ಉಡುಪಿ : ಮತ್ತೊಮ್ಮೆ ಮಾನವೀಯತೆ ಮೆರೆದ ಕರಾವಳಿಯ ಖಾಸಗಿ ಬಸ್ ನ ಚಾಲಕ-ನಿರ್ವಾಹಕರು – ಬಸ್ ನಲ್ಲಿ ಅಸ್ವಸ್ಥಗೊಂಡ ಯುವತಿಗಾಗಿ ಟ್ರಿಪ್ ಮೊಟಕುಗೊಳಿಸಿ ಆಸ್ಪತ್ರೆ ದಾರಿ ಹಿಡಿದ ಬಸ್..!!

Spread the love

ನ್ಯೂಸ್ ಆ್ಯರೋ ‌: ಮತ್ತೊಮ್ಮೆ ಕರಾವಳಿಯ ಖಾಸಗಿ ಬಸ್ ನ ಚಾಲಕ – ನಿರ್ವಾಹಕರು ಮಾನವೀಯತೆ ಮೆರೆದ ಘಟನೆ ನಡೆದಿದ್ದು ಅಸ್ವಸ್ಥಗೊಂಡ ಯುವತಿಗಾಗಿ ಬಸ್ ಅನ್ನೇ ಆಸ್ಪತ್ರೆಗೆ ಕೊಂಡೊಯ್ದು ಯುವತಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಉಡುಪಿ ನಗರದಲ್ಲಿ ಇಂದು ಮುಂಜಾನೆ ಘಟನೆ ನಡೆದಿದ್ದು, ನವೀನ್ ಬಸ್ ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

ಶಿರ್ವದಿಂದ ಮಂಚಕಲ್ ಮಾರ್ಗವಾಗಿ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್ ನಲ್ಲಿ ಉಡುಪಿಯ ಹಳೆ ತಾಲ್ಲೂಕು ಕಚೇರಿಗೆ ಬರುವಾಗ ಯುವತಿ ಅಸ್ವಸ್ಥಳಾಗಿದ್ದು, ಬಸ್ ನಲ್ಲೇ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು.

ತಕ್ಷಣವೇ ಹತ್ತಿರದ ಡಾಕ್ಟರ್ ಟಿಎಂಎ ಪೈ ಆಸ್ಪತ್ರೆಗೆ ‌ಬಸ್ ಅನ್ನು ಚಾಲಕ ಕೊಂಡೊಯ್ದಿದ್ದು, ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬಸ್ ಚಾಲನೆ ಮಾಡಿದ್ದಾರೆ.

ತಕ್ಷಣವೇ ಅಸ್ವಸ್ಥ ಯುವತಿಗೆ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಯುವತಿಯ ಮನೆಯವರಿಗೆ ಮಾಹಿತಿ ನೀಡಿ ಮನೆಯವರು ಬರುವ ತನಕ ಯುವತಿಗೆ ಚಿಕಿತ್ಸೆಗೆ ಬಸ್ ಸಿಬ್ಬಂದಿ ಸಹಕಾರ ನೀಡಿದ್ದಾರೆ‌.

ಬಸ್ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಖಾಸಗಿ ಬಸ್ ಗಳನ್ನು ದೂರುವವರಿಗೆ ಖಾಸಗಿ ಬಸ್ ಗಳ ಸಿಬ್ಬಂದಿಗಳ ಮನಸ್ಸು, ಕಷ್ಟ ಅರಿಯುವ ಮಾನವೀಯತೆ ಬರಲೆಂಬ ಆಶಯ ವ್ಯಕ್ತವಾಗುತ್ತಿದೆ.

Leave a Comment

Leave a Reply

Your email address will not be published. Required fields are marked *