
ಪ್ರತಿಭಾನ್ವಿತ ಕರಾಟೆ ವಿದ್ಯಾರ್ಥಿಗೆ 60 ಸಾವಿರ ಬೆಲೆಯ ವಿಮಾನದ ಟಿಕೆಟ್ – ಮೆಚ್ಚುಗೆಗೆ ಪಾತ್ರವಾದ ಸಚಿವ ಜಮೀರ್ ಅಹ್ಮದ್ ಖಾನ್ ನಡೆ
- ರಾಜಕೀಯ
- August 24, 2023
- No Comment
- 76
ನ್ಯೂಸ್ ಆ್ಯರೋ : ಪ್ರತಿಭಾನ್ವಿತ ವಿದ್ಯಾರ್ಥಿಯೋರ್ವನಿಗೆ ನೆರವಾಗುವ ಮೂಲಕ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಮಾದರಿಯಾಗಿದ್ದಾರೆ.
ವಿಮಾನ ಟಿಕೆಟ್ ಬುಕ್
ಜಮೀರ್ ಬುಧವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು. ಈ ವೇಳೆ ಹೆಬ್ಬಾಳದ ಕ್ರೆಸೆಂಟ್ ಇಂಗ್ಲಿಷ್ ಮೀಡಿಯಂ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಅಮೀರ್ ಗೆ ಇಂಡೋನೇಷ್ಯಾಕ್ಕೆ ತೆರಳಲಿರುವ ವಿಮಾನ ಟಿಕೆಟ್ ಮಾಡಿಸಿ ಕೊಟ್ಟಿದ್ದಾರೆ.
ಸೆ. 19ರಿಂದ 24ರ ವರೆಗೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಸ್ ಸ್ಪರ್ಧೆಗೆ ಮೊಹಮ್ಮದ್ ತಾಹೀರ್ ಆಯ್ಕೆಯಾಗಿದ್ದ. ಆದರೆ ಆರ್ಥಿಕ ಸಂಕಷ್ಟದಿಂದಾಗಿ ಅಲ್ಲಿಗೆ ತೆರಳಲು ಸಾಧ್ಯವಾಗದಿರುವ ಕುರಿತು ಆತನ ಕುಟುಂಬ ಜಮೀರ್ ಬಳಿ ಅಳಲು ತೋಡಿಕೊಂಡಿತ್ತು.
ಕೂಡಲೇ ಜಮೀರ್ ವೈಯಕ್ತಿಕ ವೆಚ್ಚದಲ್ಲಿ ಸ್ಪರ್ಧೆಗೆ ಹೋಗಿ ಬರುವ 60 ಸಾವಿರ ರೂ. ಮೌಲ್ಯದ ವಿಮಾನ ಟಿಕೆಟ್ ಮಾಡಿಸಿ ಶುಭ ಹಾರೈಸಿದರು. ಸಚಿವರು ಸಮಸ್ಯೆ ಆಲಿಸಿ ತಕ್ಷಣ ಸಹಾಯ ಮಾಡಿರುವ ಕುರಿತು ಮೊಹಮ್ಮದ್ ತಾಹೀರ್ ಕುಟುಂಬ ಸಂತಸ ವ್ಯಕ್ತಪಡಿಸಿದೆ.