ್ಯದಲ್ಲಿ 5 ದಿನಗಳಲ್ಲಿ ವಾನರ ಸೈನ್ಯ ನಿರ್ಮಿಸಿತು. ವಾಲ್ಮೀಕಿಯ ರಾಮಾಯಣದಲ್ಲಿ, ಈ ಸೇತುವೆಯ ಉದ್ದ 100 ಯೋಜನಗಳು ಮತ್ತು ಅಗಲವು 10 ಯೋಜನಗಳು ಎನ್ನಲಾಗಿದೆ.

ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ (NASA) 1993 ರಲ್ಲಿ ಶ್ರೀಲಂಕಾದ ವಾಯುವ್ಯದಲ್ಲಿ ಧನುಷ್ಕೋಡಿ ಮತ್ತು ಪಂಬನ್ ನಡುವೆ ಸಮುದ್ರವಾಗಿ ಹೊರಹೊಮ್ಮಿದ 48 ಕಿ.ಮೀ ಅಗಲದ ಭೂಮಿಯ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿತು. ಇದರ ನಂತರ, ಭಾರತದಲ್ಲಿ ರಾಜಕೀಯ ವಿಪ್ಲವ ಪ್ರಾರಂಭವಾಯಿತು. ಸೇತುವೆಯಂತಹ ಈ ಭೂಪ್ರದೇಶವನ್ನು ರಾಮ ಸೇತು ಎಂದು ಕರೆಯಲಾಯಿತು.

Leave a Comment

Leave a Reply

Your email address will not be published. Required fields are marked *

error: Content is protected !!