
ತೆಲಂಗಾಣ ರಾಜ್ಯಪಾಲ ಆಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್? – ಸಿಎಂ ಯೋಗಿ ಭೇಟಿ ಬೆನ್ನಲ್ಲೇ ಈ ಸುದ್ದಿ ಸೌಂಡ್ ಮಾಡಿದ್ದೇಕೆ?
- ರಾಜಕೀಯ
- September 6, 2023
- No Comment
- 66
ನ್ಯೂಸ್ ಆ್ಯರೋ : ಈಚೆಗೆ ನಟ ರಜನಿಕಾಂತ್ ಅವರು ಸಿಎಂ ಆದಿತ್ಯನಾಥ್ ಯೋಗಿ, ಜಾರ್ಖಂಡ್ ಗವರ್ನರ್ ಸಿ.ಪಿ ರಾಧಾಕೃಷ್ಣ ಅವರನ್ನು ಭೇಟಿಯಾದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಲೈವಾಗೆ ತೆಲಂಗಾಣದ ರಾಜ್ಯಪಾಲರ ಹುದ್ದೆಯನ್ನು ನೀಡಲು ಮುಂದಾಗಿದೆ ಎನ್ನುವ ಸುದ್ದಿ ಭಾರೀ ವೈರಲ್ ಆಗಿದೆ.
ನಟ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದ್ದು, ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನೂ ಈ ಸಿನಿಮಾ ಬಿಡುಗಡೆಗೂ ಮುನ್ನಾ ಹಿಮಾಲಯಕ್ಕೆ ಪ್ರವಾಸ ಕೈಗೊಂಡ ರಜನಿಕಾಂತ್ ಅವರು ಸಿಎಂ ಯೋಗಿ ಸೇರಿದಂತೆ ಆನೇಕ ರಾಜಕೀಯ ಗಣ್ಯರನ್ನು ಭೇಟಿಯಾಗಿದ್ದರು. ಈ ಸುದ್ದಿ ರಾಜಕೀಯದಲ್ಲಿ ಭಾರೀ ಚರ್ಚೆಯಾಗಿತ್ತು.
ಇದರ ಬೆನ್ನಲ್ಲೇ ಬಿಜೆಪಿಯು ರಜನಿಕಾಂತ್ ಅವರನ್ನು ಗವರ್ನರ್ ಆಗಿ ನೇಮಕ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ರಜನಿಕಾಂತ್ರನ್ನು ರಾಜ್ಯಪಾಲರನ್ನಾಗಿ ಮಾಡಿದ್ರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಇನ್ನಷ್ಟು ಆಳವಾಗಿ ಬೇರೂರಬಹುದು ಎಂಬ ಲೆಕ್ಕಾಚಾರದಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ರಾಜಕಾರಣಕ್ಕೆ ಧುಮುಕುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದರು. ಆದರೆ ಆರೋಗ್ಯದ ನೆಪವೊಡ್ಡಿ ಹಿಂದೆ ಸರಿದಿದ್ದರು. ಇದೀಗ ರಾಜಕೀಯ ನಾಯಕರನ್ನು ಭೇಟಿಯಾದ ಬೆನ್ನಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆ ಶುರುವಾಗಿದೆ. ಈ ಬಗ್ಗೆ ಯಾರೂ ಅಧಿಕೃತವಾಗಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಸದ್ಯ ತೆಲಂಗಾಣದ ಗವರ್ನರ್ ತಮಿಳಿಸೈ ಸೌಂದರರಾಜನ್ ಹಾಗೂ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಇದು ಅಲ್ಲಿನ ರಾಜಕೀಯ ಬಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಬಿಜೆಪಿ ರಜನಿಕಾಂತ್ರನ್ನು ಗವರ್ನರ್ ಮಾಡುವ ಯೋಚನೆಯಲ್ಲಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ.