
ಆಡಳಿತ ವಹಿಸಿಕೊಂಡ 9 ವರ್ಷಗಳಲ್ಲಿ ಒಂದೂ ರಜೆ ತೆಗೆಯದ ಪ್ರಧಾನಿ – ಮೋದಿ ಕರ್ತವ್ಯ ನಿಷ್ಠೆಗೆ ಭಾರೀ ಮೆಚ್ಚುಗೆ
- ರಾಜಕೀಯ
- September 6, 2023
- No Comment
- 42
ನ್ಯೂಸ್ ಆ್ಯರೋ : ಪ್ರತೀ ಉದ್ಯೋಗ ಕ್ಷೇತ್ರದಲ್ಲಿ ರಜೆ ಎಂದಿರುತ್ತದೆ. ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಇಂತಿಷ್ಟು ರಜೆ ಅಂತಿರುತ್ತದೆ. ಸತತ ಕೆಲಸದಿಂದ ಬಳಲುತ್ತಿರುವ ಮನಸ್ಸಿಗೆ ರಜೆಯ ಅಗತ್ಯವೂ ಇರುತ್ತದೆ. ಆದರೆ ಒಂದೆರಡು ತಿಂಗಳಲ್ಲ, ಬರೋಬ್ಬರಿ 9 ವರ್ಷ ರಜೆ ತೆಗೆದುಕೊಳ್ಳದೇ ನಿರಂತರ ಕೆಲಸ ಮಾಡುವ ಬಗ್ಗೆ ಊಹಿಸಿಕೊಳ್ಳಲು ಸಾಧ್ಯವೇ? ಅಂತಹ ಅಪರೂಪದ ಕಾರ್ಯದ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗಮನ ಸೆಳೆದಿದ್ದಾರೆ.
ರಜೆ ಇಲ್ಲ
ಎರಡು ಅವಧಿಗೆ ಪ್ರಧಾನಿಯಾಗಿರುವ ಮೋದಿ ಅಧಿಕಾರ ವಹಿಸಿಕೊಂಡ ನಂತರ 9 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎನ್ನುವ ವಿಚಾರ ಬಹಿರಂಗಗೊಂಡಿದೆ.
ಮೋದಿ 2014ರಲ್ಲಿ ಪ್ರಧಾನಿ ಗಾದಿಗೆ ಏರಿದ್ದರು. ಬಳಿಕ ಒಂದು ರಜೆಯನ್ನೂ ಪಡೆದಿಲ್ಲ ಎಂದು ಮಾಹಿತಿ ಹಕ್ಕು ಅಧಿನಿಯಮ (ಆರ್.ಟಿ.ಐ.) ತಿಳಿಸಿದೆ. ಪ್ರಫುಲ್ ಎಸ್. ಸರ್ದಾ ಎನ್ನುವವರು ಪ್ರಧಾನ ಮಂತ್ರಿ ಕಚೇರಿಗೆ ಆರ್.ಟಿ.ಐ. ಮೂಲಕ ಈ ಬಗ್ಗೆ ಪ್ರಶ್ನೆ ಕೇಳಿದ್ದರು.
ಜೊತೆಗೆ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ದೇಶ ವಿದೇಶಗಳ 3,000ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿದೆ. ಸದ್ಯ ಮೋದಿ ರಜೆ ತೆಗೆದುಕೊಳ್ಳದಿರುವ ಮಾಹಿತಿಯನ್ನೊಳಗೊಂಡ ಆರ್.ಟಿ.ಐ. ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೋದಿ ನಡೆಯನ್ನು ಹಲವರು ಪ್ರಶಂಸಿಸಿದ್ದಾರೆ.