ವಿಮಾನ-ಹೆಲಿಕಾಪ್ಟರ್ ಆಕಾಶದಲ್ಲೇ ಡಿಕ್ಕಿ; ನದಿಯಲ್ಲಿ 19 ಪ್ರಯಾಣಿಕರ ದೇಹ ಪತ್ತೆ
ನ್ಯೂಸ್ ಆ್ಯರೋ: ವಾಷಿಂಗ್ಟನ್ನ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 60 ಪ್ರಯಾಣಿಕರಿದ್ದ ವಿಮಾನವು ಲ್ಯಾಂಡ್ ಆಗುವಾಗ ಆಕಾಶದಲ್ಲೇ ಮಿಲಿಟರಿ ಹೆಲಿಕಾಪ್ಟರ್ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ 19 ಪ್ರಯಾಣಿಕರು ಹಸುನೀಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ಲ್ಯಾಂಡಿಂಗ್ ಸಮಯದಲ್ಲಿ ಪಿಎಸ್‌ಎ ಏರ್‌ಲೈನ್ಸ್‌ನ ಪ್ರಯಾಣಿಕರಿದ್ದ ವಿಮಾನವು, ಅಮೆರಿಕದ ಸೇನಾ ಹೆಲಿಕಾಪ್ಟರ್ ಆರ್ಮಿ ಬ್ಲ್ಯಾಕ್ಹಾಕ್ (H-60)ಗೆ ಆಕಾಶದಲ್ಲಿ ಭಯಾನಕವಾಗಿ ಡಿಕ್ಕಿ ಹೊಡೆದು ಪೊಟೊಮ್ಯಾಕ್ ನದಿಗೆ ಬಿದ್ದಿದೆ. ಡಿಕ್ಕಿ ಹೊಡೆದಾಗ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಾಗೇ ಆಕಾಶದಿಂದ ವಿಮಾನವು ಪೊಟೊಮ್ಯಾಕ್ ನದಿಗೆ ಬಿದ್ದಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ವಿಮಾನದಲ್ಲಿ 78 ಆಸನಗಳು ಇದ್ದು ಇದರಲ್ಲಿ 60 ಆಸನಗಳು ಭರ್ತಿಯಾಗಿದ್ದವು. ಇನ್ನುಳಿದಂತೆ 4 ಜನ ವಿಮಾನ ಸಿಬ್ಬಂದಿ ಇದ್ದರು. ಇನ್ನು ಮಿಲಿಟರಿ ಹೆಲಿಕಾಪ್ಟರ್ನಲ್ಲಿ 3 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ ಒಟ್ಟು 67 ಪ್ರಯಾಣಿಕರ ಪೈಕಿ ನದಿ ನೀರಿನಲ್ಲಿ ಕಾರ್ಯಾಚರಣೆ ನಡೆಸಿ ಇದುವರೆಗೆ 19 ಮೃತದೇಹಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಯಾಣಿಕರಿದ್ದ ಅಮೆರಿಕನ್ ಏರ್‌ಲೈನ್ಸ್ 5342 ಫ್ಲೈಟ್, ಕೆನಡಾದ ನಿರ್ಮಿತ ಬೊಂಬಾರ್ಡಿಯರ್ CRJ-701 ಅವಳಿ ಎಂಜಿನ್ ಜೆಟ್ ಆಗಿದೆ. ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ಸೇನಾ ಹೆಲಿಕಾಪ್ಟರ್ಗೆ ಡಿಕ್ಕಿಯಾಗಿ ಪೊಟೊಮ್ಯಾಕ್ ನದಿಗೆ ಬಿದ್ದಿದೆ.
Leave a Comment