X ನಲ್ಲಿ 100 ಮಿಲಿಯನ್ ಫಾಲೋವರ್ಸ್ ಪಡೆದ ಪ್ರಧಾನಿ ಮೋದಿ – ಅತ್ಯಧಿಕ ಫಾಲೋವರ್ಸ್ ಪಡೆದು ಜಾಗತಿಕ ನಾಯಕನಾದ “ನಮೋ”
ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ 100 ಮಿಲಿಯನ್ ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಗತಿಕ ನಾಯಕ ಎಂಬ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ (38.1 ಮಿಲಿಯನ್ ಫಾಲೋವರ್ಸ್), ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ (11.2 ಮಿಲಿಯನ್ ಫಾಲೋವರ್ಸ್) ಮತ್ತು ಪೋಪ್ ಫ್ರಾನ್ಸಿಸ್ (18.5 ಮಿಲಿಯನ್ ಫಾಲೋವರ್ಸ್) ಅವರಿಗಿಂತ ಪ್ರಧಾನಿ ಮೋದಿ ಬಹಳ ಮುಂದಿದ್ದಾರೆ.
ಭಾರತದಲ್ಲಿ ಪ್ರಧಾನಿ ಮೋದಿ ಇತರ ಭಾರತೀಯ ರಾಜಕಾರಣಿಗಳಿಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 26.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 27.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (19.9 ಮಿಲಿಯನ್), ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (7.4 ಮಿಲಿಯನ್), ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ (2.9 ಮಿಲಿಯನ್) ಅವರಿಗಿಂತ ಪ್ರಧಾನಿ ಮೋದಿ ಭಾರೀ ಅಂತರದಲ್ಲಿ ಮುಂದಿದ್ದಾರೆ.
Leave a Comment